ಅಸಭ್ಯ ವರ್ತನೆ: ಪ್ರಶ್ನಿಸಿದಕ್ಕೆ CCD ಮ್ಯಾನೇಜರ್​ಗೆ ಹತ್ತು ಹೊಲಿಗೆ ಹಾಕುವಂತೆ ಹಲ್ಲೆ ಮಾಡಿದ

ಬೆಂಗಳೂರು: ಕೆಫೆ ಕಾಫಿ ಡೇ ಮ್ಯಾನೇಜರ್ ಮೇಲೆ ವ್ಯಕ್ತಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಕಸ್ತೂರಿ ನಗರದ ಕೆಫೆ ಕಾಫಿ ಡೆೇ ಯಲ್ಲಿ ನಡೆದಿದೆ. ಘಟನೆಯಲ್ಲಿ CCD ಮ್ಯಾನೇಜರ್ ನವೀನ್ ಕುಮಾರ್​ ಗಾಯಗೊಂಡಿದ್ದಾರೆ. ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಕಾಫಿ ಡೇಗೆ ಬಂದಿದ್ದ ವ್ಯಕ್ತಿ ವಾಶ್ ರೂಂ ಬಳಸುವ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದ. ಜೊತೆಗೆ ಅಸಭ್ಯವಾಗಿ ನಡೆದುಕೊಂಡಿದ್ದ ಹೀಗಾಗಿ ಈ ಬಗ್ಗೆ ವ್ಯಕ್ತಿಯನ್ನ ಪ್ರಶ್ನೆ ಮಾಡಿದ್ದಕ್ಕೆ ಮ್ಯಾನೆೇಜರ್ ಜೊತೆ ಗಲಾಟೆ ಮಾಡಿದ್ದಾನೆ. ನಂತರ ಮ್ಯಾನೇಜರ್‌ ತಲೆಗೆ […]

ಅಸಭ್ಯ ವರ್ತನೆ: ಪ್ರಶ್ನಿಸಿದಕ್ಕೆ CCD ಮ್ಯಾನೇಜರ್​ಗೆ ಹತ್ತು ಹೊಲಿಗೆ ಹಾಕುವಂತೆ ಹಲ್ಲೆ ಮಾಡಿದ
ಆಯೇಷಾ ಬಾನು

Updated on: Nov 24, 2020 | 7:54 AM

ಬೆಂಗಳೂರು: ಕೆಫೆ ಕಾಫಿ ಡೇ ಮ್ಯಾನೇಜರ್ ಮೇಲೆ ವ್ಯಕ್ತಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಕಸ್ತೂರಿ ನಗರದ ಕೆಫೆ ಕಾಫಿ ಡೆೇ ಯಲ್ಲಿ ನಡೆದಿದೆ. ಘಟನೆಯಲ್ಲಿ CCD ಮ್ಯಾನೇಜರ್ ನವೀನ್ ಕುಮಾರ್​ ಗಾಯಗೊಂಡಿದ್ದಾರೆ.

ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಕಾಫಿ ಡೇಗೆ ಬಂದಿದ್ದ ವ್ಯಕ್ತಿ ವಾಶ್ ರೂಂ ಬಳಸುವ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದ. ಜೊತೆಗೆ ಅಸಭ್ಯವಾಗಿ ನಡೆದುಕೊಂಡಿದ್ದ ಹೀಗಾಗಿ ಈ ಬಗ್ಗೆ ವ್ಯಕ್ತಿಯನ್ನ ಪ್ರಶ್ನೆ ಮಾಡಿದ್ದಕ್ಕೆ ಮ್ಯಾನೆೇಜರ್ ಜೊತೆ ಗಲಾಟೆ ಮಾಡಿದ್ದಾನೆ. ನಂತರ ಮ್ಯಾನೇಜರ್‌ ತಲೆಗೆ ಹತ್ತು ಹೊಲಿಗೆ ಹಾಕುವಂತೆ ಹಲ್ಲೆ ಮಾಡಿದ್ದಾನೆ. ಗಾಯಗೊಂಡ ಮ್ಯಾನೇಜರ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Published On - 7:30 am, Tue, 24 November 20

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us