‘ಸಿ ಪಿ ಯೋಗೇಶ್ವರ್ ಆತಂಕದಲ್ಲಿದ್ದಾರೆ‘ : ತಿರುಗೇಟು ನೀಡಿದ ಕುಮಾರಸ್ವಾಮಿ

‘ಸಿ ಪಿ ಯೋಗೇಶ್ವರ್ ಆತಂಕದಲ್ಲಿದ್ದಾರೆ‘ : ತಿರುಗೇಟು ನೀಡಿದ ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ

ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅಧಿಕಾರಕ್ಕೆ ಬಂದರೆ 6 ತಿಂಗಳಲ್ಲಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಹೋಗುತ್ತದೆ. ಆಗ‌‌ ನಮ್ಮ ಸರ್ಕಾರ ಬರುತ್ತದೆಂದು ಸಮ್ಮಿಶ್ರ ಸರ್ಕಾರ ಬೀಳಿಸಿದರು. ಅದರ ಪ್ರತಿಫಲವನ್ನು ಈಗ ರಾಜ್ಯದ ಜನ ಅನುಭವಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

guruganesh bhat

| Edited By: Rajesh Duggumane

Feb 26, 2021 | 8:16 PM

ರಾಮನಗರ: ಸಿ.ಪಿ.ಯೋಗೇಶ್ವರ್ ಮಂತ್ರಿ ಆಗಿರುವ ಕಾರಣ ಏರುಧ್ವನಿಯಲ್ಲಿ ಮಾತನಾಡಿದ್ದಾನೆ. ಆತಂಕ, ಆಕ್ರೋಶ ಸಿ.ಪಿ.ಯೋಗೇಶ್ವರ್​ಗೆ ಇರುವುದೇ ಹೊರತೂ ನನಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್​ಗೆ ತಿರುಗೇಟು ನೀಡಿದರು. ಸಿ.ಪಿ.ಯೋಗೇಶ್ವರ್ ಕಂಡಕಂಡವರ ಹಣ ಲೂಟಿ ಹೊಡೆದು, ‘ಅವರು ಮಂತ್ರಿಯಾಗಿದ್ದಾರೆ. ಅವರ ಬಳಿ ಕೆಲಸ ಮಾಡುವುದನ್ನು ಕಲಿಯಬೇಕಿಲ್ಲ. ಅವರಂತಹ ಬೇಕಾದಷ್ಟು ಜನರನ್ನು ಮಂತ್ರಿ ಮಾಡಿದ್ದೇನೆ. ಜೆಡಿಎಸ್​ ಕಾರ್ಯಕರ್ತರು ನನ್ನ ಮೇಲಿನ ಪ್ರೀತಿಯಿಂದ ಬರುತ್ತಾರೆ. ಸಿ.ಪಿ. ಯೋಗೇಶ್ವರ್‌ಗಿಂತ ಮುಂಚೆಯೇ ನನಗೆ ಚನ್ನಪಟ್ಟಣದ ಪರಿಚಯವಿದೆ ಎಂದು ಅವರು ಸಿ.ಪಿ.ಯೋಗೇಶ್ವರ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಿನ್ನೆ ನಡೆದ ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಸಂದರ್ಭದಲ್ಲಿ ಸಿ.ಪಿ.ಯೋಗೇಶ್ವರ್ ಏಕವಚನದಲ್ಲೇ HDK ವಿರುದ್ಧ ವಾಗ್ದಾಳಿ ನಡೆಸಿದ್ದರು. ಅವರ ಹೇಳಿಕೆಗಳಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ಮೇಯರ್ ಆಯ್ಕೆ ವಿಚಾರವನ್ನು ಪ್ರಸ್ತಾಪಿಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ರಾಜ್ಯದಲ್ಲಿ ಕಾಂಗ್ರೆಸ್​ JDS ಪಕ್ಷವನ್ನು ಮುಗಿಸಲು ಹೊರಟಿದೆ. ಕಾಂಗ್ರೆಸ್ ಪಕ್ಷದ ಹುನ್ನಾರಗಳ ಬಗ್ಗೆ ನನಗೆ ಗೊತ್ತಿದೆ. ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅಧಿಕಾರಕ್ಕೆ ಬಂದರೆ 6 ತಿಂಗಳಲ್ಲಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಹೋಗುತ್ತದೆ. ಆಗ‌‌ ನಮ್ಮ ಸರ್ಕಾರ ಬರುತ್ತದೆಂದು ಸಮ್ಮಿಶ್ರ ಸರ್ಕಾರ ಬೀಳಿಸಿದರು. ಅದರ ಪ್ರತಿಫಲವನ್ನು ಈಗ ರಾಜ್ಯದ ಜನ ಅನುಭವಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು.

ತಾಯಿ ಚಾಮುಂಡೇಶ್ವರಿ ರಕ್ಷಣೆ ಕೊಟ್ಟಿದ್ದಾಳೆ

ಈ ಬಾರಿ ನಾವು ಯಾರ ಜತೆ ಹೊಂದಾಣಿಕೆ ಮಾಡಿಕೊಂಡಿಲ್ಲ. ನಮ್ಮ ಸಾಮರ್ಥ್ಯ ತೋರಿಸಲು ಮೈಸೂರು ಪಾಲಿಕೆಯಲ್ಲಿ ನಮ್ಮ ಅಭ್ಯರ್ಥಿಯನ್ನು ನಿಲ್ಲಿಸಿದ್ದೆವು. ಮೈಸೂರಿನಿಂದ ರಾಜ್ಯಕ್ಕೆ ಸಂದೇಶ ಹೋಗುತ್ತೆ ಎಂದು ಹೇಳಿದ್ದೆ. ಆ ಸಂದೇಶವನ್ನು ತಾಯಿ ಚಾಮುಂಡೇಶ್ವರಿ ದೇವಿ ಕೊಟ್ಟಿದ್ದಾಳೆ. ಜೆಡಿಎಸ್ ಬಗ್ಗೆ ಅಪಪ್ರಚಾರ ಮಾಡಬೇಕೆಂದು ಹೊರಟಿದ್ದರು. ಆದರೆ ತಾಯಿ ಚಾಮುಂಡೇಶ್ವರಿ ರಕ್ಷಣೆ ಕೊಟ್ಟು‌ ಉಳಿಸಿದ್ದಾಳೆ ಎಂದು ಎಚ್. ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು.

ಕುಮಾರಸ್ವಾಮಿ ಸಿಎಂ ಆಗಿದ್ದಾಗ ಜನರ ಕೈಗೆ ಸಿಗುತ್ತಿರಲಿಲ್ಲ; ಸಿ.ಪಿ.ಯೋಗೇಶ್ವರ್ 

ಹೆಚ್​ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಜನರ ಕೈಗೆ ಸಿಗುತ್ತಿರಲಿಲ್ಲ. ಬೆಳಗ್ಗೆ 6ಕ್ಕೆ ಹೋದರೂ ಜನರನ್ನ ಮನೆಗೆ ಸೇರಿಸುತ್ತಿರಲಿಲ್ಲ ಎಂದು ಏಕವಚನದಲ್ಲೇ HDK ವಿರುದ್ಧ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದ್ದರು.

ಕುಮಾರಸ್ವಾಮಿ ಸಿಎಂ ಆಗಿದ್ದಾಗ ಜನರ ಕೈಗೆ ಸಿಗುತ್ತಿರಲಿಲ್ಲ. ಬೆಳಗ್ಗೆ 6 ಗಂಟೆಗೆ ಹೋದರು ಜನರನ್ನ ಮನೆಗೆ ಸೇರಿಸುತ್ತಿರಲಿಲ್ಲ. ಆದರೆ ಅವನು ಅಧಿಕಾರ ಕಳೆದುಕೊಂಡಾಗ 6 ಗಂಟೆಗೆ ಚನ್ನಪಟ್ಟಣಕ್ಕೆ ಬರ್ತಿದ್ದಾನೆ. ಅವನಿಗೆ ಈಗ ಗೊತ್ತಾಗಿದೆ ಜನರೆದುರು ದುರಹಂಕಾರ ನಡೆಯಲ್ಲವೆಂದು. ಅಭಿವೃದ್ಧಿ ಮಾಡಿದರಷ್ಟೇ ಜನ ಮತ ಹಾಕ್ತಾರೆಂದು ಗೊತ್ತಾಗಿದೆ. ಹೆಚ್‌ಡಿಕೆ ಬಂದಾಗ JDS ಮುಖಂಡರು, ಕಾರ್ಯಕರ್ತರು ಹಲ್ಲು ಗಿಂಜುತ್ತಾರೆ. ‘ಅವನಿಗೆ ಹೂವಿನ ಹಾರ ಹಿಡ್ಕೊಂಡು ಹೋಗುತ್ತಾರೆ’ ‘ಆದ್ರೆ ಅವನು ಸಿಎಂ ಆಗಿದ್ದಾಗ ಯಾರಿಗೆ ಅಧಿಕಾರ ಕೊಟ್ಟಿದ್ದಾನೆ’ ಎಂದು ಏಕವಚನದಲ್ಲೇ HDK ವಿರುದ್ಧ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ. ನಿನ್ನೆ ಕಾರ್ಯಕ್ರಮದಲ್ಲಿ CPY ಮಾತಾಡಿದ್ದ ವಿಡಿಯೋ ವೈರಲ್ ಆಗಿತ್ತು.

ಇನ್ನು ಮಾತು ಮುಂದುವರೆಸಿದ ಅವರು.. ವಿಧಾನಸೌಧ ಚನ್ನಪಟ್ಟಣದಿಂದ 60 ಕಿ.ಮೀ ಇದೇ. ಆದರೆ ಯಾರು ವಿಧಾನಸೌಧದ ಮೆಟ್ಟಿಲು ಹತ್ತಿದ್ದಾರೆ ಜೆಡಿಎಸ್ ನವರು ಮುಂದಿನ ಏಪ್ರಿಲ್ ನಂತರ ನನ್ನ ರಾಜಕೀಯ ಪ್ರಾರಂಭವಾಗಲಿದೆ. ಇಲ್ಲಿ ನಾನು ಶಾಸಕ, ಬೇರೆಯವರು ಯಾಕೆ ಬರ್ತಾರೆ ಅಂತಾರೆ ಕುಮಾರಸ್ವಾಮಿ. ಹಾಗಾಗಿ ಮುಂದಿನ ಏಪ್ರಿಲ್ ನಂತರ ಕ್ಷೇತ್ರ ಪ್ರವಾಸ ಮಾಡ್ತೇನೆ. ಪ್ರತಿ ಹಳ್ಳಿಗೂ ಭೇಟಿ ಕೊಡ್ತೇನೆ, ಪಕ್ಷ ಸಂಘಟನೆ ಮಾಡ್ತೇನೆ. ಚನ್ನಪಟ್ಟಣ ನನ್ನ ತವರೂರು, ನನಗೆ ರಾಜಕೀಯ ಜನ್ಮ ನೀಡಿದ ತಾಲೂಕು. ನನಗೆ ನೀವು ಬಿಡುವು ಮಾಡಿಕೊಟ್ಟಿದ್ದೀರಿ, ಚನ್ನಪಟ್ಟಣದಿಂದ ರಾಜ್ಯ ಪ್ರವಾಸ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ, ಸರ್ಕಾರ ನನಗೆ ವಿಧಾನಸೌಧದಲ್ಲಿ ಕಚೇರಿ ಕೊಟ್ಟಿದೆ, ಬೆಂಗಳೂರಿನಲ್ಲಿ ಬಂಗಲೆ ಕೊಟ್ಟಿದೆ, ಜನ ನನಗೆ ಮತ ಹಾಕದಿದ್ದರೂ ಸಹ ಸಚಿವನಾಗುವ ಶಕ್ತಿ ಕೊಟ್ಟಿದ್ದೀರಿ ಎಂದು ಯೋಗೇಶ್ವರ್ ಹೇಳಿದ್ದರು.

ಇದನ್ನೂ ಓದಿ: ಅವನಿಗೆ ಈಗ ಗೊತ್ತಾಗಿದೆ ಜನರೆದುರು ದುರಹಂಕಾರ ನಡೆಯಲ್ಲವೆಂದು.. ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಸಿ.ಪಿ.ಯೋಗೇಶ್ವರ್

ಮೈಸೂರು ಪಾಲಿಕೆ ಚುನಾವಣೆ: ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ್ರಾ ಹೆಚ್.ಡಿ. ಕುಮಾರಸ್ವಾಮಿ!?

Follow us on

Related Stories

Most Read Stories

Click on your DTH Provider to Add TV9 Kannada