ಪೊಲೀಸರ ವಿರುದ್ಧ ರೌಡಿಶೀಟರ್ ಸೈಕಲ್ ರವಿ ಪತ್ನಿ ಕೋಮಲ ಗಂಭೀರ ಆರೋಪ
ನನ್ನ ಮಗನನ್ನು ಪೊಲೀಸರೇ ಕ್ರಿಮಿನಲ್ ಮಾಡುತ್ತಿದ್ದಾರೆ ಎಂದು ರೌಡಿಶೀಟರ್ ಸೈಕಲ್ ರವಿ ಪತ್ನಿ ಕೋಮಲ ಕೆ.ಜಿ.ನಗರ ಠಾಣೆ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು: ನನ್ನ ಮಗನನ್ನು ಪೊಲೀಸರೇ ಕ್ರಿಮಿನಲ್ ಮಾಡುತ್ತಿದ್ದಾರೆ ಎಂದು ರೌಡಿಶೀಟರ್ ಸೈಕಲ್ ರವಿ ಪತ್ನಿ ಕೋಮಲ ಕೆ.ಜಿ.ನಗರ ಠಾಣೆ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 17 ವರ್ಷದ ನನ್ನ ಮಗನನ್ನು ಠಾಣೆಯಲ್ಲಿ ಕೂಡಿ ಹಾಕಿದ್ದಾರೆ. ಸೈಕಲ್ ರವಿ ಬಂಧಿಸಬೇಕಾದರೆ ಈ ರೀತಿಯಾಗಿ ಮಾಡ್ತಾರೆ. ಎಲ್ಲ ಪೊಲೀಸರು ರೌಡಿ ಮಗ ರೌಡಿ ಮಗ ಎಂದು ಕರೀತಾರೆ. ನನ್ನ ಮಗನನ್ನು ಒಳ್ಳೆಯ ವ್ಯಕ್ತಿಯಾಗಿ ಬೆಳೆಸಲು ಬಿಡುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.
ಸೈಕಲ್ ರವಿ 17 ವರ್ಷದ ಪುತ್ರನನ್ನ ಪೊಲೀಸರು ಠಾಣೆಗೆ ಕರೆ ತಂದು ಕೂಡಿಹಾಕಿದ ಹಿನ್ನೆಲೆಯಲ್ಲಿ ಪೊಲೀಸರ ವಿರುದ್ಧ ಸೈಕಲ್ ರವಿ ಪತ್ನಿ ಆಕ್ರೋಶ ಹೊರಹಾಕಿದ್ದಾರೆ. ಪೊಲೀಸರೇ ನನ್ನ ಪುತ್ರನನ್ನು ಕ್ರಿಮಿನಲ್ ಮಾಡುತ್ತಿದ್ದಾರೆ. ಸೈಕಲ್ ರವಿ ಬೇಕು ಅಂದಾಗ ಕುಟುಂಬದವರನ್ನ ಕರ್ಕೊಂಡು ಹೋಗುತ್ತಾರೆ. ನನ್ನದೊಡ್ಡ ಮಗನನ್ನ ಕರೆದೊಯ್ದಿದ್ದಾರೆ. ಎಲ್ಲ ಪೊಲೀಸರು ರೌಡಿ ಮಗ ರೌಡಿ ಮಗ ಎಂದು ಹೇಳುತ್ತಾರೆ ಎಂದಿದ್ದಾರೆ. ಬೆಂಗಳೂರಿನಲ್ಲಿ ನನ್ನ ಮನೆಯವರಿಲ್ಲ. ಮನೆಯವರನ್ನ ಕರೆದುಕೊಂಡು ಹೋದರೆ ಸೈಕಲ್ ರವಿ ಸಿಕ್ತಾನೆ ಅನ್ನೋ ಕಾರಣಕ್ಕೆ ಕುಟುಂಬಸ್ಥರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಸೈಕಲ್ ರವಿ ಪತ್ನಿ ಕೋಮಲ ಅರೋಪ ಮಾಡಿದ್ದಾರೆ.
ನನ್ನ ಮಗ ಶಿವಶಂಕರ್ ಬಿಎ ಮಾಡಿದ್ದಾನೆ. ತಂದೆಯಂತಾಗದೇ, ಅವನನ್ನ ಒಂದೊಳ್ಳೆ ಮನುಷ್ಯನನ್ನಾಗಿ ಮಾಡಬೇಕು ಎಂದು ಕಷ್ಟ ಪಡುತ್ತಿದ್ದೀವಿ. ಆದರೆ ಪೊಲೀಸರು ನನ್ನ ಕುಟುಂಬವನ್ನ ಬಿಡುತ್ತಿಲ್ಲ. ನಾನು ನನ್ನ ಗಂಡನ್ನ ನೋಡದೇ ಎಷ್ಟೋ ದಿನ ಆಯ್ತು. ಹೀಗೆ ತೊಂದರೆ ಕೊಟ್ಟರೆ ಕಮೀಷನರ್ ಆಫೀಸ್ ಮುಂದೆ ಪೆಟ್ರೋಲ್ ಹಾಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಗೋಳು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: Cockfight | ಯಾದಗಿರಿಯಲ್ಲಿ ಕೋಳಿ ಪಂದ್ಯ ನಡೆಸುತ್ತಿದ್ದ 30 ಮಂದಿ ಅರೆಸ್ಟ್, 22 ಹುಂಜ ಜಪ್ತಿ
ಇದನ್ನೂ ಓದಿ: ಕೇರಳದಲ್ಲಿ ಆರ್ಎಸ್ಎಸ್ ಕಾರ್ಯಕರ್ತನ ಹತ್ಯೆ, 8 ಮಂದಿ ಬಂಧನ