AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಸೋಂಕಿತ ಕಳ್ಳ ಮೊಬೈಲ್ ಕದ್ದು ರಾತ್ರೋ ರಾತ್ರಿ ಪರಾರಿ, ಎಲ್ಲಿ?

ಕಾರವಾರ: ಆತ ಹೇಳಿ ಕೇಳಿ ಅಂತರ್ ಜಿಲ್ಲಾ ಕಳ್ ಕ್ರಿಮಿ. ಕಳ್ಳತನ ಮಾಡ್ತಾನೇ ಕೊರೊನಾ ಅಂಟಿಸಿಕೊಂಡಿದ್ದ. ಕೂಡಲೇ ಆತನನ್ನ ಕೊವಿಡ್ ವಾರ್ಡ್​ಗೆ ಶಿಫ್ಟ್ ಮಾಡಿದ್ರು. ಆದ್ರೆ ರಾತ್ರಿ ಕಳೆದು ಬೆಳಗಾಗೋದ್ರೊಳಗೆ ಎಲ್ಲರಿಗೂ ಶಾಕ್ ಕಾದಿತ್ತು. ಸಿಕ್ಕ ಸಿಕ್ಕ ವಸ್ತುಗಳು ಅಬೇಸ್.. ಬೈಕ್​ಗಳು ಕದ್ದು ಎಸ್ಕೇಪ್.. ಜಾಗ ಯಾವುದಾದರೇನ್, ಪರಿಸ್ಥಿತಿ ಯಾವುದಾದರೇನ್ ಕದಿಯೋದೇ ಈತನ ಫುಲ್ ಟೈಂ ಖಯಾಲಿ. ಹೀಗೆ ಶಿರಸಿಯಲ್ಲಿ ಬೈಕ್ ಕಳ್ಳತನ ಮಾಡ್ತಾ ಆಸಾಮಿ ಪೊಲೀಸರ ಕೈಗೆ ತಗ್ಲಾಕೊಂಡಿದ್ದ. ವಿಚಾರಣೆ ಬಳಿಕ ಪೊಲೀಸರು ಜೈಲಿನಲ್ಲಿಟ್ಟಿದ್ರು. ನಾಲ್ಕೈದು […]

ಕೊರೊನಾ ಸೋಂಕಿತ ಕಳ್ಳ ಮೊಬೈಲ್ ಕದ್ದು ರಾತ್ರೋ ರಾತ್ರಿ ಪರಾರಿ, ಎಲ್ಲಿ?
ಆಯೇಷಾ ಬಾನು
|

Updated on:Jul 01, 2020 | 7:41 AM

Share

ಕಾರವಾರ: ಆತ ಹೇಳಿ ಕೇಳಿ ಅಂತರ್ ಜಿಲ್ಲಾ ಕಳ್ ಕ್ರಿಮಿ. ಕಳ್ಳತನ ಮಾಡ್ತಾನೇ ಕೊರೊನಾ ಅಂಟಿಸಿಕೊಂಡಿದ್ದ. ಕೂಡಲೇ ಆತನನ್ನ ಕೊವಿಡ್ ವಾರ್ಡ್​ಗೆ ಶಿಫ್ಟ್ ಮಾಡಿದ್ರು. ಆದ್ರೆ ರಾತ್ರಿ ಕಳೆದು ಬೆಳಗಾಗೋದ್ರೊಳಗೆ ಎಲ್ಲರಿಗೂ ಶಾಕ್ ಕಾದಿತ್ತು.

ಸಿಕ್ಕ ಸಿಕ್ಕ ವಸ್ತುಗಳು ಅಬೇಸ್.. ಬೈಕ್​ಗಳು ಕದ್ದು ಎಸ್ಕೇಪ್.. ಜಾಗ ಯಾವುದಾದರೇನ್, ಪರಿಸ್ಥಿತಿ ಯಾವುದಾದರೇನ್ ಕದಿಯೋದೇ ಈತನ ಫುಲ್ ಟೈಂ ಖಯಾಲಿ. ಹೀಗೆ ಶಿರಸಿಯಲ್ಲಿ ಬೈಕ್ ಕಳ್ಳತನ ಮಾಡ್ತಾ ಆಸಾಮಿ ಪೊಲೀಸರ ಕೈಗೆ ತಗ್ಲಾಕೊಂಡಿದ್ದ. ವಿಚಾರಣೆ ಬಳಿಕ ಪೊಲೀಸರು ಜೈಲಿನಲ್ಲಿಟ್ಟಿದ್ರು. ನಾಲ್ಕೈದು ಜಿಲ್ಲೆ ಓಡಾಡಿರೋ ಕಾರಣಕ್ಕೆ ಖದೀಮನಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿತ್ತು. ಆಗ ಕಳ್ಳನಿಗೆ ಕೊರೊನಾ ಬಂದಿರೋದು ಕನ್ಫರ್ಮ್ ಆಗಿತ್ತು. ನಂತ್ರ ಕೊವಿಡ್ ಆಸ್ಪತ್ರೆಗೆ ಶಿಫ್ಟ್ ಆಗಿದ್ದ ಕಳ್ಳ, ಅಲ್ಲೂ ತನ್ನ ಕೈಚಳಕ ತೋರಿಸಿದ್ದ.

ಕೊವಿಡ್ ಆಸ್ಪತ್ರೆಯಿಂದ ಮೊಬೈಲ್ ಕದ್ದು ಆಸಾಮಿ ಎಸ್ಕೇಪ್! ಅಂದ್ಹಾಗೇ, ಮೊದಲ ಬಾರಿ ಕಳ್ಳನಿಗೆ ನೆಗೆಟಿವ್ ಬಂದಿತ್ತು. ಆದ್ರೆ ಮೊನ್ನೆ ಪಾಸಿಟಿವ್ ರಿಪೋರ್ಟ್ ಬಂದಿದೆ. ಇದ್ರಿಂದ ಕಳ್ಳನ ವಿಚಾರಣೆ ನಡೆಸಿದ ಶಿರಸಿ ನಗರ ಠಾಣೆ ಪೊಲೀಸರಿಗೆ ಆತಂಕ ಶುರುವಾಗಿದೆ. ಕೂಡಲೇ 14 ಮಂದಿಯ ಗಂಟಲು ದ್ರವವನ್ನ ಪರೀಕ್ಷೆಗೆ ಕಳುಹಿಸಲಾಗಿದೆ. ನಂತ್ರ37 ವರ್ಷದ 12057ನೇ ಸೋಂಕಿತನನ್ನ ಕಾರವಾರದ ಕ್ರಿಮ್ಸ್ ಕೊವಿಡ್ ವಾರ್ಡ್​ಗೆ ಶಿಫ್ಟ್ ಮಾಡಲಾಗಿತ್ತು. ಆದ್ರೆ ಕೊವಿಡ್ ವಾರ್ಡ್​ನಲ್ಲೂ ತನ್ನ ಬುದ್ಧಿ ಬಿಡದ ಐನಾತಿ, 2 ಮೊಬೈಲ್ ಕದ್ದು ಗ್ಲಾಸ್ ಡೋರ್ ಒಡೆದು ಎಸ್ಕೇಪ್ ಆಗಿದ್ದಾನೆ.

ಇನ್ನು ಕಳ್ಳ ಬೆಳಗಿನ ಜಾವ 4 ಗಂಟೆಗೆ ಕೊವಿಡ್ ವಾರ್ಡ್​ನಿಂದ ತಪ್ಪಿಸಿಕೊಂಡು ಹೋಗಿದ್ದಾನೆ. ಕೂಡಲೇ ಕೊರೊನಾ ವಾರಿಯರ್ಸ್​ ಕಾರವಾರದ ನಗರ ಠಾಣೆಗೆ ಮಾಹಿತಿ ರವಾನಿಸಿದ್ರು. ಎಲ್ಲೆಡೆ ಹುಡುಕಾಡಿದ್ದಾಗ ಕದ್ರಾ ರೂಟ್​ನ ಬಸ್ ಏರಿ ಹೋಗಿದ್ದಾಗಿ ಮಾಹಿತಿ ಸಿಕ್ಕಿತ್ತು. ನಂತ್ರ ಕದ್ರಾ ಗ್ರಾಮದಲ್ಲಿ ಖದೀಮ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ. ಆದ್ರೀಗ ಮತ್ತೊಮ್ಮೆ ಕೊವಿಡ್ ವಾರ್ಡ್​ನಿಂದ ಆಸಾಮಿ ಜೂಟ್ ಆಗಿದ್ದಾನೆ.

ಒಟ್ನಲ್ಲಿ ಕಳ್ಳನ ಖತರ್ನಾಕ್ ಬುದ್ಧಿಯಿಂದ ಪೊಲೀಸರಿಗಷ್ಟೇ ಅಲ್ಲದೆ ಬಸ್​ನಲ್ಲಿ ಪ್ರಯಾಣಿಸಿದವರಿಗೂ ಆತಂಕ ಶುರುವಾಗಿದೆ. ಕಳ್ಳನಿಂದ ಅದೆಷ್ಟು ಮಂದಿಗೆ ಸೋಂಕು ವಕ್ಕರಿಸಿದೆ ಅನ್ನೋದೇ ಚಿಂತೆಗೀಡು ಮಾಡಿದೆ.

Published On - 7:08 am, Wed, 1 July 20