ಉಸಿರಾಟದ ಸಮಸ್ಯೆಯಿಂದ ಬಿಎಂಟಿಸಿ ಬಸ್ಸಿನಲ್ಲೇ ಕುಸಿದು ಬಿದ್ದ ವ್ಯಕ್ತಿ
ಬೆಂಗಳೂರು: ಬಿಎಂಟಿಸಿ ಬಸ್ಸಿನಲ್ಲಿ ತನ್ನ ಇಬ್ಬರು ಮಕ್ಕಳ ಜೊತೆ ಪ್ರಯಾಣ ಮಾಡುತ್ತಿದ್ದ ಸುಮಾರು 55 ವರ್ಷದ ವ್ಯಕ್ತಿಯೊಬ್ಬರು ಉಸಿರಾಟದ ಸಮಸ್ಯೆಯಿಂದ ಬಸ್ಸಿನಲ್ಲೇ ಕುಸಿದು ಬಿದ್ದ ಘಟನೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನಡೆದಿದೆ. ಪ್ರಜ್ಞೆ ಕಳೆದುಕೊಂಡಿದ್ದ ತಂದೆಯನ್ನ ಅವರ ಮಕ್ಕಳು ಹಾಗೂ ಬಿಎಂಟಿಸಿ ಸಿಬ್ಬಂದಿ ಬಸ್ಸಿನಿಂದ ಕೆಳಗೆ ಇಳಿಸಿದ್ದಾರೆ. ನಂತರ ಬಿಎಂಟಿಸಿ ಸಿಬ್ಬಂದಿ ಬಸ್ನಲ್ಲಿದ್ದ ಎಲ್ಲರಿಗೂ ಸ್ಯಾನಿಟೈಸ್ ಹಾಕಿ ಬಸ್ನ್ನು ಸ್ಯಾನಿಟೈಸ್ ಮಾಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಆದರೆ 2 ಗಂಟೆ ಕಾದರೂ ಸ್ಥಳಕ್ಕೆ ಆಂಬ್ಯುಲೆನ್ಸ್ ಬಂದಿಲ್ಲ. ಇದರಿಂದ […]
ಬೆಂಗಳೂರು: ಬಿಎಂಟಿಸಿ ಬಸ್ಸಿನಲ್ಲಿ ತನ್ನ ಇಬ್ಬರು ಮಕ್ಕಳ ಜೊತೆ ಪ್ರಯಾಣ ಮಾಡುತ್ತಿದ್ದ ಸುಮಾರು 55 ವರ್ಷದ ವ್ಯಕ್ತಿಯೊಬ್ಬರು ಉಸಿರಾಟದ ಸಮಸ್ಯೆಯಿಂದ ಬಸ್ಸಿನಲ್ಲೇ ಕುಸಿದು ಬಿದ್ದ ಘಟನೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನಡೆದಿದೆ.
ಪ್ರಜ್ಞೆ ಕಳೆದುಕೊಂಡಿದ್ದ ತಂದೆಯನ್ನ ಅವರ ಮಕ್ಕಳು ಹಾಗೂ ಬಿಎಂಟಿಸಿ ಸಿಬ್ಬಂದಿ ಬಸ್ಸಿನಿಂದ ಕೆಳಗೆ ಇಳಿಸಿದ್ದಾರೆ. ನಂತರ ಬಿಎಂಟಿಸಿ ಸಿಬ್ಬಂದಿ ಬಸ್ನಲ್ಲಿದ್ದ ಎಲ್ಲರಿಗೂ ಸ್ಯಾನಿಟೈಸ್ ಹಾಕಿ ಬಸ್ನ್ನು ಸ್ಯಾನಿಟೈಸ್ ಮಾಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಆದರೆ 2 ಗಂಟೆ ಕಾದರೂ ಸ್ಥಳಕ್ಕೆ ಆಂಬ್ಯುಲೆನ್ಸ್ ಬಂದಿಲ್ಲ. ಇದರಿಂದ ಕೋಪಗೊಂಡ ಮಗ ಪೊಲೀಸರ ಮೇಲೆ ಕೂಗಾಡಿದ್ದಾನೆ ನಂತರ ಕೆಲ ಹೊತ್ತು ಕಾದ ಮೇಲೆ ಸ್ಥಳಕ್ಕೆ ಆಂಬ್ಯುಲೆನ್ಸ್ ವಾಹನ ಬಂದಿದೆ. ಮಕ್ಕಳು ತನ್ನ ತಂದೆಯನ್ನ ಎತ್ತಿಕೊಂಡು ವಾಹನಕ್ಕೆ ಶಿಫ್ಟ್ ಮಾಡಿದ್ದಾರೆ. ಆ ಎಲ್ಲಾ ದೃಶ್ಯಗಳನ್ನ ಅಲ್ಲೇ ಇದ್ದ ಆಟೋ ಡ್ರೈವರ್ ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.