ಆಮಂತ್ರಣ ಇಲ್ಲದಿದ್ದರೂ BSY ಇದ್ದ ವೇದಿಕೆ ಏರಿದ ಹ್ಯಾರಿಸ್ ಪುತ್ರ ನಲಪಾಡ್!

ಬೆಂಗಳೂರು: ಆಮಂತ್ರಣ ಇಲ್ಲದಿದ್ದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ N.A. ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಹ್ಯಾರಿಸ್ ವೇದಿಕೆಯನ್ನು ಹಂಚಿಕೊಂಡಿದ್ದಾರೆ! ಸಿಎಂ ಯಡಿಯೂರಪ್ಪ ಕ್ಲೀನ್ ಏರ್ ಸ್ಟ್ರೀಟ್ ಪರಿಕಲ್ಪನೆಗೆ ಚಾಲನೆ ನೀಡಿದರು. ತನ್ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೊದಲು ಸ್ಥಳೀಯ ಶಾಸಕ N.A.ಹ್ಯಾರಿಸ್ ವೇದಿಕೆ ಹಂಚಿಕೊಂಡರು. ಬಳಿಕ, ಅವರ ಹಿಂದೆಯೇ ಬಂದು ಪುತ್ರ ನಲಪಾಡ್ ಹಿಂದಿನ ಸಾಲಿನಲ್ಲಿ ಕುಳಿತುಕೊಂಡರು. ಆದ್ರೆ ಸರ್ಕಾರಿ ಕಾರ್ಯಕ್ರಮದಲ್ಲಿ ನಲಪಾಡ್ ಹ್ಯಾರಿಸ್‌ಗೇನು ಕೆಲಸ? ಸಚಿವರು, ಶಾಸಕರು ಮತ್ತು ಅಧಿಕಾರಿಗಳಿದ್ದ ವೇದಿಕೆಯಲ್ಲಿ ನಲಪಾಡ್‌ಗೆ ಏನು […]

ಆಮಂತ್ರಣ ಇಲ್ಲದಿದ್ದರೂ BSY ಇದ್ದ ವೇದಿಕೆ ಏರಿದ ಹ್ಯಾರಿಸ್ ಪುತ್ರ ನಲಪಾಡ್!
Edited By:

Updated on: Nov 07, 2020 | 1:06 PM

ಬೆಂಗಳೂರು: ಆಮಂತ್ರಣ ಇಲ್ಲದಿದ್ದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ N.A. ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಹ್ಯಾರಿಸ್ ವೇದಿಕೆಯನ್ನು ಹಂಚಿಕೊಂಡಿದ್ದಾರೆ!

ಸಿಎಂ ಯಡಿಯೂರಪ್ಪ ಕ್ಲೀನ್ ಏರ್ ಸ್ಟ್ರೀಟ್ ಪರಿಕಲ್ಪನೆಗೆ ಚಾಲನೆ ನೀಡಿದರು. ತನ್ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೊದಲು ಸ್ಥಳೀಯ ಶಾಸಕ N.A.ಹ್ಯಾರಿಸ್ ವೇದಿಕೆ ಹಂಚಿಕೊಂಡರು. ಬಳಿಕ, ಅವರ ಹಿಂದೆಯೇ ಬಂದು ಪುತ್ರ ನಲಪಾಡ್ ಹಿಂದಿನ ಸಾಲಿನಲ್ಲಿ ಕುಳಿತುಕೊಂಡರು.

ಆದ್ರೆ ಸರ್ಕಾರಿ ಕಾರ್ಯಕ್ರಮದಲ್ಲಿ ನಲಪಾಡ್ ಹ್ಯಾರಿಸ್‌ಗೇನು ಕೆಲಸ? ಸಚಿವರು, ಶಾಸಕರು ಮತ್ತು ಅಧಿಕಾರಿಗಳಿದ್ದ ವೇದಿಕೆಯಲ್ಲಿ ನಲಪಾಡ್‌ಗೆ ಏನು ಕೆಲಸ? ಆಮಂತ್ರಣ ಇಲ್ಲದೇ ಹೋದ್ರು ನಲಪಾಡ್ ಹ್ಯಾರಿಸ್ ವೇದಿಕೆ ಏರಿದ್ದು ಯಾಕೆ? ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಲ ಅಧಿಕಾರಿಗಳು ಚರ್ಚಿಸತೊಡಗಿದರು.

ಅಷ್ಟೇ ಅಲ್ಲ; ಹ್ಯಾರಿಸ್ ಹಿಂದೆ ಕುಳಿತು ಪುತ್ರ ನಲಪಾಡ್ ಪೋಸ್ ನೀಡಿದ್ದೇ ನೀಡಿದ್ದು! ಜೊತೆಗೆ, ಚರ್ಚ್ ಸ್ಟ್ರೀಟ್‌ನಲ್ಲಿ ಸಿಎಂ ಯಡಿಯೂರಪ್ಪ ನಡೆದುಕೊಂಡು ಹೋಗುತ್ತಿದ್ದರೆ ಹ್ಯಾರಿಸ್ ಪುತ್ರ ನಲಪಾಡ್ ಮಾತ್ರ ಎಲೆಕ್ಟ್ರಾನಿಕ್​ ವೆಹಿಕಲ್‌ನಲ್ಲಿ ಸಂಚಾರ ಮಾಡಿ, ಅಧಿಕಾರಿಗಳ ಹುಬ್ಬೇರುವಂತೆ ಮಾಡಿದರು.

Published On - 1:03 pm, Sat, 7 November 20