ಏನೇ ಜವಾಬ್ದಾರಿ ನೀಡದೆ ಕೆಲಸ ಮಾಡಲು ಹೇಳಿದರೆ ಮಾಡುವೆ ಎಂದ ನಲಪಾಡ್​; ಯುವ ಕಾಂಗ್ರೆಸ್ ನಾಯಕತ್ವದ ಗೊಂದಲಕ್ಕೆ ಬಿತ್ತಾ ತೆರೆ?

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 07, 2021 | 8:43 PM

ರಕ್ಷಾ ರಾಮಯ್ಯ, ಮಂಜುನಾಥ್​, ಮಿಥುನ್ ನಾವೆಲ್ಲ ಬ್ರದರ್ಸ್​. ಯುವ ಕಾಂಗ್ರೆಸ್ ಚುನಾವಣೆಯಲ್ಲಿ ನನಗೆ 64 ಸಾವಿರ ಮತ ಬಂತು. ಅಷ್ಟು ಜನ ನನ್ನ ಮೇಲೆ ನಂಬಿಕೆ ಇಟ್ಟು ವೋಟ್ ಹಾಕಿದ್ದಾರೆ. ಚುನಾವಣೆ ಬಳಿಕ ಡಿಸ್​ ಕ್ವಾಲಿಫೈ ಮಾಡೋದು ಸರಿಯಲ್ಲ ಎಂದು ನಲಪಾಡ್​ ಹೇಳಿದರು.

ಏನೇ ಜವಾಬ್ದಾರಿ ನೀಡದೆ ಕೆಲಸ ಮಾಡಲು ಹೇಳಿದರೆ ಮಾಡುವೆ ಎಂದ ನಲಪಾಡ್​; ಯುವ ಕಾಂಗ್ರೆಸ್ ನಾಯಕತ್ವದ ಗೊಂದಲಕ್ಕೆ ಬಿತ್ತಾ ತೆರೆ?
ಮೊಹಮ್ಮದ್​ ನಲಪಾಡ್ ಹ್ಯಾರಿಸ್
Follow us on

ಬೆಂಗಳೂರು: ಫಸ್ಟ್, ಸೆಕೆಂಡ್ ಪ್ಲೇಸ್ ಪಡೆದವರು ಮತ್ತು ಸೋತವರೆಲ್ಲಾ ನಮ್ಮವರೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರನ್ನು ಭೇಟಿಯಾದ ಬಳಿಕ ಮೊಹಮ್ಮದ್​ ನಲಪಾಡ್ ಹ್ಯಾರಿಸ್ ಹೇಳಿದರು. ರಾಜ್ಯ ಯುವ ಕಾಂಗ್ರೆಸ್ ಘಟಕದ ಚುನಾವಣೆ ಬಗ್ಗೆ ಮೊಹಮ್ಮದ್​ ನಲಪಾಡ್ ಹ್ಯಾರಿಸ್ ಮಾತನಾಡಿದರು.

ರಕ್ಷಾ ರಾಮಯ್ಯ, ಮಂಜುನಾಥ್​, ಮಿಥುನ್ ನಾವೆಲ್ಲ ಬ್ರದರ್ಸ್​. ಯುವ ಕಾಂಗ್ರೆಸ್ ಚುನಾವಣೆಯಲ್ಲಿ ನನಗೆ 64 ಸಾವಿರ ಮತ ಬಂತು. ಅಷ್ಟು ಜನ ನನ್ನ ಮೇಲೆ ನಂಬಿಕೆ ಇಟ್ಟು ವೋಟ್ ಹಾಕಿದ್ದಾರೆ. ಚುನಾವಣೆ ಬಳಿಕ ಡಿಸ್​ ಕ್ವಾಲಿಫೈ ಮಾಡೋದು ಸರಿಯಲ್ಲ. ಡಿಸ್​ಕ್ವಾಲಿಫೈ ಮಾಡಿರುವುದನ್ನು ವಾಪಸ್ ಪಡೆಯಬೇಕು. ಹಾಗಾಗಿ, ನಾನು ದೆಹಲಿಯಲ್ಲಿ ಯೂತ್ ಕಾಂಗ್ರೆಸ್ ಉಸ್ತುವಾರಿ ಕೃಷ್ಣಾ ಅಲ್ವಾರ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಭೇಟಿಯಾಗಿ ಮನವಿ ಮಾಡಿದ್ದೇನೆ ಎಂದು ಹೇಳಿದರು.

ಜೊತೆಗೆ, ನನಗೆ ನೂರಕ್ಕೆ ನೂರರಷ್ಟು ನಂಬಿಕೆ ಇದೆ. ಪಕ್ಷದಿಂದ ನನಗೆ ಸೂಕ್ತ ಸ್ಥಾನಮಾನ ಸಿಗುವ ವಿಶ್ವಾಸವಿದೆ ಎಂದು ನಲಪಾಡ್ ಹೇಳಿದರು. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಏನೇ ಜವಾಬ್ದಾರಿ ನೀಡದೆ ಕೆಲಸ ಮಾಡಲು ಹೇಳಿದರೆ ಮಾಡುವೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನಿವಾಸಕ್ಕೆ ಮೊಹಮ್ಮದ್ ನಲಪಾಡ್ ಇಂದು ಭೇಟಿಕೊಟ್ಟರು. ಏರ್‌ಪೋರ್ಟ್‌ನಿಂದ ಮೆರವಣಿಗೆಯಲ್ಲಿ ಆಗಮಿಸಿದ ನಲಪಾಡ್ ಯುವ ಕಾಂಗ್ರೆಸ್ ಎಲೆಕ್ಷನ್‌ನಲ್ಲಿ ಹೆಚ್ಚು ಮತಗಳಿಸಿ ಆದ್ರೂ ಚುನಾವಣೆಯಲ್ಲಿ ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ಹುದ್ದೆ ಮತ್ತು ಜವಾಬ್ದಾರಿ ನೀಡಲು ಡಿಕೆಶಿ ಬಳಿ ಚರ್ಚೆ ನಡೆಸಿದರು.

ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೋತವರು ಪಕ್ಷಕ್ಕೆ ದುಡಿಬೇಕು, ಗೆದ್ದವರೂ ಕೆಲಸ ಮಾಡಬೇಕು. ಚುನಾವಣೆಯಲ್ಲಿ ಸೋತವರು, ಗೆದ್ದವರು ಎಲ್ಲರೂ ನಮ್ಮವರೇ. ಎಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರೂ ನಮ್ಮವರೇ ಎಂದು ಹೇಳಿದರು.

ವರಿಷ್ಠರು ಏನು ಸೂಚನೆ ಕೊಡ್ತಾರೋ ಅದನ್ನು ಪಾಲಿಸುತ್ತೇನೆ. ಸೋತವರಿಗೂ ಪಕ್ಷದಲ್ಲಿ ಏನಾದ್ರೂ ಜವಾಬ್ದಾರಿ ಕೊಡಬಹುದು ಎಂದು ಸಹ ಹೇಳಿದರು.

ಇತ್ತ, ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ನೂತನ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಭೇಟಿಯಾದರು. ಸಿದ್ದರಾಮಯ್ಯರ ನಿವಾಸಕ್ಕೆ ತೆರಳಿದ ರಕ್ಷಾ ರಾಮಯ್ಯ ಎಲೆಕ್ಷನ್​ ಗೆಲ್ಲಲು ನೆರವು ನೀಡಿದ್ದಕ್ಕೆ ತಮ್ಮ ಕೃತಜ್ಞತೆ ಸಲ್ಲಿಸಿದರು.

ಚುನಾವಣಾ ಸಂದರ್ಭದಲ್ಲಿ ಸಿದ್ದರಾಮಯ್ಯ ರಕ್ಷಾ ರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದರು. ರಕ್ಷ ರಾಮಯ್ಯಗೆ ಬೆಂಬಲಿಸುವಂತೆ ಬೆಂಗಳೂರು ಶಾಸಕರಿಗೆ ಸಿದ್ದರಾಮಯ್ಯ ಕರೆಕೊಟ್ಟಿದ್ದರು.

ಈಶ್ವರಪ್ಪ ಯಾರ ವಿರುದ್ಧ ಹೋರಾಟ ಮಾಡ್ತಿದ್ದಾರೆ? -ಸಚಿವರ ನಡೆಗೆ ಡಿ.ಕೆ.ಶಿವಕುಮಾರ್ ಶಾಕ್​

Published On - 7:54 pm, Sun, 7 February 21