ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಮೊದಲ ಬಲಿ!
ಉತ್ತರ ಕನ್ನಡ: ಮಲೆನಾಡು ಭಾಗದಲ್ಲಿ ಹಲವರನ್ನು ಬಲಿ ಪಡೆದು ಆತಂಕ ಸೃಷ್ಟಿಸಿದ್ದ ಮಂಗನ ಕಾಯಿಲೆ ಇದೀಗ ಉತ್ತರ ಕನ್ನಡ ಜಿಲ್ಲೆಗೂ ವ್ಯಾಪ್ತಿಸಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗಿಳಸೆ ಗ್ರಾಮದ ವೃದ್ಧ ಭಾಸ್ಕರ್ ಗಣಪತಿ ಹೆಗಡೆ(64) ಮಂಗನ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಕ್ಯಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆಯಿಂದ ವೃದ್ಧ ಸಾವಿಗೀಡಾಗಿದ್ದಾರೆಂದು ಆರೋಗ್ಯ ಇಲಾಖೆ ಮೂಲಗಳು ದೃಢಪಡಿಸಿವೆ. ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಸಿದ್ದಾಪುರದ ಖಾಸಗಿ ಅಸ್ಪತ್ರೆಗೆ ಭಾಸ್ಕರ್ ಗಣಪತಿ ಹೆಗಡೆ ದಾಖಲಾಗಿದ್ದರು. ಹೆಚ್ಚಿನ […]
ಉತ್ತರ ಕನ್ನಡ: ಮಲೆನಾಡು ಭಾಗದಲ್ಲಿ ಹಲವರನ್ನು ಬಲಿ ಪಡೆದು ಆತಂಕ ಸೃಷ್ಟಿಸಿದ್ದ ಮಂಗನ ಕಾಯಿಲೆ ಇದೀಗ ಉತ್ತರ ಕನ್ನಡ ಜಿಲ್ಲೆಗೂ ವ್ಯಾಪ್ತಿಸಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗಿಳಸೆ ಗ್ರಾಮದ ವೃದ್ಧ ಭಾಸ್ಕರ್ ಗಣಪತಿ ಹೆಗಡೆ(64) ಮಂಗನ ಕಾಯಿಲೆಯಿಂದ ಮೃತಪಟ್ಟಿದ್ದಾರೆ.
ಕ್ಯಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆಯಿಂದ ವೃದ್ಧ ಸಾವಿಗೀಡಾಗಿದ್ದಾರೆಂದು ಆರೋಗ್ಯ ಇಲಾಖೆ ಮೂಲಗಳು ದೃಢಪಡಿಸಿವೆ. ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಸಿದ್ದಾಪುರದ ಖಾಸಗಿ ಅಸ್ಪತ್ರೆಗೆ ಭಾಸ್ಕರ್ ಗಣಪತಿ ಹೆಗಡೆ ದಾಖಲಾಗಿದ್ದರು.
ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗದ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದ್ರೆ, ಅಲ್ಲಿಯೂ ಚಿಕಿತ್ಸೆಗೆ ಸ್ಪಂದಿಸಿದ ಕಾರಣ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆಯೇ ಭಾಸ್ಕರ್ ಗಣಪತಿ ಮೃತಪಟ್ಟಿದ್ದಾರೆ.
Published On - 11:39 am, Sat, 29 February 20