ಮಾಜಿ ಸಚಿವನ ಪುತ್ರನಿಂದ ಲಾಭ ಪೆಡಯಲು.. ದರ್ಶನ್‌ಗೆ ಮತ್ತೇರಿಸ್ತಿದ್ದ Drug ಪೆಡ್ಲರ್ಸ್!
ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿ ಬಂಧನ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ವೇಳೆ ಸಿಸಿಬಿ ಅಧಿಕಾರಿಗಳಿಗೆ ಸ್ಫೋಟಕ ಮಾಹಿತಿ ಸಿಕ್ಕಿದೆ. ದರ್ಶನ್‌ಗೆ ಮತ್ತೇರಿಸಿ ಗ್ಯಾಂಗ್ ಲಾಭವನ್ನು ಪಡೆಯುತ್ತಿದ್ದರಂತೆ. ಡ್ರಗ್ಸ್ ದಂಧೆ, ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಬಳಕೆ ಮಾಡಿಕೊಳ್ಳುತಿದ್ರು ಎಂಬ ಶಂಕೆ ವ್ಯಕ್ತವಾಗಿದೆ. ಬೆಂಗಳೂರಿನ ದರ್ಶನ್ ಲಮಾಣಿಗೆ ಸೇರಿದ ಸಂಜಯನಗರದ ಅಪಾರ್ಟ್ಮೆಂಟ್ ಫ್ಲಾಟ್ನಲ್ಲಿ ಮಿಡ್ ನೈಟ್ ಪಾರ್ಟಿ ಮಾಡಲಾಗುತ್ತಿತ್ತು. ದರ್ಶನ್ ತಂದೆ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಹಾಗೂ ಪ್ರಭಾವಿ ವ್ಯಕ್ತಿಯಾಗಿದ್ದರಿಂದ […]

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿ ಬಂಧನ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ವೇಳೆ ಸಿಸಿಬಿ ಅಧಿಕಾರಿಗಳಿಗೆ ಸ್ಫೋಟಕ ಮಾಹಿತಿ ಸಿಕ್ಕಿದೆ. ದರ್ಶನ್‌ಗೆ ಮತ್ತೇರಿಸಿ ಗ್ಯಾಂಗ್ ಲಾಭವನ್ನು ಪಡೆಯುತ್ತಿದ್ದರಂತೆ. ಡ್ರಗ್ಸ್ ದಂಧೆ, ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಬಳಕೆ ಮಾಡಿಕೊಳ್ಳುತಿದ್ರು ಎಂಬ ಶಂಕೆ ವ್ಯಕ್ತವಾಗಿದೆ.
ಬೆಂಗಳೂರಿನ ದರ್ಶನ್ ಲಮಾಣಿಗೆ ಸೇರಿದ ಸಂಜಯನಗರದ ಅಪಾರ್ಟ್ಮೆಂಟ್ ಫ್ಲಾಟ್ನಲ್ಲಿ ಮಿಡ್ ನೈಟ್ ಪಾರ್ಟಿ ಮಾಡಲಾಗುತ್ತಿತ್ತು. ದರ್ಶನ್ ತಂದೆ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಹಾಗೂ ಪ್ರಭಾವಿ ವ್ಯಕ್ತಿಯಾಗಿದ್ದರಿಂದ ದರ್ಶನ್ ಜೊತೆ ಸ್ನೇಹ ಮಾಡಿ ಡ್ರಗ್ಸ್ ನಶೆ ಏರಿಸಿ ಈ ಗ್ಯಾಂಗ್ ಲಾಭಕ್ಕೆ ಬಳಸಿಕೊಳ್ತಿದ್ರಂತೆ.
ದರ್ಶನ್ ಜತೆ ಒಟ್ಟು 9 ಜನರ ಗ್ಯಾಂಗ್ ಬಂಧಿಸಲಾಗಿತ್ತು. 9 ಆರೋಪಿಗಳ ಪೈಕಿ ನಾಲ್ವರು ದರ್ಶನ್‌ಗೆ ಸ್ನೇಹಿತರಾಗಿದ್ದರು. ದರ್ಶನ್‌ಗೆ ಮತ್ತೇರಿಸಿ ವ್ಯವಹಾರಕ್ಕೆ ಬಳಸಿಕೊಳ್ತಿದ್ದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ದರ್ಶನ್ ಡ್ರಗ್ಸ್ ಸೇವನೆ ಆಯಾಮದಲ್ಲಿ ತನಿಖೆ ನಡೆಯುತ್ತಿದೆ. ಡ್ರಗ್ಸ್ ಪ್ರಕರಣದಿಂದ ತಪ್ಪಿಸಿಕೊಳ್ಳಲು ದರ್ಶನ್ ಅಂಡ್ ಟೀಂ ಗೋವಾಗೆ ಪರಾರಿಯಾಗಿ ಅಲ್ಲಿನ ಐಷಾರಾಮಿ ಹೋಟೆಲ್‌ನಲ್ಲಿ ತಂಗಿದ್ದರು. ಪ್ರತಿ ದಿನ 1 ಲಕ್ಷ ಹಣ ಖರ್ಚು ಮಾಡ್ತಿದ್ರಂತೆ.
ಇದನ್ನೂ ಓದಿ: Drugs ಕೇಸ್: ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರನ ಬಂಧನವಾಗಿದ್ದು ಹೇಗೆ.. ಗೋವಾ ಲಿಂಕ್ ಏನು?