AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BIEC ಕೊವಿಡ್ ಸೆಂಟರ್​ಗೆ ಆರಂಭದಲ್ಲೇ ವಿಘ್ನ: ಬಿಬಿಎಂಪಿ, ಗುತ್ತಿಗೆದಾರರ ಹಗ್ಗಜಗ್ಗಾಟ

ಬೆಂಗಳೂರು: ಬಿಐಇಸಿ ಕೊವಿಡ್ ಕೇರ್​ ಸೆಂಟರ್​ಗೆ ಆರಂಭದಲ್ಲೇ ವಿಘ್ನಗಳು ಎದುರಾಗಿವೆ. ಕೊವಿಡ್ ಕೇರ್ ಸೆಂಟರ್ ವಿಚಾರದಲ್ಲಿ ಬಿಬಿಎಂಪಿ, ಗುತ್ತಿಗೆದಾರರ ನಡುವೆ ಬಾಡಿಗೆ ಹಣಕ್ಕೆ ತಿಕ್ಕಾಟ ಜೋರಾಗಿದೆ. ಬಾಡಿಗೆ‌ ಹಣ, ವಸ್ತುಗಳ ಖರೀದಿ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಸರ್ಕಾರ ನಿಗದಿ ಮಾಡಿರುವ ಬಾಡಿಗೆ, ವಸ್ತುಗಳ ಖರೀದಿ ದರಕ್ಕೂ ಗುತ್ತಿಗೆದಾರರು ಒಪ್ಪುತ್ತಿಲ್ಲ. ಪ್ರತಿ ದಿನ 800 ರೂ. ಬಾಡಿಗೆಯಂತೆ 26 ವಸ್ತುಗಳು‌ ಸೇರಿ ಮೂಲಸೌಕರ್ಯ ಒದಗಿಸಲು ಬಿಬಿಎಂಪಿ ಆದೇಶಿಸಿತ್ತು. ಬಿಬಿಎಂಪಿ, ಗುತ್ತಿಗೆದಾರರ ನಡುವೆ ವಾರ್ 6,500 ಬೆಡ್ ಹಾಗೂ ಬಿಬಿಎಂಪಿ […]

BIEC ಕೊವಿಡ್ ಸೆಂಟರ್​ಗೆ ಆರಂಭದಲ್ಲೇ ವಿಘ್ನ: ಬಿಬಿಎಂಪಿ, ಗುತ್ತಿಗೆದಾರರ ಹಗ್ಗಜಗ್ಗಾಟ
ಆಯೇಷಾ ಬಾನು
ಆಯೇಷಾ ಬಾನು| Edited By: |

Updated on:Jul 24, 2020 | 4:46 PM

Share

ಬೆಂಗಳೂರು: ಬಿಐಇಸಿ ಕೊವಿಡ್ ಕೇರ್​ ಸೆಂಟರ್​ಗೆ ಆರಂಭದಲ್ಲೇ ವಿಘ್ನಗಳು ಎದುರಾಗಿವೆ. ಕೊವಿಡ್ ಕೇರ್ ಸೆಂಟರ್ ವಿಚಾರದಲ್ಲಿ ಬಿಬಿಎಂಪಿ, ಗುತ್ತಿಗೆದಾರರ ನಡುವೆ ಬಾಡಿಗೆ ಹಣಕ್ಕೆ ತಿಕ್ಕಾಟ ಜೋರಾಗಿದೆ.

ಬಾಡಿಗೆ‌ ಹಣ, ವಸ್ತುಗಳ ಖರೀದಿ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಸರ್ಕಾರ ನಿಗದಿ ಮಾಡಿರುವ ಬಾಡಿಗೆ, ವಸ್ತುಗಳ ಖರೀದಿ ದರಕ್ಕೂ ಗುತ್ತಿಗೆದಾರರು ಒಪ್ಪುತ್ತಿಲ್ಲ. ಪ್ರತಿ ದಿನ 800 ರೂ. ಬಾಡಿಗೆಯಂತೆ 26 ವಸ್ತುಗಳು‌ ಸೇರಿ ಮೂಲಸೌಕರ್ಯ ಒದಗಿಸಲು ಬಿಬಿಎಂಪಿ ಆದೇಶಿಸಿತ್ತು.

ಬಿಬಿಎಂಪಿ, ಗುತ್ತಿಗೆದಾರರ ನಡುವೆ ವಾರ್ 6,500 ಬೆಡ್ ಹಾಗೂ ಬಿಬಿಎಂಪಿ ನೀಡಿದ ಪಟ್ಟಿಯಂತೆ ನಾಲ್ವರು ಗುತ್ತಿಗೆದಾರರು ಸಲಕರಣೆ ತಂದು ಫಿಕ್ಸ್ ಮಾಡಿದ್ದರು. ಆದ್ರೆ ಬಾಡಿಗೆ ಹಣ ವಿಚಾರದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. 100 ದಿನಕ್ಕೆ 240 ಕೋಟಿ ರೂ. ಬಾಡಿಗೆ ನೀಡಲು‌ ಒಪ್ಪಂದ ಮಾಡಲಾಗಿತ್ತು. ಇದಕ್ಕೆ ಆಕ್ಷೇಪ ಕೇಳಿಬಂದ ಹಿನ್ನೆಲೆಯಲ್ಲಿ ಆರು ವಸ್ತುಗಳನ್ನು ಸರ್ಕಾರದಿಂದಲೇ ಖರೀದಿಸಲು ಸಿಎಂ ಬಿಎಸ್‌ವೈ ಸೂಚಿಸಿದ್ದರು. ಗುತ್ತಿಗೆದಾರರೇ ಹಾಕಿದ್ದ ವಸ್ತುಗಳನ್ನು ಖರೀದಿಸಲು ನಿರ್ಧರಿಸಲಾಗಿತ್ತು.

6,500 ಬೆಡ್‌ಗಳಿಗೆ ತಲಾ 6 ವಸ್ತುಗಳನ್ನು 4,800 ರೂ.ಗೆ ನೀಡುವಂತೆ ಗುತ್ತಿಗೆದಾರರಿಗೆ ಬಿಬಿಎಂಪಿ ಸೂಚಿಸಿತ್ತು. ಆದ್ರೆ 7,500 ರೂ. ನೀಡುವಂತೆ ಗುತ್ತಿಗೆದಾರರು ಪಟ್ಟು ಹಿಡಿದಿದ್ದಾರೆ. ಜೊತೆಗೆ ಉಳಿದ ಸೌಲಭ್ಯಗಳನ್ನು ದಿನಕ್ಕೆ 200 ರೂ.ನಂತೆ ಬಾಡಿಗೆಗೆ ನೀಡಲು ಗುತ್ತಿಗೆದಾರರಿಗೆ ಬಿಬಿಎಂಪಿ ತಿಳಿಸಿದೆ. ಆದರೆ ಈ ಬಾಡಿಗೆ ಹಣಕ್ಕೂ ಗುತ್ತಿಗೆದಾರರು ಒಪ್ಪುತ್ತಿಲ್ಲ. ಈ ಬಗ್ಗೆ ಸಿಎಂ, ಸಿಎಸ್‌ಗೆ ಗುತ್ತಿಗೆದಾರರು ಪತ್ರ ಬರೆದಿದ್ದಾರೆ. ಖರೀದಿ ದರ, ಬಾಡಿಗೆ ಹಣ ನಿಗದಿ ಅಂತಿಮವಾಗದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.

Published On - 10:20 am, Thu, 23 July 20

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!