Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡಿದು ಬಂದು ಗಲಾಟೆ ಮಾಡಿದ್ದ ಮಗನನ್ನ ಕೊಲೆಗೈದ ತಂದೆ ಅರೆಸ್ಟ್​

ದಿನನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಮಗನನ್ನ ಕೊಲೆ ಮಾಡಿದ್ದ ತಂದೆಯ ಬಂಧನವಾಗಿದೆ. ನಿನ್ನೆ ನಗರದ ಗಂಗಮ್ಮನಗುಡಿಯ ಅಬ್ಬಿಗೆರೆಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕುಡಿದು ಬಂದು ಗಲಾಟೆ ಮಾಡಿದ್ದ ಮಗನನ್ನ ಕೊಲೆಗೈದ ತಂದೆ ಅರೆಸ್ಟ್​
ಮಗನನ್ನ ಕೊಲೆಗೈದ ತಂದೆ ಹುಸೇನ್​
Follow us
KUSHAL V
|

Updated on:Feb 26, 2021 | 5:25 PM

ಬೆಂಗಳೂರು: ದಿನನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಮಗನನ್ನ ಕೊಲೆ ಮಾಡಿದ್ದ ತಂದೆಯ ಬಂಧನವಾಗಿದೆ. ನಿನ್ನೆ ನಗರದ ಗಂಗಮ್ಮನಗುಡಿಯ ಅಬ್ಬಿಗೆರೆಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 30 ವರ್ಷದ ಬಾಬರ್ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡಿದ್ದಕ್ಕೆ ಸಿಟ್ಟಿಗೆದ್ದ ಆತನ ತಂದೆ ಹುಸೇನ್​(68) ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದ. ಇದೀಗ, ಹುಸೇನ್​ನನ್ನು ಪೊಲೀಸರು ಬಂಧಿಸಿದ್ದಾರೆ. ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಂದ ಹಾಗೆ, ಬಾಬರ್​ ಪ್ರತಿ ದಿನ ಕುಡಿದು ಬಂದು ತಂದೆ ಜೊತೆ ಜಗಳ‌ವಾಡುತ್ತಿದ್ದನಂತೆ. ಬಾಬರ್​ ಗಾರೆ ಕೆಲಸ‌ ಮಾಡುತ್ತಿದ್ದರೇ ಇತ್ತ ಬಂಧಿತ ಹುಸೇನ್ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದರಂತೆ.

ನೋಡನೋಡುತ್ತಿದ್ದಂತೆ ಮೊಬೈಲ್ ಎಗರಿಸಿದ್ದ ಕಳ್ಳನ ಬಂಧನ ನೋಡನೋಡುತ್ತಿದ್ದಂತೆ ಮೊಬೈಲ್ ಎಗರಿಸಿದ್ದ ಖದೀಮನನ್ನು ಪೊಲೀಸರು ಬಂಧಿಸಿರುವ ಪ್ರಸಂಗ ಕೊಡಗು ಜಿಲ್ಲೆಯ ಕುಶಾನಗರದ ಮೊಬೈಲ್ ಅಂಗಡಿಯಲ್ಲಿ ನಡೆದಿದೆ. ಮೊಬೈಲ್ ಎಗರಿಸಿ ಪರಾರಿಯಾಗುತ್ತಿದ್ದ ಕಳ್ಳ ರಾಜಿಕ್​ನ(30) ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದರು.

MDK PHONE THEFT 1

ನೋಡನೋಡುತ್ತಿದ್ದಂತೆ ಮೊಬೈಲ್ ಎಗರಿಸಿದ್ದ ಕಳ್ಳ

ಪಟ್ಟಣದ ಪೂಜಾ ಮೊಬೈಲ್ ಮಳಿಗೆಯಲ್ಲಿ ಗ್ರಾಹಕನಂತೆ ಬಂದ ರಾಜಿಕ್​ನ ಕಳ್ಳತನದ ದೃಷ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳ್ಳನನ್ನ ಬೆನ್ನಟ್ಟಿ ಹಿಡಿದ ಸಾರ್ವಜನಿಕರು ಆತನನ್ನು ಕುಶಾಲನಗರ ಪೊಲೀಸರ ವಶಕ್ಕೆ ನೀಡಿದ್ದಾರೆ. ಬಂಧಿತ ರಾಜಿಕ್ ಪಿರಿಯಾಪಟ್ಟಣ ನಿವಾಸಿ.

ಚಾಮರಾಜನಗರದ GTC ಕ್ಲಬ್‌ನಲ್ಲಿ ಅಗ್ನಿ ಅವಘಡ ಚಾಮರಾಜನಗರದ GTC ಕ್ಲಬ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ದುರಂತದಲ್ಲಿ ಲಕ್ಷಾಂತರ ರೂ. ಮೌಲ್ಯದ ಪೀಠೋಪಕರಣ ಸುಟ್ಟು ಭಸ್ಮವಾಗಿದೆ. ರಾಮಸಮುದ್ರ ಪೂರ್ವ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

CHM CLUB FIRE 1

ಚಾಮರಾಜನಗರದ GTC ಕ್ಲಬ್‌ನಲ್ಲಿ ಅಗ್ನಿ ಅವಘಡ

ಸೋಮವಾರಪೇಟೆ ಬಳಿ ಇರುವ ಕ್ಲಬ್​ನಲ್ಲಿ ಘಟಿಸಿದ ಬೆಂಕಿ ಅನಾಹುತಕ್ಕೆ ಕಾರಣವೇನು ಎಂದು ತಿಳಿದುಬಂದಿಲ್ಲ. ಇನ್ನು, ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು.

ಅಕ್ರಮವಾಗಿ ಮಾದಕವಸ್ತು ಸರಬರಾಜು, ಮಾರಾಟ: ಇಬ್ಬರು ಆರೋಪಿಗಳು ಗಡಿಪಾರು ಅಕ್ರಮವಾಗಿ ಮಾದಕವಸ್ತು ಸರಬರಾಜು, ಮಾರಾಟ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಕೋಲಾರ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ನಂಜೇದೇವರು, ಸೈಯದ್ ಅಹ್ಮದ್ ಎಂಬುವವರನ್ನು 2 ವರ್ಷಗಳ ಕಾಲ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಜಿಲ್ಲೆಯಿಂದ ಗಡಿಪಾರು ಮಾಡಿ ಸಹಾಯಕ ಕಮಿಷನರ್ ಸೋಮಶೇಖರ್ ಆದೇಶ ಹೊರಡಿಸಿದ್ದಾರೆ.

ಬಾಗೇಪಲ್ಲಿ ತಾಲೂಕು ಕಚೇರಿ ಮೇಲೆ ಹತ್ತಿ ಆತ್ಮಹತ್ಯೆಗೆ ಯತ್ನ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪುಟ್ಟಪರ್ತಿಯ ಸ್ಫೋಟಕ ಸಂಗ್ರಹಗಾರ ಸ್ಥಳಾಂತರಕ್ಕೆ ಆಗ್ರಹಿಸಿ ಬಾಗೇಪಲ್ಲಿ ತಾಲೂಕು ಕಚೇರಿ ಮೇಲೆ ಹತ್ತಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ. ಪುಟ್ಟಪರ್ತಿಯ ವೆಂಕಟೇಶ್ ಎಂಬಾತನಿಂದ ಆತ್ಮಹತ್ಯೆ ಯತ್ನ ನಡೆದಿದೆ.

CBL SUICIDE ATTEMPT 1

ಬಾಗೇಪಲ್ಲಿ ತಾಲೂಕು ಕಚೇರಿ ಮೇಲೆ ಹತ್ತಿ ಆತ್ಮಹತ್ಯೆಗೆ ಯತ್ನ

ವೆಂಕಟೇಶ್ ಸ್ಫೋಟಕ ಸಂಗ್ರಹಗಾರ ಸ್ಥಳಾಂತರಕ್ಕೆ ಹಲವು ಬಾರಿ ಮನವಿ ಮಾಡಿದ್ದರು. ಆದರೆ, ಪೊಲೀಸರು, ಅಧಿಕಾರಿಗಳು ಇವರ ಮನವಿಗೆ ಸ್ಪಂದಿಸಿರಲಿಲ್ಲವಂತೆ. ಎಷ್ಟೇ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲವಂತೆ. ಹೀಗಾಗಿ, ಆಕ್ರೋಶಗೊಂಡ ವೆಂಕಟೇಶ್​ ಇಂದು ಆತ್ಮಹತ್ಯೆಗೆ ಯತ್ನಿಸಿದರು.

ಇದನ್ನೂ ಓದಿ: ಅಂಕೋಲಾ ತಾಲೂಕಿನ ಮಾಸ್ತಿಕಟ್ಟಿ‌ ಬಳಿ ನಡೆದಿದ್ದ ಅಪಘಾತ; ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಕ್ತು ಬಿಗ್​ ಟ್ವಿಸ್ಟ್​

Published On - 5:18 pm, Fri, 26 February 21