DJ Halli KG Halli Riots | ‘NIA ಚಾರ್ಜ್ಶೀಟ್ ಪೂರ್ವನಿಯೋಜಿತ.. SDPIನ ಗುರಿಯಾಗಿಸಿಕೊಂಡು ಚಾರ್ಜ್ಶೀಟ್ ಸಲ್ಲಿಸಲಾಗಿದೆ’
ಕೇಂದ್ರದ ಒತ್ತಡಕ್ಕೆ ಮಣಿದು NIA ಚಾರ್ಜ್ಶೀಟ್ ಸಲ್ಲಿಸಿದೆ. NIA ಚಾರ್ಜ್ಶೀಟ್ ಪೂರ್ವ ನಿಯೋಜಿತವಾದದ್ದು. SDPIನ ಗುರಿಯಾಗಿಸಿಕೊಂಡು ಚಾರ್ಜ್ಶೀಟ್ ಸಲ್ಲಿಸಲಾಗಿದೆ ಎಂದು ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗಲಾಟೆ ಕೇಸ್ಗೆ ಸಂಬಂಧಿಸಿದಂತೆ NIA ಚಾರ್ಜ್ಶೀಟ್ ಸಲ್ಲಿಕೆ ಕುರಿತು SDPI ಸುದ್ದಿಗೋಷ್ಠಿ ನಡೆಸಿದೆ.
ಬೆಂಗಳೂರು: ಕೇಂದ್ರದ ಒತ್ತಡಕ್ಕೆ ಮಣಿದು NIA ಚಾರ್ಜ್ಶೀಟ್ ಸಲ್ಲಿಸಿದೆ. NIA ಚಾರ್ಜ್ಶೀಟ್ ಪೂರ್ವ ನಿಯೋಜಿತವಾದದ್ದು. SDPIನ ಗುರಿಯಾಗಿಸಿಕೊಂಡು ಚಾರ್ಜ್ಶೀಟ್ ಸಲ್ಲಿಸಲಾಗಿದೆ ಎಂದು ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗಲಾಟೆ ಕೇಸ್ಗೆ ಸಂಬಂಧಿಸಿದಂತೆ NIA ಚಾರ್ಜ್ಶೀಟ್ ಸಲ್ಲಿಕೆ ಕುರಿತು SDPI ಸುದ್ದಿಗೋಷ್ಠಿ ನಡೆಸಿದೆ. ಹಲಸೂರು ಗೇಟ್ ಬಳಿಯಿರುವ ಸಂಘದ ಮುಖ್ಯ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ SDPIನ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡಲಿಪೇಟೆ, ರಾಜ್ಯ ಮಾಧ್ಯಮ ಉಸ್ತುವಾರಿ ಅಕ್ರಂ ಹುಸೇನ್, ಬೆಂಗಳೂರು ಜಿಲ್ಲಾಧ್ಯಕ್ಷ ಫಯಾಜ್ ಅಹಮದ್ ಹಾಗೂ ಉಪಾಧ್ಯಕ್ಷ ಗಂಗಪ್ಪ ಪಾಲ್ಗೊಂಡರು. ನಿಷ್ಪಕ್ಷ ತನಿಖಾಧಿಕಾರಿಗಳ ಮೇಲೆ ಸರ್ಕಾರದಿಂದ ಒತ್ತಡ ಹೇರಲಾಗಿದೆ. ನಿರ್ದಿಷ್ಟ ಪಕ್ಷ ಮತ್ತು ಸಮುದಾಯದ ತೇಜೋವಧೆ ಮಾಡುವ ರೀತಿಯಲ್ಲಿ ಚಾರ್ಜ್ಶೀಟ್ ವರದಿ ಸಲ್ಲಿಕೆಯಾಗಿದೆ ಎಂದು ಸಂಘದ ನಾಯಕರು ಆರೋಪಿಸಿದರು.
ಈ ವೇಳೆ, ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡಲಿಪೇಟೆ ಇದು ಪೂರ್ವನಿಯೋಜಿತ ಚಾರ್ಜ್ಶೀಟ್ ಆಗಿದೆ. ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಮಣಿದು ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ಕಳೆದ 6 ತಿಂಗಳಲ್ಲಿ ಎರಡು ಸಾವಿರ ಜನರ ವಿಚಾರಣೆ ಮಾಡಲಾಗಿದೆ. ಸಂಪತ್ ರಾಜ್ ಹಾಗೂ ಇನ್ನಿತರರು ಹೊಣೆಗಾರರು. ರಾಜಕೀಯ ಪಿತೂರಿ ಎಂಬುವುದು ತನಿಖೆ ನಂತರ CCB ಮಾಹಿತಿ ನೀಡಿತ್ತು. ಸ್ಥಳೀಯ ಶಾಸಕ ಅಖಂಡ ಶ್ರೀನಿವಾಸ್ ಸಹ ಸಂಪತ್ ರಾಜ್ ವಿರುದ್ಧ ಆರೋಪ ಮಾಡಿದ್ದಾರೆ. ಆದರೆ NIA, CCB ತನಿಖೆಯನ್ನು ಮರೆಮಾಚಿ ಒಂದು ಪಕ್ಷವನ್ನು ಟಾರ್ಗೆಟ್ ಮಾಡಿದೆ ಎಂದು ಹೇಳಿದರು.
‘ನವೀನ್ ಮೊದಲು ಪೊಸ್ಟ್ ಮಾಡಿದ್ದಾನೆ.. ಇದು ಎಲ್ಲರಿಗೂ ಗೊತ್ತಿದೆ’ ನವೀನ್ ಮೊದಲು ಪೊಸ್ಟ್ ಮಾಡಿದ್ದಾನೆ. ಇದು ಎಲ್ಲರಿಗೂ ಗೊತ್ತಿದೆ. ಆದರೆ ದುರ್ಬಲ ಕೇಸ್ ಹಾಕುವ ಮುಖಾಂತರ ಅವರನ್ನು ಹೊರಗೆ ಬಿಡಲಾಗಿದೆ. ಫೈರೋಜ್ ಪಾಷಾ ಎಂಬಾತನನ್ನು ಮೊದಲ ಆರೋಪಿ ಮಾಡಲಾಗಿದೆ. ಮೊದಲು ಆತ ಆಮ್ ಆದ್ಮಿ ಹಾಗೂ ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿದರು. ನಂತರ ಆತ SDPI ಕಾರ್ಯಕರ್ತ ಎಂದು ಹೇಳಿದರು. ಆದರೆ ಫೈರೋಜ್ ಪಾಷಾ SDPI ಕಾರ್ಯಕರ್ತ ಅಲ್ಲ ಎಂದು ಅಪ್ಸರ್ ಕೊಡಲಿಪೇಟೆ ಹೇಳಿದರು.
ನವೀನ್ ಹಾಗೂ ಫೈರೋಜ್ ನಡುವೆ ಪೋಸ್ಟ್ ಸಂಬಂಧಿಸಿದಂತೆ ಕಚ್ಚಾಟ ನಡೆದಿದೆ. ಇದೇ ಕಾರಣಕ್ಕೆ ಗಲಭೆ ನಡೆದಿದೆ ಎಂದು ಬಿಂಬಿಸಲಾಗಿದೆ. ತನಿಖೆಗೆ ಬರುವ ಮೊದಲೇ SDPIನ NIA ಟಾರ್ಗೆಟ್ ಮಾಡಿದೆ. ಕೇಸ್ನಲ್ಲಿ SDPIನ ಸಿಲುಕಿಸುವ ಯತ್ನ ಮಾಡಿದೆ. ಜನವಿರೋಧಿ ನೀತಿ ಹಾಗೂ ಕಾನೂನುಗಳ ವಿರುದ್ಧ ಹೋರಾಟ ಮಾಡುವವರನ್ನ ಟಾರ್ಗೆಟ್ ಮಾಡಲಾಗುತ್ತಿದೆ. ಇದರ ವಿರುದ್ಧ ನ್ಯಾಯಯುತ ಹಾಗೂ ಸಂವಿಧಾನಾತ್ಮಕ ಹೋರಟ ಮಾಡಲಿದ್ದೇವೆ. ಆರೋಪಕ್ಕೆ ತಕ್ಕ ಸಾಕ್ಷಿಗಳನ್ನು ಕೊರ್ಟ್ನಲ್ಲಿ ತನಿಖಾ ತಂಡ ಸಲ್ಲಿಸಬೇಕು ಎಂದು ಅಪ್ಸರ್ ಕೊಡಲಿಪೇಟೆ ಹೇಳಿದರು.
ಇದನ್ನೂ ಓದಿ: ಪ್ರೊ.ಕೆ.ಎಸ್. ಭಗವಾನ್ ಮುಖಕ್ಕೆ ಮಸಿ ಬಳಿದ ಮೀರಾ ರಾಘವೇಂದ್ರ ವಕೀಲಿಕೆಯ ಸನ್ನದು ಅಮಾನತುಪಡಿಸಲು ಶಿಫಾರಸು