ನನ್ನ ಮಕ್ಕಳು, ಮೊಮ್ಮಕ್ಕಳು BJPಯಲ್ಲೇ ಇರಬೇಕೆಂದು ವಿಲ್​ನಲ್ಲಿ ಬರೆದಿಟ್ಟು ಬಿಡುತ್ತೇನೆ -ಸಚಿವ ನಾರಾಯಣಗೌಡ

|

Updated on: Feb 26, 2021 | 8:56 PM

ನಾನು ನನ್ನ ಮಕ್ಕಳು, ಮೊಮ್ಮಕ್ಕಳು ಬಿಜೆಪಿಯಲ್ಲೇ ಇರ್ತೇವೆ. ಅವರೆಲ್ಲರೂ ಬಿಜೆಪಿಯಲ್ಲಿರಬೇಕೆಂದು ವಿಲ್​ನಲ್ಲಿ ಬರೆದಿಟ್ಟು ಬಿಡುತ್ತೇನೆ. ಬಿಜೆಪಿ ಬಿಟ್ಟು ಯಾರು ಹೋಗಲ್ಲ ಎಂದು ಕ್ರೀಡಾ ಸಚಿವ ನಾರಾಯಣಗೌಡ ಪ್ರತಿಕ್ರಿಯಿಸಿದ್ದಾರೆ.

ನನ್ನ ಮಕ್ಕಳು, ಮೊಮ್ಮಕ್ಕಳು BJPಯಲ್ಲೇ ಇರಬೇಕೆಂದು ವಿಲ್​ನಲ್ಲಿ ಬರೆದಿಟ್ಟು ಬಿಡುತ್ತೇನೆ -ಸಚಿವ ನಾರಾಯಣಗೌಡ
ಕೆ.ಸಿ.ನಾರಾಯಣಗೌಡ
Follow us on

ಉಡುಪಿ: ಇನ್ನೂ ಈ ತರಹ ತುಂಬಾ ಬೆಳವಣಿಗೆ ಆಗುತ್ತವೆ, ಕಾದುನೋಡಿ. ಸಿದ್ದರಾಮಯ್ಯ, ಡಿಕೆಶಿ ಮಧ್ಯೆ ಗಲಾಟೆ ದೊಡ್ಡಮಟ್ಟಕ್ಕೆ ಆಗುತ್ತೆ ಎಂದು ಮೈಸೂರು ಪಾಲಿಕೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ವಿಚಾರವಾಗಿ ನಗರದಲ್ಲಿ ಕ್ರೀಡಾ ಸಚಿವ ನಾರಾಯಣಗೌಡ ಪ್ರತಿಕ್ರಿಯಿಸಿದ್ದಾರೆ. ಇನ್ನೂ 25 ವರ್ಷ ಬಿಜೆಪಿಯನ್ನು ಅಲುಗಾಡಿಸಲು ಸಾಧ್ಯವಿಲ್ಲ.ಕರ್ನಾಟಕದಲ್ಲಿ ಬಿಜೆಪಿಯನ್ನು ಅಲುಗಾಡಿಸಲು ಸಾಧ್ಯವಿಲ್ಲ. ರಾಜ್ಯದ ಭವಿಷ್ಯ ಇರೋದೇ ಭಾರತೀಯ ಜನತಾ ಪಕ್ಷದಲ್ಲಿ. ಅದಕ್ಕೆ ನಾವು ಬಿಜೆಪಿಗೆ ಬಂದಿದ್ದೇವೆ ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

ನಾನು ಬಿಜೆಪಿಗೆ ಬಂದು ಒಳ್ಳೆಯ ಕೆಲಸವನ್ನ ಮಾಡಿದೆ. ನಾನು ನನ್ನ ಮಕ್ಕಳು, ಮೊಮ್ಮಕ್ಕಳು ಬಿಜೆಪಿಯಲ್ಲೇ ಇರ್ತೇವೆ. ಅವರೆಲ್ಲರೂ ಬಿಜೆಪಿಯಲ್ಲಿರಬೇಕೆಂದು ವಿಲ್​ನಲ್ಲಿ ಬರೆದಿಟ್ಟು ಬಿಡುತ್ತೇನೆ. ಬಿಜೆಪಿ ಬಿಟ್ಟು ಯಾರು ಹೋಗಲ್ಲ ಎಂದು ಕ್ರೀಡಾ ಸಚಿವ ನಾರಾಯಣಗೌಡ ಪ್ರತಿಕ್ರಿಯಿಸಿದ್ದಾರೆ.

ಗುಜರಾತ್ ಕ್ರಿಕೆಟ್ ಕ್ರೀಡಾಂಗಣಕ್ಕೆ ಪ್ರಧಾನಿ ಮೋದಿ ಹೆಸರಿಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತವಾದ ಬಗ್ಗೆ ಕ್ರೀಡಾಂಗಣ ಅಭಿವೃದ್ಧಿಯಾಗಿದ್ದು ಮೋದಿಯವರಿಂದ ಅಲ್ವಾ. ಆಕ್ಷೇಪ ವ್ಯಕ್ತಪಡಿಸುವುದು ಕೇವಲ ರಾಜಕಾರಣ. ಈ ರಾಜಕಾರಣಕ್ಕೆ ಯಾರು ತಲೆ ಕೆಡಿಸಿಕೊಳ್ಳಬಾರದು. ಅಭಿವೃದ್ಧಿಗೆ ಮೋದಿ ಕಾರಣ ಅಂದ್ಮೇಲೆ ಅವರ ಹೆಸರು ಇಡೋದ್ರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು. ದೇಶದಲ್ಲಿ ಕ್ರೀಡೆಗೆ ಶಕ್ತಿ ತುಂಬಿದವರು ಬೇರೆ ಯಾರಾದರೂ ಇದ್ದಾರಾ? ಮೋದಿಯವರ ಹೆಸರಿಟ್ಟರೆ ಕ್ರೀಡಾಕ್ಷೇತ್ರ ಮತ್ತಷ್ಟು ಉತ್ತಮ ಸ್ಥಾನಕ್ಕೆ ಹೋಗುತ್ತೆ ಎಂದು ನಾರಾಯಣಗೌಡ ಪ್ರತಿಕ್ರಿಯಿಸಿದ್ದಾರೆ.

‘ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಬಿಜೆಪಿ ಸದೃಢವಾಗಿದೆ’
ಕರ್ನಾಟಕ ರಾಜ್ಯದಲ್ಲಿ ಬಿಜೆಪಿಗೆ ಲೈಫ್ ಕೊಟ್ಟವನೇ ನಾನು ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಚಿಕ್ಕಮಗಳೂರಿನಲ್ಲಿ ಡಿಸಿಎಂ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ. ಮೋದಿ ನೇತೃತ್ವದಲ್ಲಿ ದೇಶವೇ ಭಾರತೀಯ ಜನತಾ ಪಕ್ಷವಾಗಿದೆ. 23 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಹೆಚ್.ಡಿ.ಕುಮಾರಸ್ವಾಮಿ ಆಶೀರ್ವಾದದಿಂದಲೇ ಬಂದಿದೆಯಾ? ಎಂದು ಕಾರಜೋಳ ಪ್ರಶ್ನಿಸಿದರು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಬಿಜೆಪಿ ಸದೃಢವಾಗಿದೆ ಎಂದು ಚಿಕ್ಕಮಗಳೂರಲ್ಲಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

‘ಇವತ್ತು ಕಾಂಗ್ರೆಸ್ ಮುಕ್ತ ಭಾರತವಾಗಿದೆ, ಕಾಂಗ್ರೆಸ್ ಎಲ್ಲಿದೆ’
ಕಾಂಗ್ರೆಸ್​ ಮುಕ್ತ ಭಾರತ ಆಗುತ್ತೆ ಎಂದು ಪ್ರಧಾನಿ ಹೇಳಿದ್ದರು. ಇವತ್ತು ಕಾಂಗ್ರೆಸ್ ಮುಕ್ತ ಭಾರತವಾಗಿದೆ, ಕಾಂಗ್ರೆಸ್ ಎಲ್ಲಿದೆ? ಎಂದು ಡಿಸಿಎಂ ಗೋವಿಂದ ಕಾರಜೋಳ ಪ್ರಶ್ನೆ ಹಾಕಿದರು. ರಾಜ್ಯದಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿದೆ, 3 ಗುಂಪುಗಳಿವೆ. ಸಿದ್ದರಾಮಯ್ಯರದ್ದು ಒಂದು ಗುಂಪು, ಡಿಕೆಶಿಯದ್ದು ಗುಂಪು. ಮಲ್ಲಿಕಾರ್ಜುನ ಖರ್ಗೆಯವರದ್ದು ಇನ್ನೊಂದು ಗುಂಪು. 3 ಗುಂಪುಗಳ ಮಧ್ಯೆ 24 ಗಂಟೆಯೂ ಗುದ್ದಾಟ ನಡೆದಿರುತ್ತೆ. ಆ ಗುದ್ದಾಟ ಹೊಸದಲ್ಲ, ಅದರಲ್ಲೇ ಕಾಂಗ್ರೆಸ್ ನೆಲಕಚ್ಚಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ಇದನ್ನೂ ಓದಿ: ‘ಓರ್ವ ಮುಸ್ಲಿಂ ಆಗಿ ಸಿದ್ದರಾಮಯ್ಯರನ್ನು ಬೈದರೆ ಜನ ತುಳಿದು ಹಾಕುತ್ತಾರೆ.. ಅವರು ಹುಲಿ, ಮಹಾನ್ ವ್ಯಕ್ತಿ’