ಕೋಲಾರಕ್ಕೆ ತೆರಳಿ ಅಭಿಮಾನಿಗಳಿಗೆ ಧನ್ಯವಾದ, ಕೊರೊನಾಗೆ ಶ್ರದ್ಧಾಂಜಲಿ ಅರ್ಪಿಸಿದ ಧ್ರುವ ಸರ್ಜಾ!

ಕೋಲಾರಕ್ಕೆ ತೆರಳಿ ಅಭಿಮಾನಿಗಳಿಗೆ ಧನ್ಯವಾದ, ಕೊರೊನಾಗೆ ಶ್ರದ್ಧಾಂಜಲಿ ಅರ್ಪಿಸಿದ ಧ್ರುವ ಸರ್ಜಾ!

ತೆಲುಗು ಪ್ರಭಾವ ಇರುವ ಗಡಿ ಜಿಲ್ಲೆಯಲ್ಲಿ ಕನ್ನಡ ಚಿತ್ರಗಳು ಅದ್ಭುತ ಪ್ರದರ್ಶನ ಕಾಣೋದು ತುಂಬಾನೇ ಅಪರೂಪ. ಈ ಮಧ್ಯೆಯೂ ಪೊಗರು ಸಿನಿಮಾಗೆ ಗಡಿ ಭಾಗದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.

Rajesh Duggumane

|

Feb 26, 2021 | 4:07 PM

ಕೋಲಾರ: ಧ್ರುವ ಸರ್ಜಾ ಅಭಿನಯದ ‘ಪೊಗರು’ ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್​ ಆಫೀಸ್​ನಲ್ಲೂ ಸಿನಿಮಾ ಒಳ್ಳೆಯ ಕಲೆಕ್ಷನ್​ ಮಾಡುತ್ತಿದೆ. ಗಡಿ ನಾಡು ಕೋಲಾರದಲ್ಲಿ ಕೂಡ ಪೊಗರು ಅಬ್ಬರ ಜೋರಾಗಿದೆ. ಹೀಗಾಗಿ, ಕೋಲಾರಕ್ಕೆ ಇಂದು ಪೊಗರು ಚಿತ್ರ ತಂಡ ಪ್ರವಾಸ‌ ಮಾಡಿದೆ. ಕೋಲಾರದ‌ ನಾರಾಯಣಿ‌ ಚಿತ್ರಮಂದಿರದ ಬಳಿ ಅಭಿಮಾನಿಗಳು ಧ್ರುವ ಸರ್ಜಾಗೆ ಭರ್ಜರಿ ಸ್ವಾಗತ ಕೋರಿದ್ದಾರೆ.

ತೆಲುಗು ಪ್ರಭಾವ ಇರುವ ಗಡಿ ಜಿಲ್ಲೆಯಲ್ಲಿ ಕನ್ನಡ ಚಿತ್ರಗಳು ಉತ್ತಮ ರೀತಿಯಲ್ಲಿ ಪ್ರದರ್ಶನ ಕಾಣೋದು ತುಂಬಾನೇ ಅಪರೂಪ. ಈ ಮಧ್ಯೆಯೂ ಪೊಗರು ಸಿನಿಮಾಗೆ ಗಡಿ ಭಾಗದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಪೊಗರು ಚಿತ್ರತಂಡ ಕೋಲಾರ- ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಯಲ್ಲಿ ಪ್ರವಾಸ‌‌ ಹಮ್ಮಿಕೊಂಡಿದೆ.

ಧ್ರುವ ಸರ್ಜಾ ಆ್ಯಂಡ್​ ಟೀಂ ನಾರಾಯಣಿ‌ ಚಿತ್ರಮಂದಿರಕ್ಕೆ ಬರುತ್ತಿದ್ದಂತೆ, ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಡೋಲು ಬಾರಿಸಿ ಪೊಗರು ತಂಡವನ್ನು ಸ್ವಾಗತಿಸಿದ್ದಾರೆ. ನೂರಾರು ಅಭಿಮಾನಿಗಳ ಮಧ್ಯೆ ನಿಂತು ಧ್ರುವ ಸರ್ಜಾ ಮಾತನಾಡಿದ್ದಾರೆ. ಬಹಳ ವರ್ಷಗಳ ನಂತರ ಗಡಿ ಜಿಲ್ಲೆಗಳಲ್ಲೂ ಕನ್ನಡ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದಕ್ಕೆ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ. ಕೊರೊನಾ ನಂತರ ಚಿತ್ರಮಂದಿರಗಳು ಆರಂಭವಾಗಿದೆ. ಕೊರೊನಾಗೆ ನಾವು ಈ ಮೂಲಕ ಶ್ರದ್ಧಾಂಜಲಿ ಅರ್ಪಿಸುತ್ತೇವೆ. ಕನ್ನಡ ಸಿನಿಮಾಗೆ ಇದೇ ರೀತಿ ಜನರ ಪ್ರೋತ್ಸಾಹ ಸಿಗಲಿ ಎಂದು ಕೋರಿದರು.

ದೇವಾಲಯಕ್ಕೆ ಧ್ರುವ ಭೇಟಿ ಕೋಲಾರಕ್ಕೆ ಆಗಮಿಸುತ್ತಿದ್ದಂತೆ ಧ್ರುವ ಸರ್ಜಾ ಕೊಂಡರಾಜನಹಳ್ಳಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಲ್ಲಿಯೂ ನೂರಾರು ಅಭಿಮಾನಿಗಳು ನೆರೆದಿದ್ದು ವಿಶೇಷವಾಗಿತ್ತು.

ಅಣ್ಣಾವ್ರ ರೀತಿ ವರ್ಕೌಟ್ ವಿಡಿಯೋ ರಿಲೀಸ್​ ಡಾ.ರಾಜ್​ಕುಮಾರ್​ ಅವರು ನೌಲಿ ಕ್ರಿಯೆ (ಹೊಟ್ಟೆಯನ್ನು ಭಿನ್ನ ರೀತಿಯಲ್ಲಿ ಕುಣಿಸುವುದು) ಮಾಡುತ್ತಿದ್ದರು. ಇದನ್ನು ಪೊಗರು ಚಿತ್ರದಲ್ಲಿ ಧ್ರುವ ಸರ್ಜಾ ಕೂಡ ನೌಲಿ ಕ್ರಿಯೆ ಮಾಡಿದ್ದಾರೆ. ಈ ವಿಡಿಯೋವನ್ನು ಚಿತ್ರತಂಡ ರಿಲೀಸ್​ ಮಾಡಿದೆ. ನೌಲಿ ಕ್ರಿಯೆಗೆ ಧ್ರುವ ರೆಡಿ ಆಗಿದ್ದು ಹೇಗೆ ಎನ್ನುವ ಬಗ್ಗೆ ವಿಡಿಯೋ ಬಿಡುಗಡೆ ಆಗಿದೆ.

ಇಂದಿನಿಂದ ಹೊಸ ಕಾಪಿ ಪ್ರದರ್ಶನ: ಪೊಗರು ಸಿನಿಮಾದಲ್ಲಿರುವ ಕೆಲ ದೃಶ್ಯಗಳು ವಿವಾದ ಸೃಷ್ಟಿಸಿತ್ತು. ಅಂಥ ದೃಶ್ಯಗಳಿಗೆ ಈಗ ಚಿತ್ರತಂಡ ಕತ್ತರಿ ಹಾಕಿದೆ.ಈಗಾಗಲೇ ಎಡಿಟ್ ಆಗಿರೋ ಸಿನಿಮಾ ಸೆನ್ಸಾರ್ ಮುಗಿಸಿದೆ. ಆದರೆ ತಾಂತ್ರಿಕ ತೊಂದರೆ ಎದುರಾಗಿರುವುದರಿಂದ ಹೊಸ ಪ್ರಿಂಟ್​ ಮಧ್ಯಾಹ್ನ ಅಥವಾ ನಾಳೆಯಿಂದ ಪ್ರದರ್ಶನ ಆರಂಭವಾಗುವ ನಿರೀಕ್ಷೆ ಇದೆ.

ಚಿಕ್ಕಬಳ್ಳಾಪುರಕ್ಕೆ ಪೊಗರು ತಂಡ: ಕೋಲಾರದಲ್ಲಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಬಳಿಕ ಪೊಗರು ಚಿತ್ರತಂಡ ಚಿಕ್ಕಬಳ್ಳಾಪುರಕ್ಕೆ ಪ್ರವಾಸ ಕೈಗೊಂಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣಕ್ಕೆ ಧ್ರುವನನ್ನು ನೋಡಲು ವೆಂಕಟೇಶ್ವರ ಚಿತ್ರಮಂದಿರದ ಬಳಿ ನೂಕು‌ನುಗ್ಗಲು ಉಂಟಾಗಿದೆ. ಜನರನ್ನು ಚದುರಿಸಲು ಲಾಠಿ ಪ್ರಹಾರ ಮಾಡಲಾಗಿದೆ.

ಇದನ್ನೂ ಓದಿ: ‘ಪೊಗರು’ ವಿವಾದ: ಟ್ವೀಟ್ ಮೂಲಕ ಬೇಷರತ್ ಕ್ಷಮೆ ಕೇಳಿದ ನಟ ಧ್ರುವ ಸರ್ಜಾ

ಪೊಗರು ಸುದ್ದಿಗೋಷ್ಠಿ; ನಮ್ಮಿಂದಾದ ತಪ್ಪು ಸರಿಪಡಿಸಿಕೊಂಡಿದ್ದೇವೆ, ಕತ್ತರಿ ಹಾಕಿದ ನಂತರ ಚಿತ್ರದ ಅವಧಿ 8 ನಿಮಿಷ ಕಡಿಮೆಯಾಗಿದೆ

Follow us on

Related Stories

Most Read Stories

Click on your DTH Provider to Add TV9 Kannada