ವಿಕಾಸಸೌಧಕ್ಕೆ ಕಾಂಪಾಸ್ ಇಟ್ಟು, ವಾಸ್ತು ಚೆಕ್ ಮಾಡಿದ ಸಚಿವ ಬಿ ಸಿ ಪಾಟೀಲ್!

|

Updated on: Feb 07, 2020 | 3:49 PM

ಬೆಂಗಳೂರು: ನಿನ್ನೆಯಷ್ಟೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಸ್ಥಾನ ಅಲಂಕರಿಸಿರುವ ನೂತನ ಸಚಿವ ಬಿ.ಸಿ.ಪಾಟೀಲ್ ಇಂದು ವಿಕಾಸಸೌಧದಕ್ಕೆ ಆಗಮಿಸಿ, ತಮಗೆ ಹಂಚಿಕೆಯಾಗಿರುವ ಕೊಠಡಿಯ ವಾಸ್ತು ಪರಿಶೀಲಿಸಿದ್ದಾರೆ. ಐಟಿ ರಾಜಧಾನಿ ಎಂದೇ ಖ್ಯಾತವಾಗಿರುವ ಬೆಂಗಳೂರಿನಲ್ಲಿ ವಿಕಾಸಸೌಧದ 4ನೇ ಮಹಡಿಯ 406/407 ಕೊಠಡಿಯಲ್ಲಿ ಆಂಡ್ರಾಯ್ಡ್​ ಮೊಬೈಲ್ ಮೂಲಕ ಕಾಂಪಾಸ್ ಅಳವಡಿಸಿಕೊಂಡು ಮೂಲೆ ಮೂಲೆಯಲ್ಲೂ ಅಳೆದು ತೂಗಿ ತಮಗೆ ಪ್ರಶಸ್ತವೆನಿಸುವ ರೀತಿಯಲ್ಲಿ ಬಿ.ಸಿ.ಪಾಟೀಲ್ ತಮ್ಮ ಚೇರು ಹಾಕಿಕೊಂಡರು. ಈ ಕುರಿತು ಪ್ರತಿಕ್ರಿಯಿಸಿದ ನೂತನ ಸಚಿವ ಬಿ.ಸಿ.ಪಾಟೀಲ್, ಗಾಳಿ-ಬೆಳಕು ದೃಷ್ಟಿಯಿಂದ ನಾನು ‌ವಾಸ್ತು […]

ವಿಕಾಸಸೌಧಕ್ಕೆ ಕಾಂಪಾಸ್ ಇಟ್ಟು, ವಾಸ್ತು ಚೆಕ್ ಮಾಡಿದ ಸಚಿವ ಬಿ ಸಿ ಪಾಟೀಲ್!
Follow us on

ಬೆಂಗಳೂರು: ನಿನ್ನೆಯಷ್ಟೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಸ್ಥಾನ ಅಲಂಕರಿಸಿರುವ ನೂತನ ಸಚಿವ ಬಿ.ಸಿ.ಪಾಟೀಲ್ ಇಂದು ವಿಕಾಸಸೌಧದಕ್ಕೆ ಆಗಮಿಸಿ, ತಮಗೆ ಹಂಚಿಕೆಯಾಗಿರುವ ಕೊಠಡಿಯ ವಾಸ್ತು ಪರಿಶೀಲಿಸಿದ್ದಾರೆ.

ಐಟಿ ರಾಜಧಾನಿ ಎಂದೇ ಖ್ಯಾತವಾಗಿರುವ ಬೆಂಗಳೂರಿನಲ್ಲಿ ವಿಕಾಸಸೌಧದ 4ನೇ ಮಹಡಿಯ 406/407 ಕೊಠಡಿಯಲ್ಲಿ ಆಂಡ್ರಾಯ್ಡ್​ ಮೊಬೈಲ್ ಮೂಲಕ ಕಾಂಪಾಸ್ ಅಳವಡಿಸಿಕೊಂಡು ಮೂಲೆ ಮೂಲೆಯಲ್ಲೂ ಅಳೆದು ತೂಗಿ ತಮಗೆ ಪ್ರಶಸ್ತವೆನಿಸುವ ರೀತಿಯಲ್ಲಿ ಬಿ.ಸಿ.ಪಾಟೀಲ್ ತಮ್ಮ ಚೇರು ಹಾಕಿಕೊಂಡರು.

ಈ ಕುರಿತು ಪ್ರತಿಕ್ರಿಯಿಸಿದ ನೂತನ ಸಚಿವ ಬಿ.ಸಿ.ಪಾಟೀಲ್, ಗಾಳಿ-ಬೆಳಕು ದೃಷ್ಟಿಯಿಂದ ನಾನು ‌ವಾಸ್ತು ನಂಬುತ್ತೇನೆ ಅಷ್ಟೇ ಎಂದು ಸಮಜಾಯಿಷಿ ನೀಡಿದ್ದಾರೆ.

Published On - 3:37 pm, Fri, 7 February 20