ಸೋಂಕಿತನ ಅಂತ್ಯಸಂಸ್ಕಾರ ಮಾಡದೆ.. ಮಾರ್ಗ ಮಧ್ಯೆಯೇ ಇಳಿದು ಎಸ್ಕೇಪ್ ಆದ್ರು

ರಾಯಚೂರು: ಕರುನಾಡಲ್ಲಿ ಕೊರೊನಾ ಕಾಲದಲ್ಲಿ ಮತ್ತೆ ಅಮಾನವೀಯತೆಯ ಅಟ್ಟಹಾಸ ಮುಂದುವರೆದಿದೆ. ರಾಜ್ಯದಲ್ಲಿ ‘ಸಂಸ್ಕಾರ’ ಅನ್ನೋದು ‘ಅಂತ್ಯ’ವಾಯ್ತಾ? ಎಂಬಂತಾಗಿದೆ. ರಾಯಚೂರಿನ ರಿಮ್ಸ್ ಆಸ್ಪತ್ರೆ ಸಿಬ್ಬಂದಿಯಿಂದ ಮತ್ತೊಮ್ಮೆ ಮಹಾ ಎಡವಟ್ಟು ನಡೆದಿದೆ. ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ 56 ವರ್ಷದ ವ್ಯಕ್ತಿಯ ಶವವನ್ನು ಅಂತ್ಯಕ್ರಿಯೆ ನಡೆಸದೆ, ಮಾರ್ಗಮಧ್ಯೆ ಸಿಬ್ಬಂದಿ ಪರಾರಿಯಾಗಿರುವ ಘಟನೆ ಲಿಂಗಸುಗೂರು ತಾಲೂಕಿನ ಆನೆಹೊಸೂರಿನಲ್ಲಿ ನಡೆದಿದೆ. ಹೌದು ಕೊರೊನಾ ಸೋಂಕಿಗೆ 56 ವರ್ಷದ ವ್ಯಕ್ತಿ ಬಲಿಯಾಗಿದ್ದರು. ಅವರ ಶವವನ್ನು ಅಂತ್ಯಕ್ರಿಯೆ ನಡೆಸದೆ ರಿಮ್ಸ್‌ ಆಸ್ಪತ್ರೆ ಸಿಬ್ಬಂದಿ ಪರಾರಿಯಾಗಿದ್ದಾರೆ. ಪಿಪಿಇ ಕಿಟ್ […]

ಸೋಂಕಿತನ ಅಂತ್ಯಸಂಸ್ಕಾರ ಮಾಡದೆ.. ಮಾರ್ಗ ಮಧ್ಯೆಯೇ ಇಳಿದು ಎಸ್ಕೇಪ್ ಆದ್ರು
Follow us
ಆಯೇಷಾ ಬಾನು
| Updated By:

Updated on:Jul 24, 2020 | 4:54 PM

ರಾಯಚೂರು: ಕರುನಾಡಲ್ಲಿ ಕೊರೊನಾ ಕಾಲದಲ್ಲಿ ಮತ್ತೆ ಅಮಾನವೀಯತೆಯ ಅಟ್ಟಹಾಸ ಮುಂದುವರೆದಿದೆ. ರಾಜ್ಯದಲ್ಲಿ ‘ಸಂಸ್ಕಾರ’ ಅನ್ನೋದು ‘ಅಂತ್ಯ’ವಾಯ್ತಾ? ಎಂಬಂತಾಗಿದೆ. ರಾಯಚೂರಿನ ರಿಮ್ಸ್ ಆಸ್ಪತ್ರೆ ಸಿಬ್ಬಂದಿಯಿಂದ ಮತ್ತೊಮ್ಮೆ ಮಹಾ ಎಡವಟ್ಟು ನಡೆದಿದೆ.

ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ 56 ವರ್ಷದ ವ್ಯಕ್ತಿಯ ಶವವನ್ನು ಅಂತ್ಯಕ್ರಿಯೆ ನಡೆಸದೆ, ಮಾರ್ಗಮಧ್ಯೆ ಸಿಬ್ಬಂದಿ ಪರಾರಿಯಾಗಿರುವ ಘಟನೆ ಲಿಂಗಸುಗೂರು ತಾಲೂಕಿನ ಆನೆಹೊಸೂರಿನಲ್ಲಿ ನಡೆದಿದೆ.

ಹೌದು ಕೊರೊನಾ ಸೋಂಕಿಗೆ 56 ವರ್ಷದ ವ್ಯಕ್ತಿ ಬಲಿಯಾಗಿದ್ದರು. ಅವರ ಶವವನ್ನು ಅಂತ್ಯಕ್ರಿಯೆ ನಡೆಸದೆ ರಿಮ್ಸ್‌ ಆಸ್ಪತ್ರೆ ಸಿಬ್ಬಂದಿ ಪರಾರಿಯಾಗಿದ್ದಾರೆ. ಪಿಪಿಇ ಕಿಟ್ ಧರಿಸಿ ಶ್ರದ್ಧಾಂಜಲಿ ವಾಹನದಲ್ಲಿ ಗ್ರಾಮಕ್ಕೆ ಶವ ತರುತ್ತಿದ್ದ ಸಿಬ್ಬಂದಿ ಮಾರ್ಗಮಧ್ಯೆ ಶ್ರದ್ಧಾಂಜಲಿ ವಾಹನ ನಿಲ್ಲಿಸಿ ಎಸ್ಕೇಪ್ ಆಗಿದ್ದಾರೆ. ಬಳಿಕ ಶ್ರದ್ಧಾಂಜಲಿ ವಾಹನ ಚಾಲಕ ಗ್ರಾಮಕ್ಕೆ ತೆರಳಿ ಸಂಬಂಧಿಕರಿಗೆ ಶವ ನೀಡಿದ್ದಾರೆ.

ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರ ಸಾಥ್   ಶ್ರದ್ಧಾಂಜಲಿ ವಾಹನದಲ್ಲಿದ್ದ ಒಂದು ಪಿಪಿಇ‌ ಕಿಟ್ ಮೃತ ಸೊಂಕಿತನ ಸಂಬಂಧಿಕರಿಗೆ ಕೊಟ್ಟು ಸ್ಥಳದಿಂದ ಚಾಲಕ ಕಾಲ್ಕಿತ್ತಿದ್ದಾನೆ. ಮೃತ ಸೋಂಕಿತನ ಸಂಬಂಧಿಕರಲ್ಲಿ ಒಬ್ಬ ಮಾತ್ರ ಪಿಪಿಇ ಕಿಟ್ ಧರಿಸಿ ಗ್ರಾಮಸ್ಥರ ಜತೆಗೂಡಿ ಶವ ಹೊತ್ತುಕೊಂಡು ಹೋಗಿ ಗುಂಡಿಗೆ ಹಾಕಿ ಅಂತ್ಯಸಂಸ್ಕಾರ ಮಾಡಿದ್ದಾರೆ.

ನಂತರ ಸ್ಥಳಕ್ಕೆ ಲಿಂಗಸಗೂರ ತಹಶೀಲ್ದಾರ ಮತ್ತು ಸ್ಥಳೀಯ ಪೊಲೀಸರು ಭೇಟಿ ನೀಡಿದ್ದಾರೆ. ಗ್ರಾಮಸ್ಥರೇ ಸೋಂಕಿತ ವ್ಯಕ್ತಿಯ ಶವ ಎತ್ತಿಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.

ರಾಯಚೂರು ಜಿಲ್ಲಾಡಳಿತಕ್ಕೆ ಇದು ನಾಚಿಕೆಗೇಡಿನ ಸಂಗತಿ. ಕೋವಿಡ್ ನಿಯಮದ ಪ್ರಕಾರ ಮೃತ ಸೋಂಕಿತನ ಅಂತ್ಯಸಂಸ್ಕಾರ ಮಾಡದೇ ರಿಮ್ಸ್ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ್ದಾರೆ.

Published On - 11:14 am, Thu, 23 July 20