ಮಣ್ಣಲ್ಲಿ ಮಣ್ಣಾದ ಚಿನ್ನದ ನಾಡಿನ ವೀರ ಯೋಧ ಪ್ರಶಾಂತ್

|

Updated on: Feb 29, 2020 | 4:16 PM

ಕೋಲಾರ: ಉಗ್ರರ ವಿರುದ್ಧ ಹೋರಾಡಿ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಯೋಧ ಪ್ರಶಾಂತ್(25) ಅಂತ್ಯಕ್ರಿಯೆ ಬಂಗಾರಪೇಟೆಯ ಕಣಿಂಬೆಲೆ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ. ಭೋವಿ ಸಮುದಾಯದ ಸಂಪ್ರದಾಯದಂತೆ ಹುತಾತ್ಮ ಯೋಧ ಪ್ರಶಾಂತ್ ಅಂತ್ಯಸಂಸ್ಕಾರ ನಡೆದಿದ್ದು, ಜನಪ್ರತಿನಿಧಿಗಳು ಸೇರಿದಂತೆ ಸಾವಿರಾರು ಜನರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ರು. ಫೆ.26ರಂದು ಜಮ್ಮು-ಕಾಶ್ಮೀರದಲ್ಲಿ ಉಗ್ರರ ಜೊತೆ ನಡೆದ ಫೈರಿಂಗ್​ನಲ್ಲಿ ಯೋಧ ಪ್ರಶಾಂತ್ ಹುತಾತ್ಮರಾಗಿದ್ದರು. ಇವರು ಸೆವೆಂಟೀನ್ ಮದ್ರಾಸ್ ರೆಜಿಮೆಂಟ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ತಡರಾತ್ರಿ ಬಂಗಾರಪೇಟೆಯಲ್ಲಿ ಯೋಧನ ಪಾರ್ಥಿವ ಶರೀರವನ್ನು ನೂರಾರು ಜನ ಬರಮಾಡಿಕೊಂಡರು. ನಂತರ ನಗರದ […]

ಮಣ್ಣಲ್ಲಿ ಮಣ್ಣಾದ ಚಿನ್ನದ ನಾಡಿನ ವೀರ ಯೋಧ ಪ್ರಶಾಂತ್
Follow us on

ಕೋಲಾರ: ಉಗ್ರರ ವಿರುದ್ಧ ಹೋರಾಡಿ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಯೋಧ ಪ್ರಶಾಂತ್(25) ಅಂತ್ಯಕ್ರಿಯೆ ಬಂಗಾರಪೇಟೆಯ ಕಣಿಂಬೆಲೆ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ. ಭೋವಿ ಸಮುದಾಯದ ಸಂಪ್ರದಾಯದಂತೆ ಹುತಾತ್ಮ ಯೋಧ ಪ್ರಶಾಂತ್ ಅಂತ್ಯಸಂಸ್ಕಾರ ನಡೆದಿದ್ದು, ಜನಪ್ರತಿನಿಧಿಗಳು ಸೇರಿದಂತೆ ಸಾವಿರಾರು ಜನರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ರು.

ಫೆ.26ರಂದು ಜಮ್ಮು-ಕಾಶ್ಮೀರದಲ್ಲಿ ಉಗ್ರರ ಜೊತೆ ನಡೆದ ಫೈರಿಂಗ್​ನಲ್ಲಿ ಯೋಧ ಪ್ರಶಾಂತ್ ಹುತಾತ್ಮರಾಗಿದ್ದರು. ಇವರು ಸೆವೆಂಟೀನ್ ಮದ್ರಾಸ್ ರೆಜಿಮೆಂಟ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ತಡರಾತ್ರಿ ಬಂಗಾರಪೇಟೆಯಲ್ಲಿ ಯೋಧನ ಪಾರ್ಥಿವ ಶರೀರವನ್ನು ನೂರಾರು ಜನ ಬರಮಾಡಿಕೊಂಡರು. ನಂತರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ಬಳಿಕ ಬಂಗಾರಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಳಗ್ಗೆ 10 ಗಂಟೆವರೆಗೂ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು.

ಜಿಲ್ಲೆಯ ಗಣ್ಯರಿಂದ ಅಂತಿಮ ನಮನ:
ಸಂಸದ ಮುನಿಸ್ವಾಮಿ, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಮಾಲೂರು ಶಾಸಕ ನಂಜೇಗೌಡ, ಮಾಜಿ ಶಾಸಕರಾದ ವೆಂಕಟಮುನಿಯಪ್ಪ, ಎಂ.ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ದರ್ಶನ್, ಎಸ್​ಪಿ ಮೊಹಮದ್ ಸುಜೀತ, ಎಸಿ ಸೋಮಶೇಖರ್ ಸೇರಿದಂತೆ ಹಲವು ಗಣ್ಯರು ಹುತಾತ್ಮ ಯೋಧನ ಅಂತಿಮ ದರ್ಶನ ಪಡೆದರು.

ತೆರೆದ ವಾಹನದಲ್ಲಿ ಮೆರೆವಣಿಗೆ:
ಅಂತಿಮ ದರ್ಶನದ ಬಳಿಕ ಬಂಗಾರಪೇಟೆಯಿಂದ ಯೋಧನ ಹುಟ್ಟೂರು ಕಣಿಂಬೆಲೆ ಗ್ರಾಮದವರೆಗೆ ತೆರದ‌ ವಾಹನದಲ್ಲಿ ಹುತಾತ್ಮ ಯೋಧನ ಪಾರ್ಥಿವ ಶರೀರದ ಅದ್ದೂರಿ ಮೆರವಣಿಗೆ ಮಾಡಲಾಯ್ತು. ಅಂತಿಮ ಯಾತ್ರೆಯಲ್ಲಿ ಜಿಲ್ಲೆಯ ಗಣ್ಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು. ದಾರಿಯುದ್ದಕ್ಕೂ ಸಾವಿರಾರು ಜನರು ಹಾಗೂ ವಿದ್ಯಾರ್ಥಿಗಳು ಪುಷ್ಪಾರ್ಚನೆ ಮಾಡಿದರು.