‘ಓರ್ವ ಮುಸ್ಲಿಂ ಆಗಿ ಸಿದ್ದರಾಮಯ್ಯರನ್ನು ಬೈದರೆ ಜನ ತುಳಿದು ಹಾಕುತ್ತಾರೆ.. ಅವರು ಹುಲಿ, ಮಹಾನ್ ವ್ಯಕ್ತಿ’

ಸಿದ್ದರಾಮಯ್ಯ ಅವರಿಂದ ಅಲ್ಪಸಂಖ್ಯಾತರಿಗೆ ಗೌರವ ಬಂದಿದೆ. ಓರ್ವ ಮುಸ್ಲಿಂ ಆಗಿ ಸಿದ್ದರಾಮಯ್ಯರನ್ನು ಬೈದರೆ ಜನ ತುಳಿದು ಹಾಕುತ್ತಾರೆ. ಘೋಷಣೆ ಕೂಗಿದವರಿಗೆ ನಾಚಿಕೆ ಆಗಲ್ವಾ? ಎಂದು ಮಾಜಿ ಮೇಯರ್ ಆರೀಫ್ ಹುಸೇನ್ ಪ್ರಶ್ನಿಸಿದರು.

‘ಓರ್ವ ಮುಸ್ಲಿಂ ಆಗಿ ಸಿದ್ದರಾಮಯ್ಯರನ್ನು ಬೈದರೆ ಜನ ತುಳಿದು ಹಾಕುತ್ತಾರೆ.. ಅವರು ಹುಲಿ, ಮಹಾನ್ ವ್ಯಕ್ತಿ’
ಸಿದ್ದರಾಮಯ್ಯ
Follow us
KUSHAL V
|

Updated on:Feb 26, 2021 | 7:28 PM

ಮೈಸೂರು: ನಮ್ಮ ಜೊತೆ ಇದ್ದ ಸದಸ್ಯರನ್ನ ಮಾರಾಟ ಮಾಡಿದರು. ಪಕ್ಷೇತರ ಸದಸ್ಯರನ್ನ ನಮ್ಮವರೇ ಮಾರಾಟ ಮಾಡಿದರು. ಇನ್ನೂ ಇಬ್ಬರನ್ನು ಮಾರಾಟ ಮಾಡುವುದಕ್ಕೆ ಯತ್ನಿಸಿದರು ಎಂದು ನಗರದಲ್ಲಿ ಮಾಜಿ ಮೇಯರ್ ಆರೀಫ್ ಹುಸೇನ್ ಹೇಳಿದರು. ಕಳೆದ ಕೆಲವು ದಿನಗಳ ಹಿಂದೆ ಅತ್ಯಂತ ರೋಚಕ ತಿರುವುಗಳು ಹಾಗೂ ಸನ್ನಿವೇಶಗಳಿಗೆ ಸಾಕ್ಷಿಯಾದ ಮೈಸೂರು ಮಹಾನಗರ ಪಾಲಿಕೆಯ ಮೇಯರ್​ ಹಾಗೂ ಉಪ ಮೇಯರ್​ ಎಲೆಕ್ಷನ್​ ಕುರಿತು ಕಾಂಗ್ರೆಸ್ ಪಾಲಿಕೆ ಸದಸ್ಯರು ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಆರೀಫ್​ ಹುಸೇನ್​ ಮಾತನಾಡಿದರು. ಮಾಜಿ ಮೇಯರ್ ಅಯೂಬ್ ಖಾನ್ ನೇತೃತ್ವದಲ್ಲಿ ಮಾಧ್ಯಮಗೋಷ್ಠಿ ನಡೆಯಿತು.

‘ಬಿಜೆಪಿ ಜೊತೆ ವ್ಯವಹಾರ ಕುದುರಿಲ್ಲ.. ಹಾಗಾಗಿ, ಕಾಂಗ್ರೆಸ್​ನವರಿಂದ ವ್ಯಾಪಾರವಾಗಿದೆ’ ನಾವು ತನ್ವೀರ್‌ ಸೇಠ್​​ರನ್ನ ಮಾತಾಡಲು ಕಳುಹಿಸಿದ್ದೆವು. ಕುಮಾರಸ್ವಾಮಿ ಜೊತೆಗೆ ಮಾತನಾಡಲು ಕಳುಹಿಸಿದ್ದೆವು. ಆದರೆ H.D.ಕುಮಾರಸ್ವಾಮಿ ವ್ಯಾಪಾರ ಮಾಡುತ್ತಿದ್ದರು. ಬಿಜೆಪಿ, ಕಾಂಗ್ರೆಸ್ ಮುಖಂಡರ ಕೂರಿಸಿಕೊಂಡು ವ್ಯಾಪಾರ ಮಾಡುತ್ತಿದ್ದರು. ಬಿಜೆಪಿ ಜೊತೆ ವ್ಯವಹಾರ ಕುದುರಿಲ್ಲ. ಹಾಗಾಗಿ, ಕಾಂಗ್ರೆಸ್​ನವರಿಂದ ವ್ಯಾಪಾರವಾಗಿದೆ ಎಂದು ಆರೀಫ್​ ಹುಸೇನ್​ ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿಬಂದ ವಿಚಾರವಾಗಿ ಇದು ಕುಮಾರಸ್ವಾಮಿ ಹಾಗೂ ತನ್ವೀರ್ ಸೇಠ್ ಷಡ್ಯಂತ್ರ. ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಬೇಕು ಎಂದು ಹಣ ನೀಡಿ ಆಮಿಷವೊಡ್ಡಿದರು. ಘೋಷಣೆ ಕೂಗಿದವರು ಪೋಲಿ ಹುಡುಗರು ಎಂದು ಆರೀಫ್​ ಹುಸೇನ್​ ಹೇಳಿದರು.

‘ಸಿದ್ದರಾಮಯ್ಯ ವಿರುದ್ಧ ಹೋಗುವುದಕ್ಕೆ ಸಾಧ್ಯವಿಲ್ಲ’ 4 ಜನ ಕಟ್ಟಿಕೊಂಡು ರಾಜಕಾರಣ ಮಾಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ ವಿರುದ್ಧ ಹೋಗುವುದಕ್ಕೆ ಸಾಧ್ಯವಿಲ್ಲ. ಅವರಿಗೆ ಅವಮಾನ ಮಾಡಬೇಕು ಅನ್ನೋ ಹುನ್ನಾರ ನಡೆದಿದೆ. ಸಿದ್ದರಾಮಯ್ಯ ಅವರಿಂದ ಅಲ್ಪಸಂಖ್ಯಾತರಿಗೆ ಗೌರವ ಬಂದಿದೆ. ಓರ್ವ ಮುಸ್ಲಿಂ ಆಗಿ ಸಿದ್ದರಾಮಯ್ಯರನ್ನು ಬೈದರೆ ಜನ ತುಳಿದು ಹಾಕುತ್ತಾರೆ. ಘೋಷಣೆ ಕೂಗಿದವರಿಗೆ ನಾಚಿಕೆ ಆಗಲ್ವಾ? ಎಂದು ಮಾಜಿ ಮೇಯರ್ ಆರೀಫ್ ಹುಸೇನ್ ಪ್ರಶ್ನಿಸಿದರು. ಘೋಷಣೆ ಕೂಗಿ ಮೀರ್ ಸಾದಕ್ ಕೆಲಸ ಮಾಡಿದ್ದಾರೆ ಎಂದು ಹೇಳಿದರು. ಇದಲ್ಲದೆ, ಸಿದ್ದರಾಮಯ್ಯಗೆ ಆರೀಫ್ ಹುಸೇನ್ ಗದ್ಗದಿತರಾಗಿ ಕ್ಷಮೆಯಾಚಿಸಿದರು.

ಹಿಂದೆ ದೇವರಾಜ ಅರಸ್​ ಅವರಿಗೂ ಇದೇ ರೀತಿ ಮಾಡಲಾಗಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಹುಲಿ, ಮಹಾನ್ ವ್ಯಕ್ತಿ. ಮಂತ್ರಿ ಸ್ಥಾನ ನೀಡಿದವರಿಗೆ ಇದೇ ಗೌರವ ಕೊಡೋದಾ? ರಾಜ್ಯದ ಶೇ.95ರಷ್ಟು ಮುಸ್ಲಿಮರು ಸಿದ್ದರಾಮಯ್ಯ ಜೊತೆ ಇದ್ದಾರೆ ಎಂದು ಹೇಳಿದರು. ನಿಮ್ಮ ಡೀಲ್​ಗೆ ಪಕ್ಷವನ್ನು ಮಾರಿದ್ದೀರಿ. ನಾವು ಅವರನ್ನ ಸಸ್ಪೆಂಡ್ ಮಾಡಲು ಒತ್ತಡ ಹೇರುತ್ತೇವೆ. ಮೈಸೂರು ಜಿಲ್ಲಾ ಕಾಂಗ್ರೆಸ್‌ ಘಟಕದಿಂದ ಒತ್ತಡ ಹೇರುತ್ತೇವೆ ಎಂದು ಸಹ ಹೇಳಿದರು.

MYS CONGRESS PC 1

ಕಾಂಗ್ರೆಸ್ ಪಾಲಿಕೆ ಸದಸ್ಯರ ಮಾಧ್ಯಮಗೋಷ್ಠಿ

‘ಪಕ್ಷ ಅಡವಿಟ್ಟು ಬಿಜೆಪಿ ದೂರವಿಡುವುದು ನಮ್ಮ ನೀತಿ ಅಲ್ಲ’ ಈ ಮಧ್ಯೆ ಮಾತನಾಡಿದ ಮಾಜಿ ಮೇಯರ್ ಅಯೂಬ್ ಖಾನ್ ಪಕ್ಷ ಅಡವಿಟ್ಟು ಬಿಜೆಪಿ ದೂರವಿಡುವುದು ನಮ್ಮ ನೀತಿ ಅಲ್ಲ. ಇಲ್ಲಿ ನಡೆದ ವಿವರ ಸಿದ್ದರಾಮಯ್ಯ, ಡಿಕೆಶಿಗೆ ತಿಳಿಸಿದ್ದೇನೆ. ಸಿದ್ದರಾಮಯ್ಯನವರ ವಿರುದ್ಧ ಘೋಷಣೆ ಕೂಗಿದ್ದು ತಪ್ಪು. ತನ್ವೀರ್​ ಸೇಠ್​ 5 ಬಾರಿ MLA ಆದವ್ರು, ಮಂತ್ರಿ ಆದವರು. ಅವರೇ ಈ ರೀತಿ ಮಾಡಿದರೆ ಹೇಗೆ ಪಕ್ಷ ಕಟ್ಟುವುದು? ಎಂದು ಪ್ರಶ್ನಿಸಿದರು.

‘ಸಿದ್ದರಾಮಯ್ಯ ಅವರ ಋಣ ತೀರಿಸುವ ಬದಲು ದ್ರೋಹ ಬಗೆದಿದ್ದಾರೆ’ ಚುನಾವಣೆ ವೇಳೆ 12 ಬಾರಿ ಸಿದ್ದರಾಮಯ್ಯ ಕರೆ ಮಾಡಿದ್ದಾರೆ. ಆದರೆ ತನ್ವೀರ್​ ಸೇಠ್​​ ಸಿದ್ದರಾಮಯ್ಯನವರ ಕರೆ ಸ್ವೀಕರಿಸಿಲ್ಲ. ಡಿಕೆಶಿ ಸಹ ಮೇಯರ್ ಸ್ಥಾನ ತೆಗೆದುಕೊಳ್ಳಲು ಹೇಳಿದ್ದರು. ನಾನು ಆ ಸಂದೇಶವನ್ನು ತನ್ವೀರ್ ಸೇಠ್‌ಗೂ ತಲುಪಿಸಿದ್ದೆ. ಆದರೆ ತನ್ವೀರ್​ ಸೇಠ್ ಅದನ್ನ ಗಣನೆಗೆ ತೆಗೆದುಕೊಳ್ಳಲಿಲ್ಲ. ತನ್ವೀರ್ ಸೇಠ್​​ರನ್ನು ಮಂತ್ರಿ ಮಾಡಿದ್ದೇ ಸಿದ್ದರಾಮಯ್ಯ. ಅವರ ಋಣ ತೀರಿಸುವ ಬದಲು ದ್ರೋಹ ಬಗೆದಿದ್ದಾರೆ. ಇದನ್ನು ನಾವು ಸಹಿಸಿಕೊಳ್ಳುವುದಿಲ್ಲ ಎಂದ ಅಯೂಬ್ ಖಾನ್ ಹೇಳಿದರು.

ಅವತ್ತೇ ಚುನಾವಣೆಯಿಂದ ವಾಕ್​ಔಟ್​ ಮಾಡಬಹುದಿತ್ತು. ಆದರೆ ಪಕ್ಷದ ಗೌರವಕ್ಕಾಗಿ ನಾವು ಆ ರೀತಿ ಮಾಡಲಿಲ್ಲ.ತನ್ವೀರ್ ಸೇಠ್ HDK ಮೆಚ್ಚಿಸಲು ಈ ಕೆಲಸ ಮಾಡಿದ್ರಾ? ಅಥವಾ ಅವರ ಜತೆ ಹೋಗಲು ಈ ನಿರ್ಧಾರ ಮಾಡಿದ್ರಾ? ಎಂದು ಮಾಜಿ ಮೇಯರ್ ಅಯೂಬ್ ಖಾನ್ ಪ್ರಶ್ನೆ ಹಾಕಿದರು.

ಮೂರನೇ ವರ್ಷ ನಮಗೆ ಮೇಯರ್ ಸ್ಥಾನ ಸಿಗಬೇಕಿತ್ತು. ಸಿದ್ದರಾಮಯ್ಯ ಅದನ್ನೇ ಹೇಳಿದ್ದರು. ಬಿಜೆಪಿ ದೂರ ಇಡಲು ಮೈತ್ರಿ ಆಗಿತ್ತು. ಕೆಪಿಸಿಸಿ ಅಧ್ಯಕ್ಷರು ಮತ್ತು ಸಿಎಲ್‌ಪಿ ನಾಯಕರ ನಿರ್ದೇಶನದಂತೆ ಚುನಾವಣೆ ಆಗಿಲ್ಲ. ಶಾಂತಕುಮಾರಿ ನಮ್ಮ ಅಧಿಕೃತ ಅಭ್ಯರ್ಥಿ ಆಗಿದ್ದರು. ಆದರೆ, ಒಳಗೆ ಆದ ತೀರ್ಮಾನ ನಮ್ಮ ಪಕ್ಷದ ನಾಯಕರ ವಿರುದ್ಧವಾಗಿದೆ.

ಸಿದ್ದರಾಮಯ್ಯ ವಿರುದ್ದ ಘೋಷಣೆ ವಿಚಾರವಾಗಿ ಇದಕ್ಕೆ ಕಾರಣ ನಮಗೆ ಗೊತ್ತಾಗಿಲ್ಲ. ಸಿಎಲ್‌ಪಿ ನಾಯಕರ ಮಾತು ಎಲ್ಲರೂ ಕೇಳಬೇಕು. ಜೆಡಿಎಸ್‌ಗೆ ಮೇಯರ್ ಸ್ಥಾನಕ್ಕೆ ನಾವು ವಿರೋಧ ವ್ಯಕ್ತಪಡಿಸಿದೆವು. ಆದರೆ ಏಕಾಏಕಿ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ಮಾಜಿ ಮೇಯರ್ ಅಯೂಬ್ ಖಾನ್ ಹೇಳಿದರು.

‘ನಾಮಪತ್ರ ಸಲ್ಲಿಸಿದ ನಂತರ ಎಲ್ಲಾ ಬದಲಾಗಿದೆ’ ಫೆ.23ರಂದು ಸಭೆ ನಡೆಸಿ ಮೇಯರ್ ಸ್ಥಾನ ಪಡೆಯಲು ತೀರ್ಮಾನ ಮಾಡಿದ್ದೆವು. ಡಿಕೆಶಿ, ಸಿದ್ದರಾಮಯ್ಯ ಪಾಲಿಕೆ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಆಯ್ಕೆ ಮಾಡಿದ್ದರು. ಒಂದು ವಾರದ ಮೊದಲು ನಾನು, ತನ್ವೀರ್ ಸಾ.ರಾ.ಮಹೇಶ್​ರನ್ನು ಭೇಟಿ ಮಾಡಿದ್ದೆವು. ಹಿಂದಿನ ಒಪ್ಪಂದದಂತೆ ನಡೆದುಕೊಳ್ಳಬೇಕು ಅಂತಾ ಹೇಳಿದ್ದೆವು. ಆದರೆ, ನಾಮಪತ್ರ ಸಲ್ಲಿಸಿದ ನಂತರ ಎಲ್ಲಾ ಬದಲಾಗಿದೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಆರ್ ಮೂರ್ತಿ ಹೇಳಿದರು.

ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿ ಕುಳಿತರೂ ಪರವಾಗಿಲ್ಲ ಅಂತಾ ಹೇಳಿದ್ದರು. ಕೊನೆ ಕ್ಷಣದವರೆಗೂ ಅದನ್ನೇ ಹೇಳಿದ್ದರು. ಎಲ್ಲಾ ಸದಸ್ಯರು ಒಳಗೆ ಹೋದ ಮೇಲೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ ಕಾಂಗ್ರೆಸ್‌ಗೆ ಮೇಯರ್ ಅಂತಾ. ಈ ರೀತಿ ಸಂದೇಶ ಸಹ ಬಂದಿತ್ತು ಎಂದು ಮೂರ್ತಿ ಹೇಳಿದರು.

ಇದನ್ನೇ ನಾವು ನಮ್ಮ ಸದಸ್ಯರಿಗೆ ತಿಳಿಸಿದ್ದೆವು. ಈ ಚುನಾವಣೆಯಲ್ಲಿ ವಿಪ್ ಉಲ್ಲಂಘನೆ ಆಗಿದೆ. ನಮ್ಮ ಪಕ್ಷದ ಸದಸ್ಯರಿಂದ ಉಲ್ಲಂಘನೆ ಆಗಿದೆ. ಚುನಾವಣೆ ನಂತರ ಕುಮಾರಸ್ವಾಮಿ ಒಂದು ಧನ್ಯವಾದ ಹೇಳಿಲ್ಲ. ಅವರ ಪಕ್ಷದ ಬಲ ತೋರಿಸಿರುವುದಾಗಿ ಹೇಳಿದ್ದಾರೆ. ಹೀಗಾಗಿ ಇದು ಮೈತ್ರಿ ಎಲ್ಲಿ ಆಗಿದೆ? ಇದು ದ್ರೋಹ ಮಾಡಿರುವುದು. ಹೆಚ್.ಡಿ.ದೇವೇಗೌಡರನ್ನು ರಾಜ್ಯ ಸಭಾ ಸದಸ್ಯ ಮಾಡಿದ್ದು ಕಾಂಗ್ರೆಸ್ ಎಂದು ಮೂರ್ತಿ ಹೇಳಿದರು. ಜೊತೆಗೆ, ಪಕ್ಷದ ನಾಯಕರ ವಿರುದ್ದ ಧ್ವನಿ ಎತ್ತುವವರಿಗೆ ಶೋಕಾಸ್ ನೋಟಿಸ್ ನೀಡಲಾಗುವುದು. ಅವರು ಎಷ್ಟೇ ದೊಡ್ಡವರಾದರು ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಧ್ಯಕ್ಷ ಆರ್ ಮೂರ್ತಿ ಹೇಳಿದರು.

ಇದನ್ನೂ ಓದಿ: DJ Halli KG Halli Riots | ‘NIA ಚಾರ್ಜ್​ಶೀಟ್ ಪೂರ್ವನಿಯೋಜಿತ.. SDPIನ ಗುರಿಯಾಗಿಸಿಕೊಂಡು ಚಾರ್ಜ್​ಶೀಟ್​ ಸಲ್ಲಿಸಲಾಗಿದೆ’

Published On - 7:02 pm, Fri, 26 February 21

ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ