ರಿಲಯನ್ಸ್​ನ ಮುಕೇಶ್​ ಅಂಬಾನಿ ವಿಶ್ವದ 6ನೇ ಅತ್ಯಂತ ಧನಿಕ, ಹೇಗೆ?

ಜಗತ್ತಿನ ಡಿಜಿಟಲ್​ ಲೋಕದ ದಿಗ್ಗಜರಾದ ಗೂಗಲ್​ ಮತ್ತು ಫೇಸ್​ಬುಕ್​ರಿಂದ ಕೋಟ್ಯಂತರ ರೂಪಾಯಿ ಹೂಡಿಕೆ ಪಡೆದಿರುವ ರಿಲಯನ್ಸ್​ ಸಂಸ್ಥೆಯ ಒಡೆಯ ಮುಕೇಶ್​ ಅಂಬಾನಿ ಇದೀಗ ಜಗತ್ತಿನ 6ನೇ ಅತಿ ದೊಡ್ಡ ಶ್ರೀಮಂತ. ಧನ ಲಕ್ಷ್ಮಿ ಧನಿಕರ ಮನೆಯಲ್ಲೇ ಇರಲು ಬಯಸುತ್ತಾಳಂತೆ! ಹಾಗೆ.. ಈ ಕೊರೊನಾ ಸಂಕಷ್ಟ ಕಾಲದಲ್ಲಿ ಜಾಣ ಮುಕೇಶ್​ ಅಂಬಾನಿಯ ಕಂಪನಿಗೆ ವಿಶ್ವದ ಎಲ್ಲ ಕಡೆಗಳಿಂದಲೂ ಹಣ ಹರಿದುಬರುತ್ತಿದೆ. ಹೌದು, ಪ್ರತಿಷ್ಠಿತ ಬ್ಲೂಮ್​ಬರ್ಗ್ ಸಂಸ್ಥೆಯ ಬಿಡುಗಡೆ ಮಾಡಿರುವ ಶ್ರೀಮಂತರ ಪಟ್ಟಿಯ ಪ್ರಕಾರ ಮುಕೇಶ್​ ಅಂಬಾನಿಯ ನಿವ್ವಳ ಮೌಲ್ಯ […]

ರಿಲಯನ್ಸ್​ನ ಮುಕೇಶ್​ ಅಂಬಾನಿ ವಿಶ್ವದ 6ನೇ ಅತ್ಯಂತ ಧನಿಕ, ಹೇಗೆ?
KUSHAL V

| Edited By: sadhu srinath

Jul 14, 2020 | 6:44 PM

ಜಗತ್ತಿನ ಡಿಜಿಟಲ್​ ಲೋಕದ ದಿಗ್ಗಜರಾದ ಗೂಗಲ್​ ಮತ್ತು ಫೇಸ್​ಬುಕ್​ರಿಂದ ಕೋಟ್ಯಂತರ ರೂಪಾಯಿ ಹೂಡಿಕೆ ಪಡೆದಿರುವ ರಿಲಯನ್ಸ್​ ಸಂಸ್ಥೆಯ ಒಡೆಯ ಮುಕೇಶ್​ ಅಂಬಾನಿ ಇದೀಗ ಜಗತ್ತಿನ 6ನೇ ಅತಿ ದೊಡ್ಡ ಶ್ರೀಮಂತ. ಧನ ಲಕ್ಷ್ಮಿ ಧನಿಕರ ಮನೆಯಲ್ಲೇ ಇರಲು ಬಯಸುತ್ತಾಳಂತೆ! ಹಾಗೆ.. ಈ ಕೊರೊನಾ ಸಂಕಷ್ಟ ಕಾಲದಲ್ಲಿ ಜಾಣ ಮುಕೇಶ್​ ಅಂಬಾನಿಯ ಕಂಪನಿಗೆ ವಿಶ್ವದ ಎಲ್ಲ ಕಡೆಗಳಿಂದಲೂ ಹಣ ಹರಿದುಬರುತ್ತಿದೆ.

ಹೌದು, ಪ್ರತಿಷ್ಠಿತ ಬ್ಲೂಮ್​ಬರ್ಗ್ ಸಂಸ್ಥೆಯ ಬಿಡುಗಡೆ ಮಾಡಿರುವ ಶ್ರೀಮಂತರ ಪಟ್ಟಿಯ ಪ್ರಕಾರ ಮುಕೇಶ್​ ಅಂಬಾನಿಯ ನಿವ್ವಳ ಮೌಲ್ಯ ಬರೋಬ್ಬರಿ 72.4 ಬಿಲಿಯನ್​ ಡಾಲರ್​ (5.44 ಲಕ್ಷ ಕೋಟಿ). ತಮ್ಮ ಸಂಸ್ಥೆಗೆ ಫೇಸ್​ಬುಕ್​, ಕ್ವಾಲ್​ಕಾಮ್​ ಮುಂತಾದ ಕಂಪನಿಗಳಿಂದ ಹರಿದುಬಂದಿರುವ ಹೂಡಿಕೆಯಿಂದ ಕಂಪನಿಯ ಶೇರ್​ ಮೌಲ್ಯ ದ್ವಿಗುಣವಾಗಿ ಇವರ ನಿವ್ವಳ ಮೌಲ್ಯ ಏರಿಕೆ ಕಂಡಿದೆ ಎಂದು ತಿಳಿದುಬಂದಿದೆ.

ಇಂಧನ ಕ್ಷೇತ್ರದ ಜೊತೆಗೆ ಇ-ವಾಣಿಜ್ಯದಲ್ಲೂ ವ್ಯವಹಾರ ನಡೆಸಲು ಮುಂದಾಗಿರುವುದು ಮುಕೇಶ್​ಗೆ ಮತ್ತಷ್ಟು ಲಾಭ ತಂದುಕೊಟ್ಟಿದೆ ಎಂದು ತಿಳಿದುಬಂದಿದೆ. ಇದೀಗ ಈ ಭಾರತದ ಅತಿದೊಡ್ಡ ಶ್ರೀಮಂತ ವಿಶ್ವದ ಹಲವಾರು ಕೋಟ್ಯಾಧಿಪತಿಗಳನ್ನು ಹಿಂದಿಕ್ಕಿ ಮುಂದೆ ಹೋಗಿದ್ದಾರೆ. ಹೌದು, ಪ್ರತಿಷ್ಠಿತ ಅಮೆರಿಕ ಉದ್ಯಮಿ ಇಲಾನ್​ ಮಸ್ಕ್​ ಹಾಗೂ ಗೂಗಲ್​ ಕಂಪನಿಯ ಸಂಸ್ಥಾಪಕರಾದ ಸರ್ಗೇ ಬ್ರಿನ್​ ಮತ್ತು ಲ್ಯಾರಿ ಪೇಜ್​ರನ್ನ ಹಿಂದಿಕ್ಕಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada