
ಮಂಡ್ಯ: ಇಂದು ರಾಜ್ಯಾದ್ಯಂತ ಸಂಡೇ ಲಾಕ್ಡೌನ್ ಆಗಿದೆ. ಈ ಹಿನ್ನೆಲೆಯಲ್ಲಿ ಇಡೀ ಕರುನಾಡು ಸ್ತಬ್ಧವಾಗಿದೆ. ಆದರೆ ಸರ್ಕಾರದ ಆದೇಶ ಮೀರಿ ಮೇಲುಕೋಟೆಯಲ್ಲಿಂದು ಕೃಷ್ಣರಾಜಮುಡಿ ಬ್ರಹ್ಮೋತ್ಸವ ನಡೆಯುತ್ತಿದೆ.
ವಜ್ರಾಂಗಿ ಆಭರಣ ಕಳವು ವಿಚಾರ ಕೋರ್ಟ್‌ನಲ್ಲಿದೆ. ಹೀಗಿದ್ರೂ ಒಂದು ದಿನ ಮುಂಚಿತವಾಗಿ ಕಿರೀಟ ಹಸ್ತಾಂತರಿಸಲಾಗಿದೆ. ಇಷ್ಟು ವರ್ಷ ಉತ್ಸವದ ದಿನ ಮಾತ್ರ ಕಿರೀಟ ನೀಡಲಾಗುತ್ತಿತ್ತು. ಆದ್ರೆ ಸಂಡೇ ಲಾಕ್ಡೌನ್ ಹಿನ್ನೆಲೆಯಲ್ಲಿ ಒಂದು ದಿನ ಮುಂಚೆಯೇ ನೀಡಲಾಗಿದೆ. ಆದ್ರೆ ಬ್ರಹ್ಮೋತ್ಸವವನ್ನು ಎಲ್ಲ ರೀತಿಯ ನಿಯಮಗಳನ್ನು ಪಾಲಿಸಿ ದೇವಾಲಯದ ಆವರಣದಲ್ಲೇ ಮಾಡಲಾಗುತ್ತೆ ಎಂದಿದ್ದಾರೆ. ನೂರಾರು ಜನ ಬ್ರಹ್ಮೋತ್ಸವದಲ್ಲಿ ಸೇರಿದರೆ ಸಾಮಾಜಿಕ ಅಂತರ ಕಾಪಾಡುವುದು ಅಸಾಧ್ಯವಾಗಬಹುದು ಎಂಬುವುದು ಕೆಲವರ ಅಭಿಪ್ರಾಯ.
Published On - 8:20 am, Sun, 12 July 20