3 ದಿನಗಳ ಹಿಂದೆ ಕಾಣೆಯಾಗಿದ್ದ ಕಿರುಗಾವಲು ವ್ಯಕ್ತಿ.. ಕಾರಿನಲ್ಲಿ ಶವವಾಗಿ ಪತ್ತೆ

ಮಂಡ್ಯ: ಮೂರು ದಿನಗಳ ಹಿಂದೆ ಕಾರಿನಲ್ಲೇ ಪ್ರಾಣಬಿಟ್ಟ ವ್ಯಕ್ತಿಯೊಬ್ಬನ ಮೃತದೇಹ ಇಂದು ಜಿಲ್ಲೆಯ ಮಿಮ್ಸ್ ಆಸ್ಪತ್ರೆ ರಸ್ತೆಯಲ್ಲಿ ಪತ್ತೆಯಾಗಿದೆ. ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರಗಾವಲು ಗ್ರಾಮದ ನಿವಾಸಿ ಶಿವಕುಮಾರ್ (42) ಮೃತ ದುರ್ದೈವಿ. ಅನಾರೋಗ್ಯದಿಂದ ಕಾರಿನಲ್ಲೆ ಕಿರುಗಾವಲು ಗ್ರಾಮದ ವ್ಯಕ್ತಿ ಸಾವು ಅನಾರೋಗ್ಯದ ಸಮಸ್ಯೆ ಎದುರಾಗಿ ಶಿವಕುಮಾರ್​ ಕಾರಿನಲ್ಲೇ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಹಾಗಾಗಿ, ಕಳೆದ ಮೂರು ದಿನಗಳಿಂದ ಶಿವಕುಮಾರ್ ಮೃತದೇಹ ವಾಹನದಲ್ಲಿತ್ತು. ಇತ್ತ, ಶಿವಕುಮಾರ್ ಕಾಣೆಯಾಗಿದ್ದಾನೆಂದು ಆತನ ಕುಟುಂಬಸ್ಥರು ಕಿರುಗಾವಲು ಪೋಲಿಸ್ ಠಾಣೆಗೆ ದೂರು ಕೊಟ್ಟಿದ್ದರು. […]

3 ದಿನಗಳ ಹಿಂದೆ ಕಾಣೆಯಾಗಿದ್ದ ಕಿರುಗಾವಲು ವ್ಯಕ್ತಿ.. ಕಾರಿನಲ್ಲಿ ಶವವಾಗಿ ಪತ್ತೆ
Edited By:

Updated on: Nov 07, 2020 | 3:20 PM

ಮಂಡ್ಯ: ಮೂರು ದಿನಗಳ ಹಿಂದೆ ಕಾರಿನಲ್ಲೇ ಪ್ರಾಣಬಿಟ್ಟ ವ್ಯಕ್ತಿಯೊಬ್ಬನ ಮೃತದೇಹ ಇಂದು ಜಿಲ್ಲೆಯ ಮಿಮ್ಸ್ ಆಸ್ಪತ್ರೆ ರಸ್ತೆಯಲ್ಲಿ ಪತ್ತೆಯಾಗಿದೆ. ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರಗಾವಲು ಗ್ರಾಮದ ನಿವಾಸಿ ಶಿವಕುಮಾರ್ (42) ಮೃತ ದುರ್ದೈವಿ.

ಅನಾರೋಗ್ಯದಿಂದ ಕಾರಿನಲ್ಲೆ ಕಿರುಗಾವಲು ಗ್ರಾಮದ ವ್ಯಕ್ತಿ ಸಾವು
ಅನಾರೋಗ್ಯದ ಸಮಸ್ಯೆ ಎದುರಾಗಿ ಶಿವಕುಮಾರ್​ ಕಾರಿನಲ್ಲೇ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಹಾಗಾಗಿ, ಕಳೆದ ಮೂರು ದಿನಗಳಿಂದ ಶಿವಕುಮಾರ್ ಮೃತದೇಹ ವಾಹನದಲ್ಲಿತ್ತು. ಇತ್ತ, ಶಿವಕುಮಾರ್ ಕಾಣೆಯಾಗಿದ್ದಾನೆಂದು ಆತನ ಕುಟುಂಬಸ್ಥರು ಕಿರುಗಾವಲು ಪೋಲಿಸ್ ಠಾಣೆಗೆ ದೂರು ಕೊಟ್ಟಿದ್ದರು.

ಈ ನಡುವೆ, ಕಳೆದ 3 ದಿನದಿಂದ ಒಂದೇ ಜಾಗದಲ್ಲಿ‌‌ ನಿಂತಿದ್ದ ಕಾರನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಪೋಲಿಸರಿಗೆ ಪರಿಶೀಲನೆ ವೇಳೆ ಘಟನೆ ಬೆಳಕಿಗೆ ಬಂದಿದೆ.

Published On - 3:18 pm, Sat, 7 November 20