‘ಅಶೋಕ್ ಇದಾನಲ್ಲ ಅವನು ಬೇಲ್ ಮೇಲಿದಾನೆ.. ಗೊತ್ತಾ ನಿಮಗೆಲ್ಲ?’
ತುಮಕೂರು: ಅಶೋಕ್ ಇದಾನಲ್ಲ ಅವನು ಬೇಲ್ ಮೇಲಿದಾನೆ ಗೊತ್ತಾ ನಿಮಗೆಲ್ಲ? ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ತುಮಕೂರು ಜಿಲ್ಲೆ ಶಿರಾ ವಿಧಾನಸಭೆ ಉಪಚುನಾವಣೆ ವೇಳೆ ಕ್ಷೇತ್ರದ ಕಳ್ಳಂಬೆಳ್ಳದಲ್ಲಿ ಪ್ರಚಾರದ ವೇಳೆ ಸಿದ್ದರಾಮಯ್ಯ ಹೀಗೆ ಮತದಾರರಿಗೆ ಪ್ರಶ್ನೆ ಹಾಕಿದರು. ಅಶೋಕ್ ಮೇಲೂ ಕ್ರಿಮಿನಲ್ ಕೇಸ್ ಇರಬೇಕಲ್ಲ ಗೊತ್ತಾ? ಹಿಂದೆ ಅವರು ನೆಂಟರಿಷ್ಟರಿಗೆಲ್ಲ ಜಮೀನು ಹಂಚಿಬಿಟ್ಟಿದ್ದ. ಆ ಕೇಸ್ ಇನ್ನೂ ಇದೆ ಅಶೋಕ್ ಮೇಲೆ. ಬೇಲ್ ತಗೊಂಡು ಓಡಾಡ್ತಿರೋ ಅಶೋಕಂಗೆ ನಮ್ಮ ಅಧ್ಯಕ್ಷರ ಬಗ್ಗೆ ಮಾತಾಡೋ ನೈತಿಕತೆ ಎಲ್ಲಿದೆ? ಡಿಕೆ ಶಿವಕುಮಾರ್ […]

ತುಮಕೂರು: ಅಶೋಕ್ ಇದಾನಲ್ಲ ಅವನು ಬೇಲ್ ಮೇಲಿದಾನೆ ಗೊತ್ತಾ ನಿಮಗೆಲ್ಲ? ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ತುಮಕೂರು ಜಿಲ್ಲೆ ಶಿರಾ ವಿಧಾನಸಭೆ ಉಪಚುನಾವಣೆ ವೇಳೆ ಕ್ಷೇತ್ರದ ಕಳ್ಳಂಬೆಳ್ಳದಲ್ಲಿ ಪ್ರಚಾರದ ವೇಳೆ ಸಿದ್ದರಾಮಯ್ಯ ಹೀಗೆ ಮತದಾರರಿಗೆ ಪ್ರಶ್ನೆ ಹಾಕಿದರು.
ಅಶೋಕ್ ಮೇಲೂ ಕ್ರಿಮಿನಲ್ ಕೇಸ್ ಇರಬೇಕಲ್ಲ ಗೊತ್ತಾ? ಹಿಂದೆ ಅವರು ನೆಂಟರಿಷ್ಟರಿಗೆಲ್ಲ ಜಮೀನು ಹಂಚಿಬಿಟ್ಟಿದ್ದ. ಆ ಕೇಸ್ ಇನ್ನೂ ಇದೆ ಅಶೋಕ್ ಮೇಲೆ.
ಬೇಲ್ ತಗೊಂಡು ಓಡಾಡ್ತಿರೋ ಅಶೋಕಂಗೆ ನಮ್ಮ ಅಧ್ಯಕ್ಷರ ಬಗ್ಗೆ ಮಾತಾಡೋ ನೈತಿಕತೆ ಎಲ್ಲಿದೆ? ಡಿಕೆ ಶಿವಕುಮಾರ್ ಬಗ್ಗೆ ಮಾತಾಡೋ ನೈತಿಕತೆ ಅಶೋಕ್ ಗಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಇಡೀ ದಿನ ಶಿರಾದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಚಿಕ್ಕದಾಸರಹಳ್ಳಿ, ಜಡಿಗೇನಹಳ್ಳಿ, ಪಾಲೇನಹಳ್ಳಿ, ಕಳ್ಳಂಬೆಳ್ಳ, ತರೂರು, ತಾಳಗುಂದದಲ್ಲಿ ಸಿದ್ದರಾಮಯ್ಯ ಪ್ರಚಾರ ಮುಗಿಸಿದರು. ಪ್ರಚಾರದಲ್ಲಿ ಅಭ್ಯರ್ಥಿ ಟಿಬಿ ಜಯಚಂದ್ರ, ದಿನೇಶ್ ಗುಂಡೂರಾವ್, ಎಂಬಿ ಪಾಟೀಲ್, ಮುದ್ದಹನುಮೇಗೌಡ ಭಾಗಿಯಾಗಿದ್ದರು.
Published On - 5:05 pm, Thu, 29 October 20




