ಅಪ್ರಾಪ್ತ ವಯಸ್ಸಿನ ಯುವತಿಗೆ ಥಳಿತ ಆರೋಪ, ಬಜ್ಪೆ ಠಾಣೆ ಮಹಿಳಾ ಪೇದೆ ವಿರುದ್ಧ FIR

| Updated By: KUSHAL V

Updated on: Nov 07, 2020 | 11:30 AM

ದಕ್ಷಿಣ ಕನ್ನಡ: ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತೆಗೆ ಮಹಿಳಾ ಸಿಬ್ಬಂದಿಯೊಬ್ಬರು ಥಳಿಸಿರುವ ಆರೋಪ ಮಂಗಳೂರಿನ ಬಜ್ಪೆ ಠಾಣೆಯಲ್ಲಿ ಕೇಳಿಬಂದಿದೆ. ಅಪ್ರಾಪ್ತೆಯ ಪೋಷಕರು ಬಜ್ಪೆ ಠಾಣೆಯ ಸಿಬ್ಬಂದಿ ವಿರುದ್ಧ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಏನಿದು ಪ್ರಕರಣ? ಮೂಡಬಿದ್ರೆಯ ಯುವಕನೊಬ್ಬ ತನ್ನನ್ನು ಲವ್ ಮಾಡುವಂತೆ ಅಪ್ರಾಪ್ತೆಗೆ ಒತ್ತಾಯ ಮಾಡುತ್ತಿದ್ದನಂತೆ. ಆಕೆಗೆ ಕರೆ ಮಾಡಿ ಒತ್ತಾಯ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಯುವತಿ ದೂರು ನೀಡಲು ತನ್ನ ಪೋಷಕರ ಜೊತೆ ಬಜ್ಪೆ ಪೊಲೀಸ್ ಠಾಣೆಗೆ ಹೋಗಿದ್ದರಂತೆ. ಈ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು […]

ಅಪ್ರಾಪ್ತ ವಯಸ್ಸಿನ ಯುವತಿಗೆ ಥಳಿತ ಆರೋಪ, ಬಜ್ಪೆ ಠಾಣೆ ಮಹಿಳಾ ಪೇದೆ ವಿರುದ್ಧ FIR
Follow us on

ದಕ್ಷಿಣ ಕನ್ನಡ: ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತೆಗೆ ಮಹಿಳಾ ಸಿಬ್ಬಂದಿಯೊಬ್ಬರು ಥಳಿಸಿರುವ ಆರೋಪ ಮಂಗಳೂರಿನ ಬಜ್ಪೆ ಠಾಣೆಯಲ್ಲಿ ಕೇಳಿಬಂದಿದೆ. ಅಪ್ರಾಪ್ತೆಯ ಪೋಷಕರು ಬಜ್ಪೆ ಠಾಣೆಯ ಸಿಬ್ಬಂದಿ ವಿರುದ್ಧ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಏನಿದು ಪ್ರಕರಣ?
ಮೂಡಬಿದ್ರೆಯ ಯುವಕನೊಬ್ಬ ತನ್ನನ್ನು ಲವ್ ಮಾಡುವಂತೆ ಅಪ್ರಾಪ್ತೆಗೆ ಒತ್ತಾಯ ಮಾಡುತ್ತಿದ್ದನಂತೆ. ಆಕೆಗೆ ಕರೆ ಮಾಡಿ ಒತ್ತಾಯ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಯುವತಿ ದೂರು ನೀಡಲು ತನ್ನ ಪೋಷಕರ ಜೊತೆ ಬಜ್ಪೆ ಪೊಲೀಸ್ ಠಾಣೆಗೆ ಹೋಗಿದ್ದರಂತೆ. ಈ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು 16 ವರ್ಷದ ಅಪ್ರಾಪ್ತೆಗೆ ಲಾಠಿಯಿಂದ ಹೊಡೆದರು ಎಂಬ ಆರೋಪ ಕೇಳಿಬಂದಿದೆ. ಸದ್ಯ, ಸಿಬ್ಬಂದಿ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಜೊತೆಗೆ, CWC ತಂಡದವರು ಬಾಲಕಿಯಿಂದ ಹೇಳಿಕೆ ಸಹ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Published On - 11:09 am, Sat, 7 November 20