ಬೆಂಗಳೂರು: ರಾತ್ರಿ ಸುರಿದ ಮಳೆಗೆ ಹೊಸಕೆರೆ ಹಳ್ಳಿ ಮತ್ತು ದತ್ತಾತ್ರೇಯ ಲೇಔಟ್ನಲ್ಲಿ ಭಾರಿ ಅವಾಂತರ ಸೃಷ್ಟಿಯಾಗಿದೆ. ಹೀಗಾಗಿ, ಹಾನಿ ಪ್ರದೇಶಕ್ಕೆ ಕಂದಾಯ ಸಚಿವ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಧ್ಯಾಹ್ನ ಸಿಎಂ ಭೇಟಿ ಮಾಡಲಿರುವ ಸಚಿವ ಅಶೋಕ್ ಸಿಎಂಗೆ ಮಳೆ ಹಾನಿ ಪ್ರದೇಶಗಳ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮಾಹಿತಿ ನೀಡಿ, ಪರಿಹಾರ ಕ್ರಮದ ಬಗ್ಗೆ ಅಶೋಕ್ ಚರ್ಚೆ ನಡೆಸಲಿದ್ದಾರೆ.
ಅದಕ್ಕೆ ಮಾಜಿ ಕಾರ್ಪೋರೇಟರ್ ಪತಿ ಇದು ನಮ್ಮ ಏರಿಯಾನೆ ಸಾರ್ ಅಂತಾ ಸಚಿವರಿಗೆ ಕನ್ಫರ್ಮ್ ಮಾಹಿತಿ ಕೊಟ್ಟರಂತೆ. ಜೊತೆಗೆ, ಬೆಳಗ್ಗೆಯಿಂದ ಊಟ ಕೊಟ್ಟಿದ್ದೀವಿ, ನೀರು ಕೊಟ್ಟಿದ್ದೀ ಅಂತಾ ಮಾಹಿತಿ ಸಹ ಹೇಳಿದರಂತೆ.
ಅದೇ ವೇಳೆ, ಸಾರ್ ನಮ್ಮ ಮನೆ ನೋಡಿ ಅಂತಾ ಕೆಲ ಹಿರಿಯರು ಸಚಿವ ಆರ್ ಅಶೋಕ್ಗೆ ಕೇಳಿಕೊಂಡರು. ಆಗ, ಕಾಂಪೌಂಡ್ ಹೊರ ಭಾಗದಿಂದಲೇ ಸಚಿವರು ನೋಡಿ ಹೊರಟು ಹೋದರು. ಈ ನಡುವೆ, ಅಕ್ಕಪಕ್ಕದ ಮನೆಯವರು ಸಾರ್ ಸಾರ್ ಅಂತಾ ಕೂಗಾಡಿದ್ರು ಸಚಿವರು ಜಾಣ ಕಿವುಡುತನ ತೋರಿ ಅಲ್ಲಿಂದ ಕಾಲ್ಕಿತ್ತರು.
ಯಾವುದೇ ಮನೆಯ ಒಳಗೆ ಹೋಗದೆ ಕೇವಲ ರೋಡ್ ಮಾತ್ರ ವೀಕ್ಷಣೆ ಮಾಡ್ತಿದ್ದಾರಂತೆ ಸಚಿವ ಅಶೋಕ್. ಸಾರ್ ನೋಡಿ ನಮ್ಮ ಮನೆಗೆ ನೀರು ನುಗ್ಗಿದೆ ಅಂತಾ ಸ್ಥಳೀಯರು ದೂರಿದಾಗ.. ಸಚಿವರು ಸಿಎಂ ಮನೆಗೆ ಹೋಗಿ ಮತ್ತೆ ಬರ್ತೀನಿ ಅಂತಾ ಹೇಳಿ ಕಾರ್ ಹತ್ತಿ ಹೊರಟೇ ಬಿಟ್ಟರಂತೆ!