ನಿಂಬೆಹಣ್ಣು ತೋರಿಸಿ ಹಣ ಸುಲಿಗೆ: ಕಾವಿಧಾರಿ ಗ್ಯಾಂಗ್​ ಬೆದರಿಕೆಗೆ ಕಾರ್ಮಿಕ ಕಂಗಾಲು

|

Updated on: Oct 04, 2020 | 2:04 PM

ನೆಲಮಂಗಲ: ನಿನ್ನ ಭವಿಷ್ಯ ಹೇಳುವೆ. ಹಣ ಕೊಡು ಇಲ್ಲ ಅಂದರೆ ತೊಂದರೆ ಮಾಡುವುದಾಗಿ ಯುವಕನಿಗೆ ಕಾವಿಧಾರಿಗಳ ಗುಂಪೊಂದು ಬೆದರಿಕೆ ಹಾಕಿರುವ ಘಟನೆ ಬಾಗಲಗುಂಟೆ ಠಾಣೆ ವ್ಯಾಪ್ತಿಯ ಮಲ್ಲಸಂದ್ರದಲ್ಲಿ ನಡೆದಿದೆ. ಕಾವಿ ತೊಟ್ಟಿರುವ ವ್ಯಕ್ತಿಯನ್ನು ಕಂಡ್ರೆ ಜನರಲ್ಲಿ ಭಕ್ತಿ ಭಾವ ಮೂಡುತ್ತೆ. ಆದ್ರೆ ಮಲ್ಲಸಂದ್ರದಲ್ಲಿ ಬೇರೆನೇ ಪರಿಸ್ಥಿತಿ ಇದೆ. ಇಲ್ಲೊಂದು ಗುಂಪು ಕಾವಿಧಾರಿಯ ವೇಷಧರಿಸಿ ಸುಲಿಗೆಗೆ ನಿಂತಿದೆ. ಬೆಳ್ಳಂ ಬೆಳಿಗ್ಗೆ ನಗರಕ್ಕೆ ದಾಳಿ ಇಡುವ 3 ಜನ ಕಾವಿಧಾರಿಗಳ ಗ್ಯಾಂಗ್ ದೇವರ ಹೆಸರು ಹೇಳಿ ಜನರನ್ನು ಬೆದರಿಸಿ ನಿಂಬೆ […]

ನಿಂಬೆಹಣ್ಣು ತೋರಿಸಿ ಹಣ ಸುಲಿಗೆ: ಕಾವಿಧಾರಿ ಗ್ಯಾಂಗ್​ ಬೆದರಿಕೆಗೆ ಕಾರ್ಮಿಕ ಕಂಗಾಲು
Follow us on

ನೆಲಮಂಗಲ: ನಿನ್ನ ಭವಿಷ್ಯ ಹೇಳುವೆ. ಹಣ ಕೊಡು ಇಲ್ಲ ಅಂದರೆ ತೊಂದರೆ ಮಾಡುವುದಾಗಿ ಯುವಕನಿಗೆ ಕಾವಿಧಾರಿಗಳ ಗುಂಪೊಂದು ಬೆದರಿಕೆ ಹಾಕಿರುವ ಘಟನೆ ಬಾಗಲಗುಂಟೆ ಠಾಣೆ ವ್ಯಾಪ್ತಿಯ ಮಲ್ಲಸಂದ್ರದಲ್ಲಿ ನಡೆದಿದೆ.

ಕಾವಿ ತೊಟ್ಟಿರುವ ವ್ಯಕ್ತಿಯನ್ನು ಕಂಡ್ರೆ ಜನರಲ್ಲಿ ಭಕ್ತಿ ಭಾವ ಮೂಡುತ್ತೆ. ಆದ್ರೆ ಮಲ್ಲಸಂದ್ರದಲ್ಲಿ ಬೇರೆನೇ ಪರಿಸ್ಥಿತಿ ಇದೆ. ಇಲ್ಲೊಂದು ಗುಂಪು ಕಾವಿಧಾರಿಯ ವೇಷಧರಿಸಿ ಸುಲಿಗೆಗೆ ನಿಂತಿದೆ. ಬೆಳ್ಳಂ ಬೆಳಿಗ್ಗೆ ನಗರಕ್ಕೆ ದಾಳಿ ಇಡುವ 3 ಜನ ಕಾವಿಧಾರಿಗಳ ಗ್ಯಾಂಗ್ ದೇವರ ಹೆಸರು ಹೇಳಿ ಜನರನ್ನು ಬೆದರಿಸಿ ನಿಂಬೆ ಹಣ್ಣು ತೋರಿಸಿ ಹಣ ಸುಲಿಗೆ ಮಾಡುತ್ತಿದ್ದಾರಂತೆ.

ಇದೇ ರೀತಿ ವಿಜಯಪುರ ಮೂಲದ ಕಾರ್ಮಿಕ ಸಂಗಮೇಶ್ ಬಳಿ ಅಪರಿಚಿತ ಕಾವಿಧಾರಿಗಳು ಹಣ ಪೀಕಲು ಯತ್ನಿಸಿದ್ದಾರೆ. ಈ ವೇಳೆ ಸಂಗಮೇಶ್ ತನ್ನ ಬಳಿ ಹಣವಿಲ್ಲ ಈಗ ತಾನೇ ಕೆಲಸಕ್ಕೆ ಬಂದಿರುವುದಾಗಿ ಹೇಳಿದ್ದಾನೆ. ಆದರೆ ಕಾವಿಧಾರಿಗಳು ಆತನಿಗೆ ಬೆದರಿಕೆ ಹಾಕಿದ್ದಾರೆ. ಸಂಗಮೇಶ್ ಬಳಿ ಹಣಕ್ಕೆ ದೌರ್ಜನ್ಯ ಮಾಡುತ್ತಿರುವ ವಿಡಿಯೋ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ. ಕಾವಿಧಾರಿಗಳ ಗ್ಯಾಂಗ್​ನಿಂದಾಗಿ ಸ್ಥಳೀಯರು ಆತಂಕದಲ್ಲಿದ್ದಾರೆ. ಬಾಗಲಗುಂಟೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.