ಸೋತವರನ್ನು ಸಚಿವರಾಗಿ ಮಾಡ್ಬೇಕೆಂದ್ರೆ ನಿಮ್ಮ ಮಂತ್ರಿ ಸ್ಥಾನ ಬಿಟ್ಟುಕೊಡಿ; ರಮೇಶ್​​ಗೆ ರೇಣುಕಾಚಾರ್ಯ ಟಾಂಗ್

ಸೋತವರಿಗೆ ಸಚಿವ ಸ್ಥಾನ ಕೊಡಬೇಕೆಂದರೆ ನೀವು ತ್ಯಾಗ ಮಾಡಿ. ನಿಮ್ಮ ಸಚಿವ ಸ್ಥಾನ ತ್ಯಾಗಮಾಡಿ ಸೋತವರಿಗೆ ಸಚಿವ ಸ್ಥಾನ ನೀಡಿ ಎಂದು ರಮೇಶ್ ಜಾರಕಿಹೊಳಿಗೆ ಶಾಸಕ ರೇಣುಕಾಚಾರ್ಯ ಟಾಂಗ್ ಕೊಟ್ಟಿದ್ದಾರೆ.

ಸೋತವರನ್ನು ಸಚಿವರಾಗಿ ಮಾಡ್ಬೇಕೆಂದ್ರೆ ನಿಮ್ಮ ಮಂತ್ರಿ ಸ್ಥಾನ ಬಿಟ್ಟುಕೊಡಿ; ರಮೇಶ್​​ಗೆ ರೇಣುಕಾಚಾರ್ಯ ಟಾಂಗ್
M.P.ರೇಣುಕಾಚಾರ್ಯ (ಎಡ); ರಮೇಶ್​ ಜಾರಕಿಹೊಳಿ (ಬಲ)

Updated on: Nov 29, 2020 | 2:00 PM

ದಾವಣಗೆರೆ: ಚುನಾವಣೆಯಲ್ಲಿ ಗೆದ್ದ ಶಾಸಕರಿಗೆ ಸಚಿವ ಸ್ಥಾನವನ್ನು ನೀಡಲಿ. ಸೋತ ವ್ಯಕ್ತಿಯ ಹೆಸರು ಪದೇಪದೆ ಏಕೆ ಪ್ರಸ್ತಾಪಿಸುತ್ತಾರೆ. ಸೋತವರಿಗೆ ಸಚಿವ ಸ್ಥಾನ ಕೊಡಬೇಕೆಂದರೆ ನೀವು ತ್ಯಾಗ ಮಾಡಿ. ನಿಮ್ಮ ಸಚಿವ ಸ್ಥಾನ ತ್ಯಾಗಮಾಡಿ ಸೋತವರಿಗೆ ಸಚಿವ ಸ್ಥಾನ ನೀಡಿ ಎಂದು ರಮೇಶ್ ಜಾರಕಿಹೊಳಿಗೆ ಶಾಸಕ ರೇಣುಕಾಚಾರ್ಯ ಟಾಂಗ್ ಕೊಟ್ಟಿದ್ದಾರೆ.

ನೀವು ತ್ಯಾಗ ಮಾಡಿ ಸಚಿವ ಸ್ಥಾನ ನೀಡಿದ್ರೆ ನಮ್ಮ ಅಭ್ಯಂತರವಿಲ್ಲ. ಸರ್ಕಾರ ಬರುವುದಕ್ಕೆ ಕಾರಣರಾದವರಿಗೆ ಸಚಿವ ಸ್ಥಾನ ನೀಡಲಿ. ಎಂಟಿಬಿ, ವಿಶ್ವನಾಥ್, ಆರ್.ಶಂಕರ್‌ಗೆ ಸಚಿವ ಸ್ಥಾನ ನೀಡಲಿ. ಸೋತವರಿಗೂ ಅವಕಾಶ ಕೊಟ್ಟರೆ ಗೆದ್ದವರ ಸ್ಥಿತಿ ಏನಾಗಬೇಕು ಎಂದು ರೇಣುಕಾಚಾರ್ಯ ಹೇಳಿದರು.

‘ಮುಂದಿನ ವಾರ ನವದೆಹಲಿಗೆ ಶಾಸಕರೆಲ್ಲರೂ ಹೋಗುತ್ತೇವೆ’
ಮುಂದಿನ ವಾರ ನವದೆಹಲಿಗೆ ಶಾಸಕರೆಲ್ಲರೂ ಹೋಗುತ್ತೇವೆ. ವರಿಷ್ಠರನ್ನು ಭೇಟಿ ಮಾಡಿ ನಮ್ಮ ಅಭಿಪ್ರಾಯವನ್ನು ತಿಳಿಸುತ್ತೇವೆ. ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ, ಜಗಳವೂ ಇಲ್ಲ. ಮಿತ್ರಮಂಡಳಿಯ ವಿರುದ್ಧವಾಗಿಲ್ಲ, ನಾವೆಲ್ಲರೂ ಒಟ್ಟಾಗಿದ್ದೇವೆ ಎಂದು ಜಿಲ್ಲೆಯ ಹೊನ್ನಾಳಿಯಲ್ಲಿ ರೇಣುಕಾಚಾರ್ಯ ಹೇಳಿದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಬಿಜೆಪಿಯತ್ತ ಮುಖ ಮಾಡಿದ ಕಾಂಗ್ರೆಸ್ ನಾಯಕರು, ಜಾರಕಿಹೊಳಿ ಸಿಡಿಸ್ತಾರಾ ‘ಲಕ್ಷ್ಮಿ’ ಪಟಾಕಿ!

Published On - 1:56 pm, Sun, 29 November 20