ಸಿಲಿಕಾನ್ ಸಿಟಿಯಲ್ಲಿ ಸಿಕ್ಕ ಸಿಕ್ಕವರಿಗೆ ಚಾಕು ಇರಿತ, ಯಾರು ಈ ಕಿರಾತಕ?
ಬೆಂಗಳೂರು: ರಾಜಧಾನಿಯಲ್ಲಿ ವ್ಯಕ್ತಿಯೊಬ್ಬ ಸಿಕ್ಕ ಸಿಕ್ಕವರ ಮೇಲೆ ಚಾಕುವಿನಿಂದ ಇರಿದು ದುಷ್ಕೃತ್ಯ ಎಸಗಿರುವ ಘಟನೆ ನಡೆದಿದೆ. ಘಟನೆಯಲ್ಲಿ ಮಾರಿ(35) ಎಂಬ ವ್ಯಕ್ತಿ ಮೃತಪಟ್ಟಿದ್ದು, ಮೂವರಿಗೆ ಗಾಯಗಳಾಗಿವೆ. ನಗರದಲ್ಲಿಂದು ಇಂತಹ ಭಯಾನಕ ಘಟನೆ ನಡೆದಿದೆ. ಗಣೇಶ್ ಎಂಬ ವ್ಯಕ್ತಿ ಏಕಾಏಕಿ ಸಿಕ್ಕಸಿಕ್ಕವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಗುರುತು, ಪರಿಚಯವಿಲ್ಲದವರ ಮೇಲೆ ತನ್ನ ಕೋಪ ತೀರಿಸಿಕೊಂಡಿದ್ದಾನೆ. ಬಾಳೆ ಮಂಡಿ ಸೇರಿದಂತೆ ಮೂರ್ನಾಲ್ಕು ಕಡೆ ಒಟ್ಟು ಎಂಟು ಮಂದಿಗೆ ಗಣೇಶ್ ಚಾಕು ಚುಚ್ಚಿದ್ದಾನೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, […]
ಬೆಂಗಳೂರು: ರಾಜಧಾನಿಯಲ್ಲಿ ವ್ಯಕ್ತಿಯೊಬ್ಬ ಸಿಕ್ಕ ಸಿಕ್ಕವರ ಮೇಲೆ ಚಾಕುವಿನಿಂದ ಇರಿದು ದುಷ್ಕೃತ್ಯ ಎಸಗಿರುವ ಘಟನೆ ನಡೆದಿದೆ. ಘಟನೆಯಲ್ಲಿ ಮಾರಿ(35) ಎಂಬ ವ್ಯಕ್ತಿ ಮೃತಪಟ್ಟಿದ್ದು, ಮೂವರಿಗೆ ಗಾಯಗಳಾಗಿವೆ.
ನಗರದಲ್ಲಿಂದು ಇಂತಹ ಭಯಾನಕ ಘಟನೆ ನಡೆದಿದೆ. ಗಣೇಶ್ ಎಂಬ ವ್ಯಕ್ತಿ ಏಕಾಏಕಿ ಸಿಕ್ಕಸಿಕ್ಕವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಗುರುತು, ಪರಿಚಯವಿಲ್ಲದವರ ಮೇಲೆ ತನ್ನ ಕೋಪ ತೀರಿಸಿಕೊಂಡಿದ್ದಾನೆ. ಬಾಳೆ ಮಂಡಿ ಸೇರಿದಂತೆ ಮೂರ್ನಾಲ್ಕು ಕಡೆ ಒಟ್ಟು ಎಂಟು ಮಂದಿಗೆ ಗಣೇಶ್ ಚಾಕು ಚುಚ್ಚಿದ್ದಾನೆ.
ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಓರ್ವ ಮೃತಪಟ್ಟಿದ್ದಾನೆ. ಸದ್ಯ ಗಣೇಶನ ದುಷ್ಕೃತ್ಯ ನೋಡಿದ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದು, ಕಾಟನ್‌ಪೇಟೆ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿ ಯಾಕೆ ಈ ರೀತಿ ಮಾಡಿದ ಎಂಬುವುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.