ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೀದಾ ಹೋಗಿದ್ದೆಲ್ಲಿಗೆ?
ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕಿನ ಮಧ್ಯೆ ಹಠ ತೊಟ್ಟವರಂತೆ SSLC ಪರೀಕ್ಷೆ ಬರೆಯಿಸಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಫಲಿತಾಂಶವನ್ನೂ ಖುದ್ದು ಅವರೇ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿ, ಸಮಾಧಾನದ ನಿಟ್ಟುಸಿರುಬಿಟ್ಟರು. ಸಚಿವರಾಗಿ ಸುರೇಶ ಕುಮಾರ್ ಪಟ್ಟ ಶ್ರಮಕ್ಕೆ ಎಲ್ಲೆಡೆಯಿಂದ ಇದೀಗ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ. ‘ಯಾವೊಬ್ಬ ವಿದ್ಯಾರ್ಥಿಯೂ ಆತಂಕ ಎದುರಿಸದೇ, ಈ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಪ್ಪಾ ಭಗವಂತಾ!’ ಎಂದು ಸಚಿವ ಸುರೇಶ ಕುಮಾರ್ ಅದ್ಯಾವ ದೇವರಿಗೆ ಹರಕೆ ಹೊತ್ತಿದ್ದರೋ ಗೊತ್ತಿಲ್ಲ. ಆದ್ರೆ ಇವತ್ತು ಸಂಜೆ ಫಲಿತಾಂಶ ಪ್ರಕಟಿಸಿ, […]
ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕಿನ ಮಧ್ಯೆ ಹಠ ತೊಟ್ಟವರಂತೆ SSLC ಪರೀಕ್ಷೆ ಬರೆಯಿಸಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಫಲಿತಾಂಶವನ್ನೂ ಖುದ್ದು ಅವರೇ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿ, ಸಮಾಧಾನದ ನಿಟ್ಟುಸಿರುಬಿಟ್ಟರು. ಸಚಿವರಾಗಿ ಸುರೇಶ ಕುಮಾರ್ ಪಟ್ಟ ಶ್ರಮಕ್ಕೆ ಎಲ್ಲೆಡೆಯಿಂದ ಇದೀಗ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ.
‘ಯಾವೊಬ್ಬ ವಿದ್ಯಾರ್ಥಿಯೂ ಆತಂಕ ಎದುರಿಸದೇ, ಈ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಪ್ಪಾ ಭಗವಂತಾ!’ ಎಂದು ಸಚಿವ ಸುರೇಶ ಕುಮಾರ್ ಅದ್ಯಾವ ದೇವರಿಗೆ ಹರಕೆ ಹೊತ್ತಿದ್ದರೋ ಗೊತ್ತಿಲ್ಲ. ಆದ್ರೆ ಇವತ್ತು ಸಂಜೆ ಫಲಿತಾಂಶ ಪ್ರಕಟಿಸಿ, ಭುಜದ ಮೇಲಿನ ಭಾರ ಇಳಿದವರಂತೆ ನಿರಾಳವಾಗಿ, ಕೋಲಾರ ಜಿಲ್ಲೆಯ ಮುಳಬಾಗಿಲು ಕಡೆಗೆ ಹೊರಟಿದ್ದಾರೆ.
ಅಲ್ಲಿ ಇತಿಹಾಸ ಪ್ರಸಿದ್ಧ ಕುರುಡುಮಲೆ ಗಣೇಶ ಮಂದಿರಕ್ಕೆ ದಂಪತಿ ಸಮೇತ ತೆರಳಿದ್ದಾರೆ. ದೇವರಿಗೆ ಕೈಮುಗಿಯುತ್ತಾ ‘ವಿಘ್ನ ನಿವಾರಕ ವಿನಾಯಕ, ಏನಪ್ಪಾ ನಿನ್ನ ಲೀಲೆ? ಎಂತೆಂಥಾ ಸಂಕಷ್ಟಗಳು ಎದುರಾದವು. ಅದನ್ನೆಲ್ಲ ಹೂ ಎತ್ತಿ ಪಕ್ಕಕ್ಕಿಟ್ಟಷ್ಟು ಸಲೀಸಾಗಿ ದೂರ ಮಾಡಿಬಿಟ್ಟೆಯಲ್ಲಪ್ಪಾ! ನಿಜಕ್ಕೂ ನೀನು ಗ್ರೇಟ್!!!’ ಎಂದು ಗಣಪನಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ಬಂದಿದ್ದಾರೆ.
‘ಬಹು ನಿರೀಕ್ಷಿತ SSLC ಫಲಿತಾಂಶ ಪ್ರಕಟವಾಯಿತು. ನನ್ನ ಮನಸ್ಸು ನಿರಾಳವಾಯಿತು. ಕುರುಡುಮಲೆ ವಿನಾಯಕ ಮಂದಿರಕ್ಕೆ ಬಂದು ಭಗವಂತನಿಗೆ ಶರಣಾದೆ’ ಎಂದು ದೇವಸ್ಥಾನದ ಬಳಿ ಸಚಿವ ಸುರೇಶ್ ಕುಮಾರ್ ತಿಳಿಸಿದರು. ಆಗ ಪಕ್ಕದಲ್ಲೇ ಇದ್ದ ಅವರ ಪತ್ನಿಯ ಕಣ್ಣಂಚಿನಲ್ಲಿ ಧನ್ಯತಾ ಭಾವ ಮಿಂಚಾಗಿ ಹೊಳೆಯುತ್ತಿತ್ತು!
Published On - 8:18 pm, Mon, 10 August 20