ಗದಗ: ಚೂರಿ ಇರಿತ ಹಾಗೂ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲು ಬಂದಿದ್ದ ಪೊಲೀಸರ ಬೈಕಿಗೇ ಬೆಂಕಿ ಹಚ್ಚಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ ಆರೋಪಿ ಕೊರೊನಾ ಸೋಂಕಿನಿಂದ ಸಾವನಪ್ಪಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ಗದಗ ಜಿಲ್ಲೆಯ ನಾರಾಯಣಪುರ ಗ್ರಾಮದ ಸಂತೋಷ್ ಕೊರೊನಾ ಸೋಂಕಿಗಗೆ ಬಲಿಯಾಗಿರುವ ಆರೋಪಿಯಾಗಿದ್ದು, ಚೂರಿ ಇರಿತ ಹಾಗೂ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 6 ರಂದು ಗದಗದ ಶಹರ ಪೊಲೀಸರು ನಾರಾಯಣಪುರ ಗ್ರಾಮಕ್ಕೆ ಅರೆಸ್ಟ್ ಮಾಡಲು ಬಂದಿದ್ದ ಪೊಲೀಸರಿಗೆ ಕೈಗೆ ಸಿಗದಂತೆ ಹೊಲದ ತುಂಬೆಲ್ಲಾ ಓಡಾಡಿ ಗ್ರಾಮಕ್ಕೆ ಬಂದಿದ್ದಾನೆ.
ಆಗ ಅರೆಸ್ಟ್ ಮಾಡೋಕೆ ಬಂದಿದ್ದ ಪೊಲೀಸರ ಬೈಕ್ ಕಾಣಿಸಿವೆ. ಈ ನಟೋರಿಯಸ್ ಪೊಲೀಸರ ಬೈಕ್ ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ. ನಂತರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ರಿಂದ ಆಗಸ್ಟ್ 8 ರಂದು ಗ್ರಾಮೀಣ ಪೊಲೀಸರು ಹರಸಹಾಸ ಪಟ್ಟು ಬಂಧಿಸಿದ್ದಾರೆ.
ಆಗಸ್ಟ್ 7ರಂದು ಸಂತೋಷವನ್ನು ಬಂಧಿಸಿದ್ದ ಪೊಲೀಸರು ಆತನನ್ನು ನ್ಯಾಯಾಲಕ್ಕೆ ಒಪ್ಪಿಸುವ ಮುನ್ನವೇ ಕೋವಿಡ್ ಟೆಸ್ಟ್ ಮಾಡಿಸಿದ್ದರು. ಟೆಸ್ಟ್ನಲ್ಲಿ ವರದಿ ಪಾಸಿಟಿವ್ ಬಂದಿದ್ದರಿಂದ ಆತನನ್ನು ಗದಗದ ಜಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಸೇರಿಸಲಾಗಿತ್ತು.
ಆದರೆ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸಂತೋಷ್, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಆರೋಪಿ ಸಾವನ್ನಪ್ಪಿದ್ದರಿಂದ ಆತನನ್ನು ಬಂಧಿಸಿದ್ದ ಪೊಲೀಸರಿಗೆ ಕೊರೊನಾ ಆತಂಕ ಶುರುವಾಗಿದೆ.