ಟಾರ್ಗೆಟ್ ಮಾಡಿದಷ್ಟೂ ಸಿದ್ದರಾಮಯ್ಯ ಮಹತ್ವ ಹೆಚ್ಚಾಗುತ್ತದೆ: ಡಾ. ಯತೀಂದ್ರ

ಮೈಸೂರು: ನಮ್ಮ ತಂದೆ ಸಿದ್ದರಾಮಯ್ಯ ಮಾಸ್‌ ಲೀಡರ್. ಅವರನ್ನು ವಿಪಕ್ಷ ಸ್ಥಾನದಿಂದ ಇಳಿಸಲು ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಮತದಾರರನ್ನು ಪೋಲರೈಸ್ ಮಾಡಲು, ಸಿದ್ದರಾಮಯ್ಯರನ್ನು ಒಂದು ಜಾತಿಗೆ ಸೀಮಿತ ಮಾಡಲು ಟಾರ್ಗೆಟ್ ಮಡಲಾಗುತ್ತಿದೆ. ಬೇಕು ಅಂತಾ ಟೀಕೆ ಮಾಡಿ ಕೆಣಕುತ್ತಿದ್ದಾರೆ. ಜನರಿಗೆ ಎಲ್ಲಾ ಗೊತ್ತಿದೆ ಜನ ಅವರ ಟ್ರ್ಯಾಪ್‌ಗೆ ಬೀಳಲ್ಲ ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ತಮ್ಮ ತಂದೆಯ ಇಂದಿನ ಸ್ಥಿತಿ ಬಗ್ಗೆ ಟಿವಿ9ಗೆ ಹೇಳಿದ್ದಾರೆ. ವಿಪಕ್ಷ ನಾಯರಾಗಿ ಮುಂದುವರಿದರೆ ಬಿಜೆಪಿಗೆ ಸಮಸ್ಯೆ‌, ಹಾಗಾಗಿ.. ಕಾಂಗ್ರೆಸ್ ಪಕ್ಷದಲ್ಲಿ […]

ಟಾರ್ಗೆಟ್ ಮಾಡಿದಷ್ಟೂ ಸಿದ್ದರಾಮಯ್ಯ ಮಹತ್ವ ಹೆಚ್ಚಾಗುತ್ತದೆ:  ಡಾ. ಯತೀಂದ್ರ
sadhu srinath

|

Nov 23, 2019 | 12:10 PM

ಮೈಸೂರು: ನಮ್ಮ ತಂದೆ ಸಿದ್ದರಾಮಯ್ಯ ಮಾಸ್‌ ಲೀಡರ್. ಅವರನ್ನು ವಿಪಕ್ಷ ಸ್ಥಾನದಿಂದ ಇಳಿಸಲು ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಮತದಾರರನ್ನು ಪೋಲರೈಸ್ ಮಾಡಲು, ಸಿದ್ದರಾಮಯ್ಯರನ್ನು ಒಂದು ಜಾತಿಗೆ ಸೀಮಿತ ಮಾಡಲು ಟಾರ್ಗೆಟ್ ಮಡಲಾಗುತ್ತಿದೆ. ಬೇಕು ಅಂತಾ ಟೀಕೆ ಮಾಡಿ ಕೆಣಕುತ್ತಿದ್ದಾರೆ. ಜನರಿಗೆ ಎಲ್ಲಾ ಗೊತ್ತಿದೆ ಜನ ಅವರ ಟ್ರ್ಯಾಪ್‌ಗೆ ಬೀಳಲ್ಲ ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ತಮ್ಮ ತಂದೆಯ ಇಂದಿನ ಸ್ಥಿತಿ ಬಗ್ಗೆ ಟಿವಿ9ಗೆ ಹೇಳಿದ್ದಾರೆ. ವಿಪಕ್ಷ ನಾಯರಾಗಿ ಮುಂದುವರಿದರೆ ಬಿಜೆಪಿಗೆ ಸಮಸ್ಯೆ‌, ಹಾಗಾಗಿ.. ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ಮಾಸ್ ಲೀಡರ್ಸ್​ ಇದ್ದಾರೆ. ನಮ್ಮ ತಂದೆ ಸಹಾ ಒಬ್ಬರು. ಅವರು ವೋಕಲ್ ಆಗಿ ಓಡಾಡುತ್ತಾರೆ. ವಿಪಕ್ಷ ನಾಯಕರಾಗಿ ಮುಂದುವರಿದರೆ ಬಿಜೆಪಿಗೆ ಸಮಸ್ಯೆ‌. ಹಾಗಾಗಿ.. ಇದೆಲ್ಲಾ ನಡೆದಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಸೂಚ್ಯವಾಗಿ ತಿಳಿಸಿದರು.

ಅವರು ಏಕಾಂಗಿಯಲ್ಲ, ಎಲ್ಲರೂ ಅವರ ಜೊತೆ ಇದ್ದಾರೆ. ಸಿದ್ದರಾಮಯ್ಯ ಅವರನ್ನು ನಾನು ಹತ್ತಿರದಿಂದ ಮಗನಾಗಿ ನೋಡಿದ್ದೇನೆ. ರಾಜಕಾರಣದ ಬಗ್ಗೆ ನನಗೆ ಹೆಚ್ಚು ಗೊತ್ತಿರಲಿಲ್ಲ. ಮೂರು ವರ್ಷದಿಂದ ಮಾತ್ರ ನಾನು ಅವರನ್ನ ರಾಜಕಾರಣಿಯಾಗಿ ನೋಡುತ್ತಿದ್ದೇನೆ. ಟಾರ್ಗೆಟ್ ಮಾಡಿದಷ್ಟೂ ಅವರ ಮಹತ್ವ ಗೊತ್ತಾಗುತ್ತೆ. ಅವರು ಇನ್ನೂ ಜನಪ್ರಿಯರಾಗುತ್ತಾರೆ. ಅವರ ಬಲ ಕುಗ್ಗುವುದಿಲ್ಲ ಅವರ ಬಲ ಜಾಸ್ತಿಯಾಗುತ್ತೇ. ಅನಗತ್ಯ ಟೀಕೆ ಮಾಡುವುದನ್ನು ಬಿಡಬೇಕು ಎಂದು ಯತೀಂದ್ರ ತಿಳಿಸಿದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada