ಬೆಳಗಾವಿ ಜಿಲ್ಲಾಧಿಕಾರಿಯಾಗಿ, ಸಜ್ಜನ ಬೊಮ್ಮನಹಳ್ಳಿ ಅಧಿಕಾರ ಅಂತ್ಯ

ಬೆಳಗಾವಿ: ನೂತನ ಬೆಳಗಾವಿ ಜಿಲ್ಲಾಧಿಕಾರಿಯಾಗಿ ಎಂ.ಜಿ.ಹಿರೇಮಠ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ. ನಿಕಟಪೂರ್ವ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಸೇವಾ ನಿವೃತ್ತಿ ಹೊಂದಿದ ಕಾರಣ ಎಂ.ಜಿ.ಹಿರೇಮಠ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ನೂತನ ಡಿಸಿ ಎಂ.ಜಿ.ಹಿರೇಮಠ ಅವರು ಮೂಲತಃ ಬೆಳಗಾವಿ ಜಿಲ್ಲೆಯವರೇ ಆಗಿದ್ದಾರೆ. ನಾನು ಬೆಳಗಾವಿ ಜಿಲ್ಲೆಯವನೇ ಆಗಿದ್ದು ಎಲ್ಲರ ಪರಿಚಯವಿದೆ, ಕೆಲಸ ಸುಲಭವಾಗಲಿದೆ ಎಂದು ಅಧಿಕಾರ ಸ್ವೀಕರಿಸಿದ ಬಳಿಕ ಎಂ.ಜಿ.ಹಿರೇಮಠ ಅವರು ಹೇಳಿದರು. ಗದಗ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ವಹಿಸಿದ ಅನುಭವ ಇದೆ. ಕೊರೊನಾ, ನೆರೆ, ಬರ ಸೇರಿ ಎಲ್ಲ […]

ಬೆಳಗಾವಿ ಜಿಲ್ಲಾಧಿಕಾರಿಯಾಗಿ, ಸಜ್ಜನ ಬೊಮ್ಮನಹಳ್ಳಿ ಅಧಿಕಾರ ಅಂತ್ಯ
Edited By:

Updated on: Jun 30, 2020 | 7:19 PM

ಬೆಳಗಾವಿ: ನೂತನ ಬೆಳಗಾವಿ ಜಿಲ್ಲಾಧಿಕಾರಿಯಾಗಿ ಎಂ.ಜಿ.ಹಿರೇಮಠ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ. ನಿಕಟಪೂರ್ವ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಸೇವಾ ನಿವೃತ್ತಿ ಹೊಂದಿದ ಕಾರಣ ಎಂ.ಜಿ.ಹಿರೇಮಠ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ನೂತನ ಡಿಸಿ ಎಂ.ಜಿ.ಹಿರೇಮಠ ಅವರು ಮೂಲತಃ ಬೆಳಗಾವಿ ಜಿಲ್ಲೆಯವರೇ ಆಗಿದ್ದಾರೆ. ನಾನು ಬೆಳಗಾವಿ ಜಿಲ್ಲೆಯವನೇ ಆಗಿದ್ದು ಎಲ್ಲರ ಪರಿಚಯವಿದೆ, ಕೆಲಸ ಸುಲಭವಾಗಲಿದೆ ಎಂದು ಅಧಿಕಾರ ಸ್ವೀಕರಿಸಿದ ಬಳಿಕ ಎಂ.ಜಿ.ಹಿರೇಮಠ ಅವರು ಹೇಳಿದರು.

ಗದಗ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ವಹಿಸಿದ ಅನುಭವ ಇದೆ. ಕೊರೊನಾ, ನೆರೆ, ಬರ ಸೇರಿ ಎಲ್ಲ ಪರಿಸ್ಥಿತಿ ನಿಭಾಯಿಸಿದ ಅನುಭವ ನನಗಿದೆ. ಆ ಅನುಭವ ಬೆಳಗಾವಿ ಜಿಲ್ಲೆಯಲ್ಲಿ ಸಹಕಾರಿಯಾಗಲಿದೆ ಎಂದರು.