ಕಾರು ಲಾಕ್ ಮಾಡ್ಕೊಂಡು ಇಡೀ ರಾತ್ರಿ ಮಲಗಿದ್ದ ಬೆಳಗಾವಿ ಮಹಿಳೆ! ಮುಂದೇನಾಯ್ತು?
ಧಾರವಾಡ: ಬೆಳಗಾವಿ ಮೂಲದ ಮಹಿಳೆಯೊಬ್ಬರು ನಗರದ ಸಿಬಿಟಿ ಬಳಿ ಕಾರ್ ಲಾಕ್ ಮಾಡಿಕೊಂಡು ಇಡೀ ರಾತ್ರಿ ಗಾಢ ನಿದ್ರೆಗೆ ಜಾರಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು. ಮಹಿಳೆ ಸಾವಿಗೀಡಾಗಿದ್ದಾಳೆ ಅನ್ನೋ ವದಂತಿಯೂ ಹಬ್ಬಿತ್ತು. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹರಸಾಹಸಪಟ್ಟು ಡೋರ್ ಲಾಕ್ ತೆಗೆದರೂ ಮಹಿಳೆ ನಿದ್ದೆಯಿಂದ ಎಚ್ಚೆತ್ತಿಲ್ಲ. ಇದರಿಂದ ಪೊಲೀಸರೂ ಸಹ ಗಲಿಬಿಲಿಗೊಂಡರು. ತಡಮಾಡದೆ, ಆ್ಯಂಬುಲೆನ್ಸ್ ಕರೆಸಿ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆ ಮಹಿಳೆ ಬೆಳಗಾವಿ ಜಿಲ್ಲೆಯ ಸವದತ್ತಿ ಮೂಲದ ಮಹಾದೇವಿ ಹಡಗನಾಳ ಎಂದು ತಿಳಿದುಬಂದಿದೆ. […]
ಧಾರವಾಡ: ಬೆಳಗಾವಿ ಮೂಲದ ಮಹಿಳೆಯೊಬ್ಬರು ನಗರದ ಸಿಬಿಟಿ ಬಳಿ ಕಾರ್ ಲಾಕ್ ಮಾಡಿಕೊಂಡು ಇಡೀ ರಾತ್ರಿ ಗಾಢ ನಿದ್ರೆಗೆ ಜಾರಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು. ಮಹಿಳೆ ಸಾವಿಗೀಡಾಗಿದ್ದಾಳೆ ಅನ್ನೋ ವದಂತಿಯೂ ಹಬ್ಬಿತ್ತು.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹರಸಾಹಸಪಟ್ಟು ಡೋರ್ ಲಾಕ್ ತೆಗೆದರೂ ಮಹಿಳೆ ನಿದ್ದೆಯಿಂದ ಎಚ್ಚೆತ್ತಿಲ್ಲ. ಇದರಿಂದ ಪೊಲೀಸರೂ ಸಹ ಗಲಿಬಿಲಿಗೊಂಡರು. ತಡಮಾಡದೆ, ಆ್ಯಂಬುಲೆನ್ಸ್ ಕರೆಸಿ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಆ ಮಹಿಳೆ ಬೆಳಗಾವಿ ಜಿಲ್ಲೆಯ ಸವದತ್ತಿ ಮೂಲದ ಮಹಾದೇವಿ ಹಡಗನಾಳ ಎಂದು ತಿಳಿದುಬಂದಿದೆ. ನಿನ್ನೆ ಸಂಜೆ ಕಾರಿನಲ್ಲಿ ಬಂದಿದ್ದ ಮಹಿಳೆ, ರಾತ್ರಿಯಾಗುತ್ತಿದ್ದಂತೆ ಕಾರ್ ಲಾಕ್ ಮಾಡಿ ಮಲಗಿದ್ದರು. ಕಾರಿನ ಹಿಂದಿನ ಸೀಟಲ್ಲಿ ಗಾಢ ನಿದ್ರೆಗೆ ಜಾರಿದ್ದರು. ಹೆಚ್ಚಿನ ವಿವರ ಮಹಿಳೆಯ ಚೇತರಿಕೆ ಬಳಿಕಬಷ್ಟೇ ತಿಳಿದು ಬರಬೇಕಿದೆ.
Published On - 12:39 pm, Thu, 30 January 20