ಬೆಂಗಳೂರು: ರಾಜಧಾನಿಯಲ್ಲಿ ಮತ್ತೊಂದು ಭಯಾನಕ ಘಟನೆ ನಡೆದಿದೆ. ವ್ಯಕ್ತಿ ಫುಟ್ಪಾತ್ನಲ್ಲೇ ವಿಲವಿಲ ಒದ್ದಾಡಿ ಪ್ರಾಣಬಿಟ್ಟ ಘಟನೆ ನಗರದ ಪೀಣ್ಯ ಬಳಿ ನಡೆದಿದೆ. ರಾಜು(56) ಮೃತಪಟ್ಟ ವ್ಯಕ್ತಿ. ಮುಂಜಾನೆ 6 ಗಂಟೆಯ ಸುಮಾರಿಗೆ ಪೀಣ್ಯ ರಸ್ತೆ ಮೇಲೆ ನಡೆದುಕೊಂಡು ಹೋಗುವಾಗ ಈ ಘಟನೆ ನಡೆದಿದೆ. ಘಟನೆ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ನಂತರ ಪೀಣ್ಯ ಪೊಲೀಸರು ಮೃತನ ಗುರುತು ಪತ್ತೆ ಹಚ್ಚಿ ಕುಟುಂಬಸ್ಥರನ್ನ ಸ್ಥಳಕ್ಕೆ ಕರೆಸಿದ್ದಾರೆ. ಮೃತ ವ್ಯಕ್ತಿ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು. ಬೆಳಿಗ್ಗೆ ವಾಕಿಂಗ್ ಬಂದಾಗ ಕುಸಿದು ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮೃತನ ಶವ ಕೊಂಡೊಯ್ಯಲು ವಾಹನ ಸಿಗದೆ 6 ಗಂಟೆಗೂ ಹೆಚ್ಚು ಕಾಲ ಕಾದ ಬಳಿಕ ಆ್ಯಂಬುಲೆನ್ಸ್ ಬಂದಿದ್ದು ದೇಹವನ್ನು ಕೊಂಡೊಯ್ಯಲಾಗಿದೆ.
Published On - 2:12 pm, Wed, 8 July 20