ಪವಾಡಗಳಿಗೆ ಹೆಸರಾಗಿದ್ದ ಕಾರ್ಕಳ್ಳಿಯ ಶ್ರೀಬಸವೇಶ್ವರ ದೇಗುಲದ ಬಸವ ಇನ್ನಿಲ್ಲ

|

Updated on: Apr 19, 2020 | 11:25 AM

ಮಂಡ್ಯ: ಹಲವು ಪವಾಡಗಳಿಗೆ ಹೆಸರಾಗಿದ್ದ ಮದ್ದೂರು ತಾಲೂಕಿನ ಕಾರ್ಕಳ್ಳಿಯ ಶ್ರೀಬಸವೇಶ್ವರ ದೇಗುಲದ ಬಸವ ಮೃತಪಟ್ಟಿದೆ. 3 ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದೇವರ ಬಸವ, ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ಸಾವನ್ನಪ್ಪಿದೆ. ಕಾರ್ಕಳ್ಳಿಯ ಬಸವ ಹಲವು ಪವಾಡಗಳಿಗೆ ರಾಜ್ಯಾದ್ಯಂತ ಹೆಸರುವಾಸಿಯಾಗಿತ್ತು. ಕೊರೊನಾ ಹಿನ್ನೆಲೆ ಮಂಡ್ಯದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ ಅನ್ನೋ ಕಾರಣ. ದೇವಾಲಯದ ಆಡಳಿತ ಮಂಡಳಿ ರಾತ್ರಿಯೇ ದೇವಾಲಯದ ಆವರಣದಲ್ಲೇ ಬಸವನ ಅಂತ್ಯಕ್ರಿಯೆ ನಡೆಸಿದೆ.

ಪವಾಡಗಳಿಗೆ ಹೆಸರಾಗಿದ್ದ ಕಾರ್ಕಳ್ಳಿಯ ಶ್ರೀಬಸವೇಶ್ವರ ದೇಗುಲದ ಬಸವ ಇನ್ನಿಲ್ಲ
Follow us on

ಮಂಡ್ಯ: ಹಲವು ಪವಾಡಗಳಿಗೆ ಹೆಸರಾಗಿದ್ದ ಮದ್ದೂರು ತಾಲೂಕಿನ ಕಾರ್ಕಳ್ಳಿಯ ಶ್ರೀಬಸವೇಶ್ವರ ದೇಗುಲದ ಬಸವ ಮೃತಪಟ್ಟಿದೆ. 3 ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದೇವರ ಬಸವ, ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ಸಾವನ್ನಪ್ಪಿದೆ.

ಕಾರ್ಕಳ್ಳಿಯ ಬಸವ ಹಲವು ಪವಾಡಗಳಿಗೆ ರಾಜ್ಯಾದ್ಯಂತ ಹೆಸರುವಾಸಿಯಾಗಿತ್ತು. ಕೊರೊನಾ ಹಿನ್ನೆಲೆ ಮಂಡ್ಯದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ ಅನ್ನೋ ಕಾರಣ. ದೇವಾಲಯದ ಆಡಳಿತ ಮಂಡಳಿ ರಾತ್ರಿಯೇ ದೇವಾಲಯದ ಆವರಣದಲ್ಲೇ ಬಸವನ ಅಂತ್ಯಕ್ರಿಯೆ ನಡೆಸಿದೆ.