BIEC ಕೊವಿಡ್ ಸೆಂಟರ್​ಗೆ ಆರಂಭದಲ್ಲೇ ವಿಘ್ನ: ಬಿಬಿಎಂಪಿ, ಗುತ್ತಿಗೆದಾರರ ಹಗ್ಗಜಗ್ಗಾಟ

| Updated By:

Updated on: Jul 24, 2020 | 4:46 PM

ಬೆಂಗಳೂರು: ಬಿಐಇಸಿ ಕೊವಿಡ್ ಕೇರ್​ ಸೆಂಟರ್​ಗೆ ಆರಂಭದಲ್ಲೇ ವಿಘ್ನಗಳು ಎದುರಾಗಿವೆ. ಕೊವಿಡ್ ಕೇರ್ ಸೆಂಟರ್ ವಿಚಾರದಲ್ಲಿ ಬಿಬಿಎಂಪಿ, ಗುತ್ತಿಗೆದಾರರ ನಡುವೆ ಬಾಡಿಗೆ ಹಣಕ್ಕೆ ತಿಕ್ಕಾಟ ಜೋರಾಗಿದೆ. ಬಾಡಿಗೆ‌ ಹಣ, ವಸ್ತುಗಳ ಖರೀದಿ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಸರ್ಕಾರ ನಿಗದಿ ಮಾಡಿರುವ ಬಾಡಿಗೆ, ವಸ್ತುಗಳ ಖರೀದಿ ದರಕ್ಕೂ ಗುತ್ತಿಗೆದಾರರು ಒಪ್ಪುತ್ತಿಲ್ಲ. ಪ್ರತಿ ದಿನ 800 ರೂ. ಬಾಡಿಗೆಯಂತೆ 26 ವಸ್ತುಗಳು‌ ಸೇರಿ ಮೂಲಸೌಕರ್ಯ ಒದಗಿಸಲು ಬಿಬಿಎಂಪಿ ಆದೇಶಿಸಿತ್ತು. ಬಿಬಿಎಂಪಿ, ಗುತ್ತಿಗೆದಾರರ ನಡುವೆ ವಾರ್ 6,500 ಬೆಡ್ ಹಾಗೂ ಬಿಬಿಎಂಪಿ […]

BIEC ಕೊವಿಡ್ ಸೆಂಟರ್​ಗೆ ಆರಂಭದಲ್ಲೇ ವಿಘ್ನ: ಬಿಬಿಎಂಪಿ, ಗುತ್ತಿಗೆದಾರರ ಹಗ್ಗಜಗ್ಗಾಟ
Follow us on

ಬೆಂಗಳೂರು: ಬಿಐಇಸಿ ಕೊವಿಡ್ ಕೇರ್​ ಸೆಂಟರ್​ಗೆ ಆರಂಭದಲ್ಲೇ ವಿಘ್ನಗಳು ಎದುರಾಗಿವೆ. ಕೊವಿಡ್ ಕೇರ್ ಸೆಂಟರ್ ವಿಚಾರದಲ್ಲಿ ಬಿಬಿಎಂಪಿ, ಗುತ್ತಿಗೆದಾರರ ನಡುವೆ ಬಾಡಿಗೆ ಹಣಕ್ಕೆ ತಿಕ್ಕಾಟ ಜೋರಾಗಿದೆ.

ಬಾಡಿಗೆ‌ ಹಣ, ವಸ್ತುಗಳ ಖರೀದಿ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಸರ್ಕಾರ ನಿಗದಿ ಮಾಡಿರುವ ಬಾಡಿಗೆ, ವಸ್ತುಗಳ ಖರೀದಿ ದರಕ್ಕೂ ಗುತ್ತಿಗೆದಾರರು ಒಪ್ಪುತ್ತಿಲ್ಲ. ಪ್ರತಿ ದಿನ 800 ರೂ. ಬಾಡಿಗೆಯಂತೆ 26 ವಸ್ತುಗಳು‌ ಸೇರಿ ಮೂಲಸೌಕರ್ಯ ಒದಗಿಸಲು ಬಿಬಿಎಂಪಿ ಆದೇಶಿಸಿತ್ತು.

ಬಿಬಿಎಂಪಿ, ಗುತ್ತಿಗೆದಾರರ ನಡುವೆ ವಾರ್
6,500 ಬೆಡ್ ಹಾಗೂ ಬಿಬಿಎಂಪಿ ನೀಡಿದ ಪಟ್ಟಿಯಂತೆ ನಾಲ್ವರು ಗುತ್ತಿಗೆದಾರರು ಸಲಕರಣೆ ತಂದು ಫಿಕ್ಸ್ ಮಾಡಿದ್ದರು. ಆದ್ರೆ ಬಾಡಿಗೆ ಹಣ ವಿಚಾರದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. 100 ದಿನಕ್ಕೆ 240 ಕೋಟಿ ರೂ. ಬಾಡಿಗೆ ನೀಡಲು‌ ಒಪ್ಪಂದ ಮಾಡಲಾಗಿತ್ತು. ಇದಕ್ಕೆ ಆಕ್ಷೇಪ ಕೇಳಿಬಂದ ಹಿನ್ನೆಲೆಯಲ್ಲಿ ಆರು ವಸ್ತುಗಳನ್ನು ಸರ್ಕಾರದಿಂದಲೇ ಖರೀದಿಸಲು ಸಿಎಂ ಬಿಎಸ್‌ವೈ ಸೂಚಿಸಿದ್ದರು. ಗುತ್ತಿಗೆದಾರರೇ ಹಾಕಿದ್ದ ವಸ್ತುಗಳನ್ನು ಖರೀದಿಸಲು ನಿರ್ಧರಿಸಲಾಗಿತ್ತು.

6,500 ಬೆಡ್‌ಗಳಿಗೆ ತಲಾ 6 ವಸ್ತುಗಳನ್ನು 4,800 ರೂ.ಗೆ ನೀಡುವಂತೆ ಗುತ್ತಿಗೆದಾರರಿಗೆ ಬಿಬಿಎಂಪಿ ಸೂಚಿಸಿತ್ತು. ಆದ್ರೆ 7,500 ರೂ. ನೀಡುವಂತೆ ಗುತ್ತಿಗೆದಾರರು ಪಟ್ಟು ಹಿಡಿದಿದ್ದಾರೆ. ಜೊತೆಗೆ ಉಳಿದ ಸೌಲಭ್ಯಗಳನ್ನು ದಿನಕ್ಕೆ 200 ರೂ.ನಂತೆ ಬಾಡಿಗೆಗೆ ನೀಡಲು ಗುತ್ತಿಗೆದಾರರಿಗೆ ಬಿಬಿಎಂಪಿ ತಿಳಿಸಿದೆ. ಆದರೆ ಈ ಬಾಡಿಗೆ ಹಣಕ್ಕೂ ಗುತ್ತಿಗೆದಾರರು ಒಪ್ಪುತ್ತಿಲ್ಲ. ಈ ಬಗ್ಗೆ ಸಿಎಂ, ಸಿಎಸ್‌ಗೆ ಗುತ್ತಿಗೆದಾರರು ಪತ್ರ ಬರೆದಿದ್ದಾರೆ. ಖರೀದಿ ದರ, ಬಾಡಿಗೆ ಹಣ ನಿಗದಿ ಅಂತಿಮವಾಗದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.

Published On - 10:20 am, Thu, 23 July 20