ಲಸಿಕೆ ಪಡೆಯುವಂತೆ ಡಂಗುರ ಬಾರಿಸಿದ್ದ ಅಜ್ಜನ ಕಾರ್ಯಕ್ಕೆ ಮೆಚ್ಚುಗೆ, ಪ್ರಧಾನಿಗೆ ವಿಡಿಯೋ ಟ್ಯಾಗ್ ಮಾಡಿದ ಸಚಿವ ಡಾ.ಕೆ.ಸುಧಾಕರ್

|

Updated on: Mar 14, 2021 | 10:00 AM

ಅಜ್ಜ ವೀರಪ್ಪ ಎನ್ನುವವರು ಡಂಗುರ ಬಾರಿಸಿ ಕೊರೊನಾ ಲಸಿಕೆಯನ್ನು ಪಡೆಯುವಂತೆ ಸಂದೇಶ ಸಾರಿದ್ದರು. ಈ ಬಗ್ಗೆ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದು ಪ್ರಧಾನಿಗೆ ಟ್ಯಾಗ್ ಮಾಡಿದ್ದಾರೆ.

ಲಸಿಕೆ ಪಡೆಯುವಂತೆ ಡಂಗುರ ಬಾರಿಸಿದ್ದ ಅಜ್ಜನ ಕಾರ್ಯಕ್ಕೆ ಮೆಚ್ಚುಗೆ, ಪ್ರಧಾನಿಗೆ ವಿಡಿಯೋ ಟ್ಯಾಗ್ ಮಾಡಿದ ಸಚಿವ ಡಾ.ಕೆ.ಸುಧಾಕರ್
ಕೊವಿಡ್ ಲಸಿಕೆ ಪಡೆಯುವಂತೆ ಡಂಗುರ ಬಾರಿಸಿದ್ದ ಅಜ್ಜ ವೀರಪ್ಪ
Follow us on

ಬೆಂಗಳೂರು: ಕೊವಿಡ್ ಲಸಿಕೆ ಪಡೆಯುವಂತೆ ಡಂಗುರ ಬಾರಿಸಿದ್ದ ಅಜ್ಜ ವೀರಪ್ಪ ಕಾರ್ಯದ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದು ಅಜ್ಜ ಡಂಗುರ ಬಾರಿಸಿದ್ದ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ಯಾಗ್ ಮಾಡಿದ್ದಾರೆ. ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ಅಜ್ಜ ವೀರಪ್ಪ ಎನ್ನುವವರು ಡಂಗುರ ಬಾರಿಸಿ ಕೊರೊನಾ ಲಸಿಕೆಯನ್ನು ಪಡೆಯುವಂತೆ ಸಂದೇಶ ಸಾರಿದ್ದರು. ಈ ಬಗ್ಗೆ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದು ಪ್ರಧಾನಿಗೆ ಟ್ಯಾಗ್ ಮಾಡಿದ್ದಾರೆ.

ಜಾನಪದ ಕಲಾವಿದ ವೀರಪ್ಪ ಕಾಳಿ ಕೊರೊನಾ ಲಸಿಕೆ ಪಡೆಯುವಂತೆ ಡಂಗುರ ಬಾರಿಸಿದ್ದಾರೆ. ಕೂಗಿ ಹೇಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಈಗ ಆ ವಿಡಿಯೋವನ್ನು ಸಚಿವ ಡಾ.ಕೆ.ಸುಧಾಕರ್ ತಮ್ಮ ಟ್ವಿಟರ್ ಹಾಗೂ ಫೇಸ್‌ಬುಕ್ ಖಾತೆಯಲ್ಲಿ ಅಪ್ಲೋಡ್ ಮಾಡುವ ಮೂಲಕ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೆ ಅಲ್ಲದೆ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ಯಾಗ್ ಮಾಡಿದ್ದಾರೆ. ಗ್ರಾಮೀಣ ಸಾಂಪ್ರದಾಯಕ ಪದ್ಧತಿ ಮೂಲಕ ಡಂಗುರ ಬಾರಿಸಿ ಜಾಗೃತಿ ಮೂಡಿಸುತ್ತಿರುವ ದೃಶ್ಯ ಪ್ರೇರಣೆದಾಯಕವಾಗಿದೆ ಅಂತ ಸಚಿವ ಸುಧಾಕರ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕೇಳ್ರಪ್ಪೋ ಕೇಳಿ! ಕೊರೊನಾ ಕಟ್ಟಿಹಾಕಲು ಬಂತು ‘ಒಗ್ಗರಣೆ ವ್ರತ’ ದಿಗ್ಬಂಧನ