ಮಂಗಳೂರು: ನಗರದ ಕೈಕಂಬ ಬಳಿಯ ಕಂದಾವರದಲ್ಲಿ ನಿನ್ನೆ ರಾತ್ರಿ ವ್ಯಕ್ತಿ ಮೇಲೆ ತಲ್ವಾರ್ ದಾಳಿಯಾಗಿರುವ ಘಟನೆ ವರದಿಯಾಗಿದೆ. ಅಬ್ದುಲ್ ಅಜೀಜ್ ಎಂಬುವವರ ಮೇಲೆ ಇಬ್ಬರಿಂದ ತಲ್ವಾರ್ ಅಟ್ಯಾಕ್ ಆಗಿದೆ.
ತಲ್ವಾರ್ ಅಟ್ಯಾಕ್ನ ಸಂಪೂರ್ಣ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಜೀಜ್ ಮೇಲೆ ಹಲ್ಲೆಮಾಡಿದ ಕಿಡಿಗೇಡಿಗಳು ಘಟನೆ ಬಳಿಕ ಅಲ್ಲಿಂದ ಕಾಲ್ಕಿತ್ತಿರಿವುದು ಕಂಡುಬಂದಿದೆ.