ಬೆಂಗಳೂರು: ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಕಡಿಮೆಯಿದೆ. ರೋಗ ಲಕ್ಷಣವಿಲ್ಲದವರ ಕ್ವಾರಂಟೈನ್ಗೆ ವ್ಯವಸ್ಥೆ ಮಾಡಿದ್ದೇವೆ. ಹೋಟೆಲ್, ಕಲ್ಯಾಣ ಮಂಟಪಗಳಲ್ಲಿಯೂ ವ್ಯವಸ್ಥೆ ಮಾಡುತ್ತೇವೆ ಎಂದು ಸರ್ವಪಕ್ಷಗಳ ಸಭೆ ಬಳಿಕ ವಿಧಾನಸೌಧದಲ್ಲಿ ಸಚಿವ ಆರ್.ಅಶೋಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸರ್ವಪಕ್ಷಗಳ ಸಭೆಯಲ್ಲಿ ಬಹಳ ಅಮೂಲ್ಯವಾದ ಸಲಹೆಗಳನ್ನು ಶಾಸಕರು, ಸಂಸದರು ನೀಡಿದ್ದಾರೆ. ಅದನ್ನು ವಿಶೇಷ ಗಮನ ಹರಿಸಿ ಜಾರಿಗೆ ತರುತ್ತೇವೆ. ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳು ಕಡಿಮೆ ಇವೆ. ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕರು ತಿಳಿಸಿದ್ದಾರೆ.
ಬೆಡ್ ಅಲಾಟ್ಮೆಂಟ್ಗಾಗಿ ತುಷಾರ್ ಗಿರಿನಾಥ್ ನೇಮಕ:
ರೋಗನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇಧ ಔಷಧ ಬಳಕೆಗೆ ಹಲವಾರು ಸಲಹೆ ಕೊಟ್ಟಿದ್ದಾರೆ. ಈಗಾಗಲೇ ಕೇರಳದಲ್ಲಿ ಆಯುರ್ವೇದ ಔಷಧ ಬಳಕೆ ಮಾಡಲಾಗುತ್ತಿದೆ. ಸೈಡ್ ಎಫೆಕ್ಟ್ ಇಲ್ಲದಿರುವುದರಿಂದ ಆಯುರ್ವೇಧ ಔಷಧ ಬಳಸಬಹುದು. ಯಾವುದೇ ಶಾಸಕರು ತಮ್ಮ ಕ್ಷೇತ್ರದ ಆಸ್ಪತ್ರೆಗಳಿಗೆ ಭೇಟಿ ನೀಡಿ ಆಹಾರ ವ್ಯವಸ್ಥೆ ಬಗ್ಗೆ ಪರಿಶೀಲನೆ ಮಾಡಬಹುದು.
ಮತ್ತೆ ಲಾಕ್ಡೌನ್ ಮಾಡಲ್ಲ:
ಯಾವುದೇ ಕಾರಣಕ್ಕೂ ಮತ್ತೆ ಲಾಕ್ಡೌನ್ ಮಾಡುವುದಿಲ್ಲ. ಕೊರೊನಾ ಜತೆ ನಮ್ಮ ಜೀವನ ನಡೆಯಬೇಕಾಗಿರುತ್ತದೆ. ಕೊರೊನಾ ಜತೆ ಅಭಿವೃದ್ಧಿ ಕಾರ್ಯಗಳೂ ನಡೆಯಬೇಕು. ಕೊರೊನಾ ಸೋಂಕಿತರನ್ನು ವೈರಿಗಳಂತೆ ನೋಡಬೇಡಿ. ಅವರು ಕೊರೊನಾ ಸೋಂಕಿತರೇ ಹೊರತು ವಿಲನ್ಗಳಲ್ಲ. ಸೋಂಕಿತರು ಕಂಡುಬಂದ ಏರಿಯಾ ಸೀಲ್ಡೌನ್ ಮಾಡುವುದಿಲ್ಲ. ಸೋಂಕಿತರ ಮನೆಗಳನ್ನು ಮಾತ್ರ ಸೀಲ್ಡೌನ್ ಮಾಡ್ತೇವೆ.
Published On - 3:12 pm, Fri, 26 June 20