ಶಿಕ್ಷಣ ಸಚಿವರನ್ನು ಪ್ರಶಂಸಿದ ವೈದ್ಯಕೀಯ ಶಿಕ್ಷಣ ಸಚಿವ!
ಕೊರೊನಾ ಪಿಡುಗಿನಿಂದಾಗಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಅತೀವ ಆತಂಕದಲ್ದಿದ್ದರೂ ಯಶಸ್ವೀಯಾಗಿ ಪರೀಕ್ಷೆಗಳನ್ನು ನಡೆಸಿದ್ದಲ್ಲದೆ ಅಲ್ಪಾವಧಿಯಲ್ಲಿ ಫಲಿತಾಂಶವನ್ನು ಸಹ ಪ್ರಕಟಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಕೊಂಡಾಡುತ್ತಾ ಅಭಿನಂದಿಸಿದ್ದಾರೆ. “ಹಾಗೆ ನೋಡಿದರೆ ಪರೀಕ್ಷೆ ನಡೆಸುವುದು ಬೇಡವೇ ಬೇಡ ಎಂದು ಪೋಷಕರು ಹೇಳಿದ್ದರು. ನೆರೆ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಪರೀಕ್ಷೆಗಳನ್ನು ರದ್ದು ಮಾಡಲಾಯಿತು. ಆದರೆ, ಸುರೇಶ್ ಕುಮಾರ್ ಎಲ್ಲರನ್ನೂ ವಿಶ್ವಾಸಕ್ಕೆ […]

ಕೊರೊನಾ ಪಿಡುಗಿನಿಂದಾಗಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಅತೀವ ಆತಂಕದಲ್ದಿದ್ದರೂ ಯಶಸ್ವೀಯಾಗಿ ಪರೀಕ್ಷೆಗಳನ್ನು ನಡೆಸಿದ್ದಲ್ಲದೆ ಅಲ್ಪಾವಧಿಯಲ್ಲಿ ಫಲಿತಾಂಶವನ್ನು ಸಹ ಪ್ರಕಟಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಕೊಂಡಾಡುತ್ತಾ ಅಭಿನಂದಿಸಿದ್ದಾರೆ.
“ಹಾಗೆ ನೋಡಿದರೆ ಪರೀಕ್ಷೆ ನಡೆಸುವುದು ಬೇಡವೇ ಬೇಡ ಎಂದು ಪೋಷಕರು ಹೇಳಿದ್ದರು. ನೆರೆ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಪರೀಕ್ಷೆಗಳನ್ನು ರದ್ದು ಮಾಡಲಾಯಿತು. ಆದರೆ, ಸುರೇಶ್ ಕುಮಾರ್ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅತಿ ದೊಡ್ಡ ಸವಾಲಾಗಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ಅತ್ಯಂತ ಯಶಸ್ವೀಯಾಗಿ ಮತ್ತು ಸುಸೂತ್ರವಾಗಿ ಪೂರೈಸಿದರು,” ಎಂದಿದ್ದಾರೆ ಸುಧಾಕರ್.
ಶಿಕ್ಷಣ ಇಲಾಖೆ ಮತ್ತು ಸಚಿವ ಸುರೇಶ್ ಕುಮಾರ್ ಮಹತ್ಸಾಧನೆ ಮಾಡಿದ್ದಾರೆ. ಅವರಿಗೂ, ಮತ್ತು ಅವರೊಂದಿಗೆ ಶ್ರಮಿಸಿದ ಸಿಬ್ಬಂದಿ ವರ್ಗಕ್ಕೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸುಧಾಕರ್ ಹೇಳಿದ್ದಾರೆ.