AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀವಾವಧಿ ಶಿಕ್ಷೆಯಲ್ಲಿದ್ದರೂ ರಹಸ್ಯವಾಗಿ ಹೊರಬಂದಿದ್ದ ರೇಪಿಸ್ಟ್ ಬಾಬಾ ರಾಮ್​ ರಹೀಮ್​!

ಸ್ವಘೋಷಿತ ದೇವಮಾನವ, ವಿವಾದಿತ ಡೇರಾ ಸಚ್​ ಸೌಧ ಬಾಬಾ ಗುರ್ಮಿತ್ ರಾಮ್​ ರಹೀಮ್ ತನ್ನ ಇಬ್ಬರು ಅನುಯಾಯಿಗಳ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ 20 ವರ್ಷಗಳ ಜೈಲುಶಿಕ್ಷೆ ಅನುಭವಿಸುತ್ತಿದ್ದಾನೆ. ಅನೇಕ ಬಾರಿ ಜಾಮೀನು ಕೋರಿ ಆತ ಸಲ್ಲಿಸಿದ್ದ ಅರ್ಜಿಯನ್ನು ನಾನಾ ನ್ಯಾಯಾಲಯಗಳು ತಿರಸ್ಕರಿಸುತ್ತಾ ಬಂದಿವೆ. ಹಾಗಾಗಿ ತಾನು ಎಷ್ಟೇ ಪ್ರಭಾವಿಯಾಗಿದ್ದರೂ, ಈ ಹಿಂದೆ ಎಷ್ಟೇ (ಕು)ಖ್ಯಾತಿಯ ಶಿಖರದಲ್ಲಿದ್ದರೂ ಗುರ್ಮಿತ್ ರಾಮ್​ ರಹೀಂಗೆ ಜೈಲಿನಿಂದ ಹೊರಬರಲಾಗುತ್ತಿಲ್ಲ. ಆದ್ರೆ ಕಳೆದ ತಿಂಗಳು ಗುರ್ಮಿತ್ ರಾಮ್​ ರಹೀಂನ ಪತ್ನಿ ಹರ್ಜಿತ್ ಕೌರ್ ಹರಿಯಾಣ […]

ಜೀವಾವಧಿ ಶಿಕ್ಷೆಯಲ್ಲಿದ್ದರೂ ರಹಸ್ಯವಾಗಿ ಹೊರಬಂದಿದ್ದ ರೇಪಿಸ್ಟ್ ಬಾಬಾ ರಾಮ್​ ರಹೀಮ್​!
ಸಾಧು ಶ್ರೀನಾಥ್​
|

Updated on: Nov 07, 2020 | 3:55 PM

Share

ಸ್ವಘೋಷಿತ ದೇವಮಾನವ, ವಿವಾದಿತ ಡೇರಾ ಸಚ್​ ಸೌಧ ಬಾಬಾ ಗುರ್ಮಿತ್ ರಾಮ್​ ರಹೀಮ್ ತನ್ನ ಇಬ್ಬರು ಅನುಯಾಯಿಗಳ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ 20 ವರ್ಷಗಳ ಜೈಲುಶಿಕ್ಷೆ ಅನುಭವಿಸುತ್ತಿದ್ದಾನೆ. ಅನೇಕ ಬಾರಿ ಜಾಮೀನು ಕೋರಿ ಆತ ಸಲ್ಲಿಸಿದ್ದ ಅರ್ಜಿಯನ್ನು ನಾನಾ ನ್ಯಾಯಾಲಯಗಳು ತಿರಸ್ಕರಿಸುತ್ತಾ ಬಂದಿವೆ. ಹಾಗಾಗಿ ತಾನು ಎಷ್ಟೇ ಪ್ರಭಾವಿಯಾಗಿದ್ದರೂ, ಈ ಹಿಂದೆ ಎಷ್ಟೇ (ಕು)ಖ್ಯಾತಿಯ ಶಿಖರದಲ್ಲಿದ್ದರೂ ಗುರ್ಮಿತ್ ರಾಮ್​ ರಹೀಂಗೆ ಜೈಲಿನಿಂದ ಹೊರಬರಲಾಗುತ್ತಿಲ್ಲ.

ಆದ್ರೆ ಕಳೆದ ತಿಂಗಳು ಗುರ್ಮಿತ್ ರಾಮ್​ ರಹೀಂನ ಪತ್ನಿ ಹರ್ಜಿತ್ ಕೌರ್ ಹರಿಯಾಣ ಸರ್ಕಾರಕ್ಕೆ ಮನವಿ ಸಲ್ಲಿಸಿ.. ಗುರ್ಮಿತ್​ನ ತಾಯಿ 85 ವರ್ಷ ನಸೀಬ್ ಕೌರ್ ಅನಾರೋಗ್ಯದಿಂದ ಬಳಲುತ್ತಿದ್ದು, ಮಗನನ್ನು ನೋಡಲು ಹಂಬಲಿಸುತ್ತಿದ್ದಾರೆ. ಗುರುಗ್ರಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ತನ್ನ ಪತಿ ಗುರ್ಮಿತ್​ಗೆ ಪರೋಲ್ ನೀಡಿ, ಕಳುಹಿಸಬೇಕು ಎಂದು ಕೋರಿದ್ದಳು. ಇದಕ್ಕೆ ಸ್ಪಂದಿಸಿದ ಹರಿಯಾಣದ  ಮನೋಹರ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಅಕ್ಟೋಬರ್ 24ರಂದು ಒಂದು ದಿನದ ಮಟ್ಟಿಗೆ ಪರೋಲ್​ ಮೇಲೆ ಬಿಗಿ ಭದ್ರತೆಯಲ್ಲಿ ಗುರ್ಮಿತ್​ನನ್ನು ಹೊರಬಿಟ್ಟಿತ್ತು.

54 ವರ್ಷದ ಗುರ್ಮಿತ್ ರಾಮ್​ ರಹೀಂ ಪ್ರಸ್ತುತ ರೋಹ್ಟಕ್​ನ ಸುನೇರಿಯಾ ಜೈಲಿನಲ್ಲಿ 20 ವರ್ಷಗಳ ಜೈಲುಶಿಕ್ಷೆ ಅನುಭವಿಸುತ್ತಿದ್ದಾನೆ. 2017ರ ಆಗಸ್ಟ್ ತಿಂಗಳಿಂದ ಗುರ್ಮಿತ್ ರಾಮ್​ ರಹೀಂ ಜೈಲುವಾಸ ಅನುಭವಿಸುತ್ತಿದ್ದಾನೆ. ಆಗಸ್ಟ್ 25ರಂದು ಗುರ್ಮಿತ್ ರಾಮ್​ ರಹೀಂನನ್ನು ಜೈಲುಶಿಕ್ಷೆಗೆ ಗುರಿಪಡಿಸಿದಾಗ ಹಿಂಸಾಚಾರ ಭುಗಿಲೆದ್ದು 41 ಮಂದಿ ಅಸುನೀಗಿದ್ದರು.

ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ