ಮಂಗಳೂರಲ್ಲಿ ವ್ಯಕ್ತಿ ಮೇಲೆ ತಲ್ವಾರ್ ದಾಳಿ: ಮಸೀದಿ ವಿಚಾರವಾಗಿ ನಡೀತಾ ಹಲ್ಲೆ?
ಮಂಗಳೂರು: ನಗರದ ಕೈಕಂಬ ಬಳಿಯ ಕಂದಾವರದಲ್ಲಿ ನಿನ್ನೆ ರಾತ್ರಿ ವ್ಯಕ್ತಿ ಮೇಲೆ ತಲ್ವಾರ್ ದಾಳಿಯಾಗಿರುವ ಘಟನೆ ವರದಿಯಾಗಿದೆ. ಅಬ್ದುಲ್ ಅಜೀಜ್ ಎಂಬುವವರ ಮೇಲೆ ಇಬ್ಬರಿಂದ ತಲ್ವಾರ್ ಅಟ್ಯಾಕ್ ಆಗಿದೆ. ಅದೃಷ್ಟವಶಾತ್, ಅಜೀಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ, ಮಂಗಳೂರಿನ ಆಸ್ಪತ್ರೆಯಲ್ಲಿ ಅಬ್ದುಲ್ ಅಜೀಜ್‌ಗೆ ಚಿಕಿತ್ಸೆ ಕೊಡಲಾಗುತ್ತಿದೆ. ಕಂದಾವರ ಮಸೀದಿ ವಿಚಾರವಾಗಿ ಅಬ್ದುಲ್ ಮೇಲೆ ದುಷ್ಕರ್ಮಿಗಳು ಹಲ್ಲೆಗೈದಿರುವ ಶಂಕೆ ವ್ಯಕ್ತವಾಗಿದೆ. ತಲ್ವಾರ್ ಅಟ್ಯಾಕ್ನ ಸಂಪೂರ್ಣ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಜೀಜ್ ಮೇಲೆ ಹಲ್ಲೆಮಾಡಿದ ಕಿಡಿಗೇಡಿಗಳು ಘಟನೆ ಬಳಿಕ ಅಲ್ಲಿಂದ […]

ಮಂಗಳೂರು: ನಗರದ ಕೈಕಂಬ ಬಳಿಯ ಕಂದಾವರದಲ್ಲಿ ನಿನ್ನೆ ರಾತ್ರಿ ವ್ಯಕ್ತಿ ಮೇಲೆ ತಲ್ವಾರ್ ದಾಳಿಯಾಗಿರುವ ಘಟನೆ ವರದಿಯಾಗಿದೆ. ಅಬ್ದುಲ್ ಅಜೀಜ್ ಎಂಬುವವರ ಮೇಲೆ ಇಬ್ಬರಿಂದ ತಲ್ವಾರ್ ಅಟ್ಯಾಕ್ ಆಗಿದೆ.
ಅದೃಷ್ಟವಶಾತ್, ಅಜೀಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ, ಮಂಗಳೂರಿನ ಆಸ್ಪತ್ರೆಯಲ್ಲಿ ಅಬ್ದುಲ್ ಅಜೀಜ್‌ಗೆ ಚಿಕಿತ್ಸೆ ಕೊಡಲಾಗುತ್ತಿದೆ. ಕಂದಾವರ ಮಸೀದಿ ವಿಚಾರವಾಗಿ ಅಬ್ದುಲ್ ಮೇಲೆ ದುಷ್ಕರ್ಮಿಗಳು ಹಲ್ಲೆಗೈದಿರುವ ಶಂಕೆ ವ್ಯಕ್ತವಾಗಿದೆ.
ತಲ್ವಾರ್ ಅಟ್ಯಾಕ್ನ ಸಂಪೂರ್ಣ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಜೀಜ್ ಮೇಲೆ ಹಲ್ಲೆಮಾಡಿದ ಕಿಡಿಗೇಡಿಗಳು ಘಟನೆ ಬಳಿಕ ಅಲ್ಲಿಂದ ಕಾಲ್ಕಿತ್ತಿರಿವುದು ಕಂಡುಬಂದಿದೆ.