ಅಮೆರಿಕದಲ್ಲಿ ಸಾವಿನ ಸಂಖ್ಯೆ 1.3 ಲಕ್ಷ: ಕೊನೆಗೂ MASK ಧರಿಸಿದ ದೊಡ್ಡಣ್ಣ!
ವಾಷಿಂಗ್ಟನ್ ಡಿಸಿ: ಅಮೆರಿಕದಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸ ಬೇರೆ ದೇಶಗಳಿಗಿಂತ ಹೆಚ್ಚಿದೆ. ಇಲ್ಲಿ ಕೇವಲ 24 ಗಂಟೆಯಲ್ಲಿ 66,528 ಜನರಿಗೆ ಕೊರೊನಾ ಸೋಂಕು ತಗುಲಿದೆ. ಒಟ್ಟು 33 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. 1,37,403 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಇಷ್ಟೆಲ್ಲಾ ಆದ್ರೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ಮಾಸ್ಕ್ ಹಾಕದೇ ಓಡಾಡುತ್ತಿದ್ದರು. ಸಭೆಗಳಲ್ಲಿ ಭಾಗಿಯಾಗುತ್ತಿದ್ದರು. ಇವರ ಈ ನಡೆಗೆ ಬಹಳಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು. ಆದರೆ ಈಗ ಅವರಿಗೆ ಯಾವ ದೇವರು ಬುದ್ಧಿ ಕೊಡ್ನೋ […]
ವಾಷಿಂಗ್ಟನ್ ಡಿಸಿ: ಅಮೆರಿಕದಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸ ಬೇರೆ ದೇಶಗಳಿಗಿಂತ ಹೆಚ್ಚಿದೆ. ಇಲ್ಲಿ ಕೇವಲ 24 ಗಂಟೆಯಲ್ಲಿ 66,528 ಜನರಿಗೆ ಕೊರೊನಾ ಸೋಂಕು ತಗುಲಿದೆ. ಒಟ್ಟು 33 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. 1,37,403 ಜನರು ಕೊರೊನಾಗೆ ಬಲಿಯಾಗಿದ್ದಾರೆ.
ಇಷ್ಟೆಲ್ಲಾ ಆದ್ರೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ಮಾಸ್ಕ್ ಹಾಕದೇ ಓಡಾಡುತ್ತಿದ್ದರು. ಸಭೆಗಳಲ್ಲಿ ಭಾಗಿಯಾಗುತ್ತಿದ್ದರು. ಇವರ ಈ ನಡೆಗೆ ಬಹಳಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು. ಆದರೆ ಈಗ ಅವರಿಗೆ ಯಾವ ದೇವರು ಬುದ್ಧಿ ಕೊಡ್ನೋ ಗೊತ್ತಿಲ್ಲ. ಮೊದಲ ಬಾರಿಗೆ ಮಾಸ್ಕ್ ಧರಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಮಾಸ್ಕ್ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಸೇನಾ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಅವರು ಡಾರ್ಕ್ ಕಲರ್ನ ಫೇಸ್ ಮಾಸ್ಕ್ ಧರಿಸಿದ್ರು. ಈ ವೇಳೆ ಮಾತನಾಡಿದ ಟ್ರಂಪ್ ಕೊರೊನಾ ವೈರಸ್ ಹರಡುತ್ತಿದೆ. ಅದಕ್ಕೆ ಮಾಸ್ಕ್ ಧರಿಸಬೇಕು. ಅದರಲ್ಲೂ ಆಸ್ಪತ್ರೆಗೆ ಭೇಟಿ ನೀಡುವ ವೇಳೆ ಮಾಸ್ಕ್ ಧರಿಸೋದು ಕಡ್ಡಾಯ ಎಂದಿದ್ದಾರೆ.
Published On - 9:29 am, Sun, 12 July 20