ದೇಣಿಗೆ ಕೊಡಲು ಇಷ್ಟವಿಲ್ಲ ಅಂದರೆ ಹೆಚ್.ಡಿ. ಕುಮಾರಸ್ವಾಮಿ ಕೊಡುವುದು ಬೇಡ: ಸಚಿವ ನಾರಾಯಣಗೌಡ

ದೇಣಿಗೆ ಕೊಡಲು ಇಷ್ಟವಿಲ್ಲ ಅಂದರೆ ಹೆಚ್.ಡಿ.ಕುಮಾರಸ್ವಾಮಿ ಕೊಡುವುದು ಬೇಡ. ಅದನ್ನು ಬಿಟ್ಟು ಬೇಕಾಬಿಟ್ಟಿ ಮಾತನಾಡುವುದು ಸರಿಯಲ್ಲ. ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ ಎಂದು ಸಚಿವ ನಾರಾಯಣಗೌಡ ಹೇಳಿದರು.

ದೇಣಿಗೆ ಕೊಡಲು ಇಷ್ಟವಿಲ್ಲ ಅಂದರೆ ಹೆಚ್.ಡಿ. ಕುಮಾರಸ್ವಾಮಿ ಕೊಡುವುದು ಬೇಡ: ಸಚಿವ ನಾರಾಯಣಗೌಡ
ಸಚಿವ ನಾರಾಯಣಗೌಡ
Edited By:

Updated on: Feb 17, 2021 | 6:13 PM

ಮಂಡ್ಯ: ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ (Ayodhya Ram Mandir Construction) ನಿಧಿ ಸಂಗ್ರಹವಾಗುತ್ತಿರುವುದರ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ  ನಾರಾಯಣಗೌಡ ದೇಣಿಗೆ ಕೊಡಲು ಇಷ್ಟವಿಲ್ಲ ಅಂದರೆ ಹೆಚ್.ಡಿ.ಕುಮಾರಸ್ವಾಮಿ ಕೊಡುವುದು ಬೇಡ. ಅದನ್ನು ಬಿಟ್ಟು ಬೇಕಾಬಿಟ್ಟಿ ಮಾತನಾಡುವುದು ಸರಿಯಲ್ಲ. ಒಂದು ದೇವಸ್ಥಾನ ಕಟ್ಪಲಾಗುತ್ತಿದೆ. ಸುಪ್ರೀಂ ಕೋರ್ಟ್ ಕೂಡ ಅನುಮತಿ ನೀಡಿದೆ. ಆದರೆ ಏಕೆ ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ. ಹಣ ನೀಡದ ಮನೆಗಳಿಗೆ ಮಾರ್ಕ್ (Marking) ಮಾಡುತ್ತಿರುವ ಹೇಳಿಕೆ ನಾನು ಕೇಳಿಸಿಕೊಂಡಿಲ್ಲ. ಆದರೆ ಆ ರೀತಿ ನಡೆಯುತ್ತಿಲ್ಲ ಎಂದರು.

ಬಿಜೆಪಿಗೆ ಬರಲು ಮತ್ತಷ್ಟು ಕಾಂಗ್ರೆಸ್, ಜೆಡಿಎಸ್ ಶಾಸಕರು ಸಿದ್ಧ; ಸಚಿವ ನಾರಾಯಣಗೌಡ
ಬಿಜೆಪಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತಷ್ಟು ಶಾಸಕರು ಬರಲು ಸಿದ್ಧರಾಗಿದ್ದಾರೆ. ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿ ಇರುವುದು ಸತ್ಯ. 25 ವರ್ಷ ಬಿಜೆಪಿಯನ್ನು ಯಾರೂ ಟಚ್ ಮಾಡಕ್ಕೆ ಆಗಲ್ಲ ಎಂದೂ ಸಚಿವ ನಾರಾಯಣಗೌಡ ಇದೇ ಸಂದರ್ಭದಲ್ಲಿ ಹೇಳಿದರು.

ಇದನ್ನು ಓದಿ
ಹಿಟ್ಲರ್​ನ ನಾಜಿ ಪಡೆಯಂತೆಯೇ RSS ಕ್ರೂರವಾಗಿ ವರ್ತಿಸುತ್ತಿದೆ – ಎಚ್ ಡಿ ಕುಮಾರಸ್ವಾಮಿ

ಇದನ್ನು ಓದಿ
ರಾಮ ಮಂದಿರಕ್ಕೆ ದೇಣಿಗೆ ಕೊಡುವುದಿಲ್ಲ: ಸಿದ್ದರಾಮಯ್ಯ!