ರಾಜಕೀಯದ ಬಿಸಿ ನಡುವೆಯೂ ಕೊರೊನಾ ನಿಯಮ ಪಾಲಿಸಿದ ರಾಜ್ಯಪಾಲ-ಸಿಎಂ!
ಜೈಪುರ: ರಾಜಸ್ಥಾನದಲ್ಲಿ ರಾಜಕೀಯ ಚಟುವಟಿಕೆ ಭಾರೀ ಬಿಸಿಯೇರಿದೆ. ಆದ್ರೂ ರಾಜ್ಯಪಾಲ ಕಲ್ರಾಜ್ ಮಿಶ್ರಾ ಮತ್ತು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೊರೊನಾ ನಿಯಮವನ್ನ ಪಾಲಿಸಿ ಇತರರಿಗೆ ಮಾದರಿಯಾಗಿದ್ದಾರೆ. ಹೌದು ರಾಜಸ್ಥಾನದಲ್ಲಿ ರಾಜಕೀಯ ಚಟುವಟಿಕೆ ತಾರಕಕ್ಕೇರಿದೆ. ತಮ್ಮ ಸರ್ಕಾರವನ್ನ ಬೀಳಿಸಲು ಬಿಜೆಪಿ ಷಡ್ಯಂತ್ರ ನಡೆಸಿದೆಯಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲ ತಮ್ಮ ವಿರುದ್ಧ ಬಂಡೆದ್ದ ಸಚಿನ್ ಪೈಲಟ್ ಮತ್ತು ಅವರ ಸಹವರ್ತಿಗಳಿಗೆ ಸಚಿವ ಸಂಪುಟದಿಂದ ಗೇಟ್ ಪಾಸ್ ನೀಡಿದ್ದಾರೆ. ಈ ಸಂಬಂಧ ರಾಜ್ಯಪಾಲರಿಗೆ ತಿಳಿಸಲು ರಾಜಭವನಕ್ಕೆ ತೆರಳಿದ್ದ […]
ಜೈಪುರ: ರಾಜಸ್ಥಾನದಲ್ಲಿ ರಾಜಕೀಯ ಚಟುವಟಿಕೆ ಭಾರೀ ಬಿಸಿಯೇರಿದೆ. ಆದ್ರೂ ರಾಜ್ಯಪಾಲ ಕಲ್ರಾಜ್ ಮಿಶ್ರಾ ಮತ್ತು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೊರೊನಾ ನಿಯಮವನ್ನ ಪಾಲಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಹೌದು ರಾಜಸ್ಥಾನದಲ್ಲಿ ರಾಜಕೀಯ ಚಟುವಟಿಕೆ ತಾರಕಕ್ಕೇರಿದೆ. ತಮ್ಮ ಸರ್ಕಾರವನ್ನ ಬೀಳಿಸಲು ಬಿಜೆಪಿ ಷಡ್ಯಂತ್ರ ನಡೆಸಿದೆಯಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲ ತಮ್ಮ ವಿರುದ್ಧ ಬಂಡೆದ್ದ ಸಚಿನ್ ಪೈಲಟ್ ಮತ್ತು ಅವರ ಸಹವರ್ತಿಗಳಿಗೆ ಸಚಿವ ಸಂಪುಟದಿಂದ ಗೇಟ್ ಪಾಸ್ ನೀಡಿದ್ದಾರೆ.
ಈ ಸಂಬಂಧ ರಾಜ್ಯಪಾಲರಿಗೆ ತಿಳಿಸಲು ರಾಜಭವನಕ್ಕೆ ತೆರಳಿದ್ದ ಗೆಹ್ಲೋಟ್‌ರನ್ನ ಬರಮಾಡಿಕೊಂಡ ರಾಜ್ಯಪಾಲ ಕಲ್ರಾಜ್ ಮಿಶ್ರಾ, ಮುಖ್ಯಮಂತ್ರಿಯ ಕೈಗಳಿಗೆ ಸ್ಯಾನಿಟೈಸರ್ ಹಾಕಿ ಅವರ ಕೈಗಳನ್ನ ಹ್ಯಾಂಡ್ ವಾಶ್ ಮಾಡಲು ನೆರವಾದರು. ಕಲ್ರಾಜ್ ಬಿಜೆಪಿಯ ಹಿನ್ನೆಲೆಯಿಂದ ಬಂದವರು, ಗೆಹ್ಲೋಟ್ ಕಾಂಗ್ರೆಸ್‌ನವರು. ಸಂವಿಧಾನಬದ್ದ ಸ್ಥಾನದಲ್ಲಿರುವ ನಾಯಕರು ಕೊರೊನಾ ನಿಯಮ ಪಾಲಿಸಿ ಮೆಚ್ಚುಗೆ ಗಳಿಸಿದ್ದಾರೆ.