ಗಾಲ್ವಾನ್ ಕಣಿವೆಯಲ್ಲಿ ಶಸ್ತ್ರಾಸ್ತ್ರ ಇಲ್ಲದೇ ಏಕೆ ಕಳಿಸಿದ್ರಿ? -ಮೋದಿಗೆ ಮತ್ತೆ ಅದೇ ಪ್ರಶ್ನೆ ಕೇಳಿದ ರಾಹುಲ್
ದೆಹಲಿ: ರಾತ್ರಿಯೆಲ್ಲಾ ಭಾರತ-ಚೀನಾ ನಡುವಣ ರಾಮಾಯಣ ಕೇಳಿದ ರಾಹುಲ್ ಗಾಂಧಿ ಬೆಳಗಾನೆದ್ದು ಮತ್ತೆ ಅದೇ ಪ್ರಶ್ನೆ ಕೇಳಿದ್ದಾರೆ. ಪ್ರಧಾನ ಮಂತ್ರಿ ಜೀ ನೀವು ನಮಗೆ ಸತ್ಯವನ್ನು ಹೇಳಬೇಕು. ಭಯಪಡಬೇಡಿ, ಗಾಬರಿ ಆಗಬೇಡಿ. ನೀವು ಭಾರತದ ಒಂದಿಂಚೂ ಭೂಮಿ ಅತಿಕ್ರಮಿಸಿಲ್ಲ ಅಂತೀರಿ. ಆದರೆ ಲಡಾಖ್ ಜನರು, ಸೇನೆಯ ನಿವೃತ್ತ ಅಧಿಕಾರಿಗಳು ಚೀನಾ ನಮ್ಮ ಭೂಮಿಯನ್ನ ಆಕ್ರಮಿಸಿದೆ ಎಂದು ಹೇಳಿದ್ದಾರೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿ ಭಾರತದ ಭೂಮಿಯಿಂದ ಚೀನಾ ಸೇನೆಯನ್ನು ವಾಪಸ್ ಓಡಿಸಬೇಕು. ಇದರ ಬಗ್ಗೆ […]
ದೆಹಲಿ: ರಾತ್ರಿಯೆಲ್ಲಾ ಭಾರತ-ಚೀನಾ ನಡುವಣ ರಾಮಾಯಣ ಕೇಳಿದ ರಾಹುಲ್ ಗಾಂಧಿ ಬೆಳಗಾನೆದ್ದು ಮತ್ತೆ ಅದೇ ಪ್ರಶ್ನೆ ಕೇಳಿದ್ದಾರೆ. ಪ್ರಧಾನ ಮಂತ್ರಿ ಜೀ ನೀವು ನಮಗೆ ಸತ್ಯವನ್ನು ಹೇಳಬೇಕು. ಭಯಪಡಬೇಡಿ, ಗಾಬರಿ ಆಗಬೇಡಿ. ನೀವು ಭಾರತದ ಒಂದಿಂಚೂ ಭೂಮಿ ಅತಿಕ್ರಮಿಸಿಲ್ಲ ಅಂತೀರಿ. ಆದರೆ ಲಡಾಖ್ ಜನರು, ಸೇನೆಯ ನಿವೃತ್ತ ಅಧಿಕಾರಿಗಳು ಚೀನಾ ನಮ್ಮ ಭೂಮಿಯನ್ನ ಆಕ್ರಮಿಸಿದೆ ಎಂದು ಹೇಳಿದ್ದಾರೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ನಾವೆಲ್ಲರೂ ಒಗ್ಗಟ್ಟಾಗಿ ಭಾರತದ ಭೂಮಿಯಿಂದ ಚೀನಾ ಸೇನೆಯನ್ನು ವಾಪಸ್ ಓಡಿಸಬೇಕು. ಇದರ ಬಗ್ಗೆ ನೀವು ಮಾತನಾಡಬೇಕು. ಗಾಲ್ವಾನ್ ಕಣಿವೆಯಲ್ಲಿ ಶಸ್ತ್ರಾಸ್ತ್ರ ಇಲ್ಲದೇ ನಮ್ಮ ಸೈನಿಕರನ್ನ ಏಕೆ ಕಳಿಸಿದ್ರಿ? ಯಾರು ಕಳುಹಿಸಿದರು? ಈ ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಟ್ವಿಟ್ಟರ್‌ನಲ್ಲಿ ವಿಡಿಯೋ ಮೂಲಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
प्रधानमंत्री जी,
देश आपसे सच सुनना चाहता है।#SpeakUpForOurJawans pic.twitter.com/tY9dvsqp4N
— Rahul Gandhi (@RahulGandhi) June 26, 2020
Published On - 6:02 pm, Fri, 26 June 20