ಕೇಳ್ರಪ್ಪೋ ಕೇಳಿ! ಕೊರೊನಾ ಕಟ್ಟಿಹಾಕಲು ಬಂತು ‘ಒಗ್ಗರಣೆ ವ್ರತ’ ದಿಗ್ಬಂಧನ

ಧಾರವಾಡ: ಕೊರೊನಾದಿಂದ ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿದೆ. ಎಷ್ಟೇ ಕಷ್ಟಪಟ್ಟರೂ ಮಹಾಮಾರಿ ನಿಯಂತ್ರಣಕ್ಕೆ ಬರುತ್ತಿಲ್ಲ. ಇದೇ ಕಾರಣಕ್ಕೆ ಮತ್ತೆ ಲಾಕ್​ಡೌನ್ ಅಸ್ತ್ರ ಪ್ರಯೋಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ ಜಿಲ್ಲೆಯ ಒಂದು ಗ್ರಾಮದಲ್ಲಿ ಕೊರೊನಾವನ್ನು ದೂರ ಇಡೋಕೆ ಗ್ರಾಮಸ್ಥರು ದೇವರ ಮೊರೆ ಹೋಗಿದ್ದಾರೆ. ಅದು ಕೂಡ ಕಠಿಣ ವ್ರತ ಕೈಗೊಳ್ಳುವ ಮೂಲಕ. ಹೌದು, ಜಿಲ್ಲೆಯ ನವಲಗುಂದ ತಾಲೂಕಿನ ಬ್ಯಾಲ್ಯಾಳ ಗ್ರಾಮದ ನಿವಾಸಿಗಳು ದ್ಯಾಮವ್ವ ಹಾಗೂ ಮಾಯಮ್ಮ ಅನ್ನೋ ಗ್ರಾಮ ದೇವತೆಯರನ್ನು ಒಲಿಸಿಕೊಳ್ಳೋ ಮೂಲಕ ಹೆಮ್ಮಾರಿಯನ್ನು ಗ್ರಾಮದಿಂದ ದೂರವಿಡೋಕೆ […]

ಕೇಳ್ರಪ್ಪೋ ಕೇಳಿ! ಕೊರೊನಾ ಕಟ್ಟಿಹಾಕಲು ಬಂತು ‘ಒಗ್ಗರಣೆ ವ್ರತ’ ದಿಗ್ಬಂಧನ
Follow us
KUSHAL V
|

Updated on:Jul 14, 2020 | 7:33 PM

ಧಾರವಾಡ: ಕೊರೊನಾದಿಂದ ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿದೆ. ಎಷ್ಟೇ ಕಷ್ಟಪಟ್ಟರೂ ಮಹಾಮಾರಿ ನಿಯಂತ್ರಣಕ್ಕೆ ಬರುತ್ತಿಲ್ಲ. ಇದೇ ಕಾರಣಕ್ಕೆ ಮತ್ತೆ ಲಾಕ್​ಡೌನ್ ಅಸ್ತ್ರ ಪ್ರಯೋಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ ಜಿಲ್ಲೆಯ ಒಂದು ಗ್ರಾಮದಲ್ಲಿ ಕೊರೊನಾವನ್ನು ದೂರ ಇಡೋಕೆ ಗ್ರಾಮಸ್ಥರು ದೇವರ ಮೊರೆ ಹೋಗಿದ್ದಾರೆ. ಅದು ಕೂಡ ಕಠಿಣ ವ್ರತ ಕೈಗೊಳ್ಳುವ ಮೂಲಕ.

ಹೌದು, ಜಿಲ್ಲೆಯ ನವಲಗುಂದ ತಾಲೂಕಿನ ಬ್ಯಾಲ್ಯಾಳ ಗ್ರಾಮದ ನಿವಾಸಿಗಳು ದ್ಯಾಮವ್ವ ಹಾಗೂ ಮಾಯಮ್ಮ ಅನ್ನೋ ಗ್ರಾಮ ದೇವತೆಯರನ್ನು ಒಲಿಸಿಕೊಳ್ಳೋ ಮೂಲಕ ಹೆಮ್ಮಾರಿಯನ್ನು ಗ್ರಾಮದಿಂದ ದೂರವಿಡೋಕೆ ನಿರ್ಧರಿಸಿದ್ದಾರೆ. ಇಂದಿನಿಂದ ಒಟ್ಟು ಐದು ಮಂಗಳವಾರ ಕಠಿಣ ವ್ರತವನ್ನು ಕೈಗೊಳ್ಳೋ ಮೂಲಕ ಗ್ರಾಮದಿಂದ ಕೊರೊನಾ ಹೆಮ್ಮಾರಿಯನ್ನು ದೂರವಿಡೋಕೆ ನಿರ್ಧರಿಸಿದ್ದಾರೆ.

ಮಂಗಳವಾರ ರೊಟ್ಟಿ ತಿನ್ನಬಾರದು, ಅಡುಗೆಗೆ ಒಗ್ಗರಣೆ ಹಾಕಕೂಡದು ಈ ಬಗ್ಗೆ ಗ್ರಾಮದಲ್ಲಿ ಡಂಗುರ ಸಾರಿರೋ ಗ್ರಾಮದ ಮುಖಂಡರು, ಮಂಗಳವಾರದಂದು ಯಾರೂ ಹೊಲಗಳಿಗೆ ಕೆಲಸಕ್ಕೆ ಹೋಗಬಾರದು. ಅಲ್ಲದೇ ಗ್ರಾಮದಲ್ಲಿ ಮಂಗಳವಾರದಂದು ಯಾರೂ ರೊಟ್ಟಿ ಮಾಡಬಾರದು ಎಂದು ಘೋಷಿಸಿದ್ದಾರೆ. ಜೊತೆಗೆ, ಅಡುಗೆಗೆ ಒಗ್ಗರಣೆ ಹಾಕಬಾರದು ಹಾಗೂ ಕರಿದ ತಿನಿಸನ್ನು ತಯಾರಿಸಬಾರದು ಅನ್ನೋ ಕಠಿಣ ನಿಯಮಗಳನ್ನು ವಿಧಿಸಿದ್ದಾರೆ.

ಸಾಮಾನ್ಯವಾಗಿ ಗ್ರಾಮದಲ್ಲಿ ಇಂಥ ಸಂಕಷ್ಟಗಳು ಮತ್ತು ಸಾಂಕ್ರಾಮಿಕ ರೋಗಗಳು ಎದುರಾದಾಗ ಈ ಕಠಿಣ ವೃತವನ್ನು ಆಚರಿಸಿಕೊಂಡು ಬರಲಾಗಿದೆ. ಇದೀಗ, ಕೊರೊನಾ ನಿಯಂತ್ರಣಕ್ಕೂ ಇದೇ ಹಾದಿ ಹಿಡಿದಿದ್ದಾರೆ. ಮತ್ತೊಮ್ಮೆ ಈ ವ್ರತ ಪಾಲಿಸುವುದರಿಂದ ಕೊರೊನಾ ಮಹಾಮಾರಿಯನ್ನ ಕಟ್ಟಿ ಹಾಕಬಹುದು ಅನ್ನೋದು ಗ್ರಾಮಸ್ಥರ ಅಚಲ ನಂಬಿಕೆ. ನರಸಿಂಹಮೂರ್ತಿ ಪ್ಯಾಟಿ

Published On - 7:31 pm, Tue, 14 July 20