ಇಲ್ಲಿ ಕೇವಲ 20 ನಿಮಿಷದಲ್ಲೇ ಕೊರೊನಾ ಸೋಂಕು ಪತ್ತೆ ಹಚ್ಚಲಾಗುತ್ತೆ!

ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗ್ತಿದ್ದು, ಸೋಂಕು ತಪಾಸಣೆಯನ್ನೂ ಹೆಚ್ಚಿಸಲಾಗಿದೆ. ಕೇವಲ 20 ನಿಮಿಷಗಳಲ್ಲೇ ಸೊಂಕು ಪತ್ತೆ ಹಚ್ಚುವ ವ್ಯವಸ್ಥೆಯನ್ನ ಮಾಡಲಾಗಿದೆ. ಡಾ.ದಂಗ್ ಲ್ಯಾಬ್​ನಿಂತಾ ಖಾಸಗಿ ಲ್ಯಾಬ್​ಗಳಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಕೇವಲ 20 ನಿಮಿಷಗಳಲ್ಲೇ ಸೋಂಕಿತರನ್ನ ಗಂಟಲು ದ್ರವ ಪರೀಕ್ಷೆ ಮಾಡಿ ಕೊರೊನಾ ಇದೆಯೋ ಇಲ್ಲವೋ ಅನ್ನೋದನ್ನ ಪತ್ತೆ ಹಚ್ಚಲಾಗುತ್ತೆ. ಕೊರೊನಾ ‘ಭಾರ’ತ ಭಾರತದಲ್ಲಿ ಕೊರೊನಾ ವೈರಸ್ ಸೋಂಕು ಸುಂಟರಗಾಳಿಯಂತೆ ದೇಶವ್ಯಾಪಿ ಹಬ್ಬುತ್ತಲೇ ಇದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 4 ಲಕ್ಷ 90 ಸಾವಿರದ 401 […]

ಇಲ್ಲಿ ಕೇವಲ 20 ನಿಮಿಷದಲ್ಲೇ ಕೊರೊನಾ ಸೋಂಕು ಪತ್ತೆ ಹಚ್ಚಲಾಗುತ್ತೆ!
Follow us
ಸಾಧು ಶ್ರೀನಾಥ್​
| Updated By:

Updated on: Jun 26, 2020 | 3:52 PM

ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗ್ತಿದ್ದು, ಸೋಂಕು ತಪಾಸಣೆಯನ್ನೂ ಹೆಚ್ಚಿಸಲಾಗಿದೆ. ಕೇವಲ 20 ನಿಮಿಷಗಳಲ್ಲೇ ಸೊಂಕು ಪತ್ತೆ ಹಚ್ಚುವ ವ್ಯವಸ್ಥೆಯನ್ನ ಮಾಡಲಾಗಿದೆ. ಡಾ.ದಂಗ್ ಲ್ಯಾಬ್​ನಿಂತಾ ಖಾಸಗಿ ಲ್ಯಾಬ್​ಗಳಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಕೇವಲ 20 ನಿಮಿಷಗಳಲ್ಲೇ ಸೋಂಕಿತರನ್ನ ಗಂಟಲು ದ್ರವ ಪರೀಕ್ಷೆ ಮಾಡಿ ಕೊರೊನಾ ಇದೆಯೋ ಇಲ್ಲವೋ ಅನ್ನೋದನ್ನ ಪತ್ತೆ ಹಚ್ಚಲಾಗುತ್ತೆ.

ಕೊರೊನಾ ‘ಭಾರ’ತ ಭಾರತದಲ್ಲಿ ಕೊರೊನಾ ವೈರಸ್ ಸೋಂಕು ಸುಂಟರಗಾಳಿಯಂತೆ ದೇಶವ್ಯಾಪಿ ಹಬ್ಬುತ್ತಲೇ ಇದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 4 ಲಕ್ಷ 90 ಸಾವಿರದ 401 ಜನರಿಗೆ ಹೊಕ್ಕಿದ್ರೆ, ಸೋಂಕಿನಿಂದಾಗಿ 15 ಸಾವಿರದ 301 ಜನರು ಸಾವನ್ನಪ್ಪಿದ್ದಾರೆ. ಪ್ರಸ್ತುತ 1,86,514 ಜನರು ಸೋಂಕಿನಿಂದ ನರಳುತ್ತಿದ್ರೆ, 2 ಲಕ್ಷ 71 ಸಾವಿರದ 697 ಸೋಂಕಿತರು ಗುಣಮುಖರಾಗಿದ್ದಾರೆ.

24 ಗಂಟೆಯಲ್ಲಿ 400 ಬಲಿ ದೇಶದಲ್ಲಿ ಕೊರೊನಾ ಸೋಂಕಿತರು ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಲೇ ಇದ್ದಾರೆ. ಭಾರತದಲ್ಲಿ ಹೊಸದಾಗಿ 17,296 ಜನರಿಗೆ ಕೊರೊನಾ ದೃಢವಾಗಿದೆ. ಕೇವಲ 24 ಗಂಟೆಗಳ ಅವಧಿಯಲ್ಲಿ 407 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಸೋಂಕು ದಿನೇ ದಿನೆ ಹೆಚ್ಚಿನ ಪ್ರಮಾಣದಲ್ಲಿ ಹಬ್ಬುತ್ತಿರುವುದರಿಂದ ಆತಂಕವೂ ಹೆಚ್ಚಾಗಿದೆ.

‘ಆತ್ಮ ನಿರ್ಭರ’ಗೆ ಚಾಲನೆ ಲಾಕ್​ಡೌನ್ ಮುಗಿದ ಬಳಿಕ ಭಾರತವನ್ನ ಮತ್ತೆ ಶಸಕ್ತಗೊಳಿಸಲು ಪ್ರಧಾನಿ ನರೇಂದ್ರ ಮೋದಿ, ಆತ್ಮ ನಿರ್ಭರ ಅನ್ನೋ ಘೋಷ ವಾಕ್ಯವನ್ನ ಮೊಳಗಿಸಿದ್ರು. ಇದ್ರ ಬೆನ್ನಲ್ಲೇ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಆತ್ಮ ನಿರ್ಬರ ರೋಜ್ಗಾರ್ ಅಭಿಯಾನ ನಡೆಸುತ್ತಿದ್ದು, ಪ್ರಧಾನಿ ಮೋದಿ ಅಭಿಯಾನಕ್ಕೆ ಚಾಲನೆ ನೀಡಿದ್ರು. ವಿಡಿಯೋ ಸಂವಾದದ ಮೂಲಕವೇ ಅಭಿಯಾನಕ್ಕೆ ಚಾಲನೆ ನೀಡಿದ್ದು, ಹಲವರಿಗೆ ಉದ್ಯೂಗ ಕಲ್ಪಿಸಲಾಗುತ್ತಿದೆ.

ಇಂ‘ಧನ’ ಬರೆ..! ಕೊರೊನಾ ಲಾಕ್​ಡೌನ್​ ಎಫೆಕ್ಟ್ ತೈಲ ಬೆಲೆ ಮೇಲೂ ಹೊಡೆತ ಕೊಟ್ಟಿದೆ. ದೇಶದಲ್ಲಿ ಮೂರು ವಾರದಿಂದ ಪೆಟ್ರೋಲ್, ಡೀಸೆಲ್‌ ಬೆಲೆ ದುಬಾರಿಯಾಗುತ್ತಲೇ ಇದೆ. ಪೆಟ್ರೋಲ್ ಬೆಲೆ ಪ್ರತಿ ಲೀಟರ್​ಗೆ 21 ಪೈಸೆ ಏರಿಕೆಯಾಗಿದ್ರೆ, ಡೀಸೆಲ್‌ ಬೆಲೆ ಪ್ರತಿ ಲೀಟರ್​ಗೆ 17 ಪೈಸೆ ಏರಿಕೆಯಾಗಿದೆ. ಲಾಕ್​ಡೌನ್​ ಸಡಿಲಿಕೆ ಬಳಿಕ ಈಗಷ್ಟೇ ಕೆಲಸಕ್ಕೆ ತೆರಳುತ್ತಿರುವ ವಾಹನ ಸವಾರರಿಗೆ ತೈಲ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಎಸ್​ಪಿ ನಾಯಕರ ಆಕ್ರೋಶ ದೇಶದಲ್ಲಿ ತೈಲ ಬೆಲೆ ಕಳೆದ ಮೂರು ವಾರಗಳಿಂದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಮಾಜವಾದಿ ಪಕ್ಷದ ನಾಯಕರು, ಲಖನೌನಲ್ಲಿ ಪ್ರತಿಭಟನೆ ನಡೆಸಿದ್ರು. ಕೇಂದ್ರ ಸರ್ಕಾರವು ಕೂಡಲೇ ಇಂಧನ ಬೆಲೆಯನ್ನ ಇಳಿಸಬೇಕು ಅಂತಾ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ನೂರಾರು ಎಸ್​ ಪಿ ಕಾರ್ಯಕರ್ತರು ಭಾಗವಹಿಸಿದ್ರು. ಈ ವೇಳೆ, ಕೆಲವರನ್ನ ಪೊಲಿಸರು ವಶಕ್ಕೆ ಪಡೆದ್ರು.

ಆರೋಗ್ಯ ಸೇತು ‘ಇತಿಹಾಸ’ ದೇಶದಲ್ಲಿ ಕೊರೊನಾ ಸೋಂಕಿತರನ್ನ ಪತ್ತೆ ಹಚ್ಚುವ ಸಲುವಾಗಿ ಈಗಾಗಲೇ ಆರೋಗ್ಯ ಸೇತು ಆ್ಯಪ್​ನ್ನ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಇದ್ರ ಬಳಿಕ ಇತಿಹಾಸ ಆ್ಯಪ್​ಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಸ್ತು ಎಂದಿದ್ದಾರೆ. NCDC ತರಬೇತಿದಾರರರಿಗೆ ಜಿಲ್ಲಾ ವಲಯಗಳಲ್ಲೂ ಆರೋಗ್ಯ ಸೇತು ಮತ್ತು ಇತಿಹಾಸ ಆ್ಯಪ್​ಗಳನ್ನ ಬಳಸಲು ದೆಹಲಿ ಸರ್ಕಾರಕ್ಕೆ ಸೂಚಿಸಲಾಗಿದೆ.

ವಲಸಿಗರಿಗೆ ಕೆಲಸ ಕೊರೊನಾ ಲಾಕ್​ಡೌನ್​ನಿಂದಾಗಿ ವಲಸೆ ಕಾರ್ಮಿಕರು ಕೆಲಸವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ರು. ಆದ್ರೆ, ಉತ್ತರ ಪ್ರದೇಶದ ಸರ್ಕಾರ ಮನ್ರೇಗಾ ಯೋಜನೆಯಡಿ ವಲಸೆ ಕಾರ್ಮಿಕರಿಗೆ ಕೆಲಸ ನೀಡಿದೆ. ಹೀಗಾಗಿ. ಲಕೀಮ್ ಪುರದ ಖಿರಿಯಲ್ಲಿ ಹಲವರು ಕೆರೆಯಲ್ಲಿ ಹೂಳೆತ್ತುವುದು ಮತ್ತು ರಸ್ತೆ ಕಾಮಗಾರಿಯಲ್ಲಿ ತೊಡಗಿದ್ರು. ವಲಸೆ ಕಾರ್ಮಿಕರು ಇದ್ದಲ್ಲೇ ಕೆಲಸ ನೀಡಲು ಮನ್ರೇಗಾ ಸಾಥ್ ಕೊಟ್ಟಿದೆ.

‘ಕೊರೊನಿಲ್ ಪ್ರಚಾರ ಮಾಡಿಲ್ಲ’ ಕೊರೊನಾ ವೈರಸ್​ಗೆ ಆಯುರ್ವೇದ ಕೊರೊನಿಲ್​ ಮದ್ದು ಅಂತಾ ಪತಂಜಲಿ ಹೇಳಿತ್ತು. ಬಾಬಾ ರಾಮ್ ದೇವ್ ನೇತೃತ್ವದಲ್ಲಿ ಪತಂಜಲಿಯವರು ಕೊರೊನಿಲ್​ ಔಷಧಿ ಕಂಡು ಹಿಡಿದಿರೋದಾಗಿ ಹೇಳಿದ್ರು. ಆದ್ರೆ, ಸರ್ಕಾರ ಕೊರೊನಿಲ್​ ಅನ್ನ ಮಾರ್ಕೆಟ್​ಗೆ ತರದಂತೆ ಬ್ರೇಕ್ ಹಾಕಿತ್ತು. ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಪತಂಜಲಿ ಸಂಸ್ಥೆಯ CEO ಬಾಲಕೃಷ್ಣ, ನಾವು ಕೊರೊನಿಲ್ ಔಷಧಿಯನ್ನ ಪ್ರಚಾರ ಮಾಡಿಲ್ಲ. ಇದರಿಂದ ಎಷ್ಟು ಜನರನ್ನ ಗುಣಮುಖರನ್ನಾಗಿಸಿದ್ದೇವೆ ಅಂತಷ್ಟೇ ಹೇಳಿದ್ದೇವೆ ಅಂತಾ ಹೇಳಿದ್ರು.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್