ಕ್ವಾರಂಟೈನ್ ಅವಧಿ ಮುಗಿಸಿ ಮನೆ ಸೇರುವ ಮೊದಲೇ ವ್ಯಕ್ತಿ ಸಾವು!

| Updated By: ಆಯೇಷಾ ಬಾನು

Updated on: May 26, 2020 | 2:24 PM

ಕಲಬುರಗಿ: ಕ್ವಾರಂಟೈನ್ ಅವಧಿ ಮುಗಿಸಿ ಮನೆಗೆ ಹೋಗುತ್ತಿದ್ದ ವ್ಯಕ್ತಿ ಮನೆ ತಲುಪುವ ಮೊದಲೇ ಮೃತಪಟ್ಟಿರುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ. ಇಂದಿರಾ ನಗರದ ನಿವಾಸಿ ಚಂದ್ರಕಾಂತ್ ನಾಯಿಕೋಡಿ(32) ಮೃತ ವ್ಯಕ್ತಿ. ಕಲಬುರಗಿ ನಗರದಲ್ಲಿರುವ ಬಿಸಿಎಂ ಹಾಸ್ಟೆಲ್​ನಲ್ಲಿ ಚಂದ್ರಕಾಂತ್ ಕುಕ್ ಆಗಿದ್ದರು. ಕೊರೊನಾ ಸೋಂಕಿತನ ಸಂಪರ್ಕಕ್ಕೆ ಬಂದಿದ್ದರಿಂದ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಕಳೆದ 14 ದಿನಗಳಿಂದ ಚಂದ್ರಕಾಂತ್ ಕ್ವಾರಂಟೈನ್​ನಲ್ಲಿದ್ದರು. ನಿನ್ನೆ ಕ್ವಾರಂಟೈನ್ ಅವಧಿ ಮುಗಿದಿದ್ದರಿಂದ ಮನೆಗೆ ಹೋಗುವಂತೆ ಸಿಬ್ಬಂದಿ ತಿಳಿಸಿದ್ದರು. ನಿನ್ನೆ ಸಂಜೆ ಸಂಬಂಧಿ ಜೊತೆ ಬೈಕ್​ನಲ್ಲಿ ಮನೆಗೆ […]

ಕ್ವಾರಂಟೈನ್ ಅವಧಿ ಮುಗಿಸಿ ಮನೆ ಸೇರುವ ಮೊದಲೇ ವ್ಯಕ್ತಿ ಸಾವು!
Follow us on

ಕಲಬುರಗಿ: ಕ್ವಾರಂಟೈನ್ ಅವಧಿ ಮುಗಿಸಿ ಮನೆಗೆ ಹೋಗುತ್ತಿದ್ದ ವ್ಯಕ್ತಿ ಮನೆ ತಲುಪುವ ಮೊದಲೇ ಮೃತಪಟ್ಟಿರುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ. ಇಂದಿರಾ ನಗರದ ನಿವಾಸಿ ಚಂದ್ರಕಾಂತ್ ನಾಯಿಕೋಡಿ(32) ಮೃತ ವ್ಯಕ್ತಿ.

ಕಲಬುರಗಿ ನಗರದಲ್ಲಿರುವ ಬಿಸಿಎಂ ಹಾಸ್ಟೆಲ್​ನಲ್ಲಿ ಚಂದ್ರಕಾಂತ್ ಕುಕ್ ಆಗಿದ್ದರು. ಕೊರೊನಾ ಸೋಂಕಿತನ ಸಂಪರ್ಕಕ್ಕೆ ಬಂದಿದ್ದರಿಂದ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಕಳೆದ 14 ದಿನಗಳಿಂದ ಚಂದ್ರಕಾಂತ್ ಕ್ವಾರಂಟೈನ್​ನಲ್ಲಿದ್ದರು. ನಿನ್ನೆ ಕ್ವಾರಂಟೈನ್ ಅವಧಿ ಮುಗಿದಿದ್ದರಿಂದ ಮನೆಗೆ ಹೋಗುವಂತೆ ಸಿಬ್ಬಂದಿ ತಿಳಿಸಿದ್ದರು.

ನಿನ್ನೆ ಸಂಜೆ ಸಂಬಂಧಿ ಜೊತೆ ಬೈಕ್​ನಲ್ಲಿ ಮನೆಗೆ ಬರುವಾಗ ಅಸ್ವಸ್ಥಗೊಂಡಿದ್ದರು. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದ್ರೆ ನಿನ್ನೆ ಸಂಜೆಯೇ ಆಸ್ಪತ್ರೆಯಲ್ಲಿ ಚಂದ್ರಕಾಂತ್ ಮೃತಪಟ್ಟಿದ್ದಾರೆ. ಚಂದ್ರಕಾಂತ್ ಸಾವಿಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ.

Published On - 12:02 pm, Tue, 26 May 20