ಸತತ 13ನೇ ಬಾರಿಗೆ ದುರ್ಗಾದೇವಿ ದೇವಸ್ಥಾನದ ಹುಂಡಿ ಹಣ ಕಳವು

ನೆಲಮಂಗಲ: ಲಾಕ್​ಡೌನ್ ಸಮಯದಲ್ಲೂ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ಕೆರೆ ಏರಿ ಮೇಲಿರುವ ದುರ್ಗಾದೇವಿ ದೇವಸ್ಥಾನದ ಹುಂಡಿ ಹಣವನ್ನ ಕಳ್ಳತನ ಮಾಡಿದ್ದಾರೆ. ದೇವಾಲಯದ ಹುಂಡಿಯಲ್ಲಿದ್ದ ಹಣವನ್ನು ಕದ್ದು ಹುಂಡಿಯನ್ನು ಕೆರೆಗೆ ಎಸೆದು ಕಳ್ಳರು ಪರಾರಿಯಾಗಿದ್ದಾರೆ. ಅಚ್ಚರಿ ಎಂದರೆ ಇದು ಸತತ 13ನೇ ಬಾರಿಗೆ ನಡೆದಿರುವ ಕಳ್ಳತನ. ಹುಂಡಿಯಲ್ಲಿ ಸುಮಾರು 1 ಲಕ್ಷ ಹಣವಿತ್ತು ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ […]

ಸತತ 13ನೇ ಬಾರಿಗೆ ದುರ್ಗಾದೇವಿ ದೇವಸ್ಥಾನದ ಹುಂಡಿ ಹಣ ಕಳವು

Updated on: Jun 05, 2020 | 3:14 PM

ನೆಲಮಂಗಲ: ಲಾಕ್​ಡೌನ್ ಸಮಯದಲ್ಲೂ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ಕೆರೆ ಏರಿ ಮೇಲಿರುವ ದುರ್ಗಾದೇವಿ ದೇವಸ್ಥಾನದ ಹುಂಡಿ ಹಣವನ್ನ ಕಳ್ಳತನ ಮಾಡಿದ್ದಾರೆ.

ದೇವಾಲಯದ ಹುಂಡಿಯಲ್ಲಿದ್ದ ಹಣವನ್ನು ಕದ್ದು ಹುಂಡಿಯನ್ನು ಕೆರೆಗೆ ಎಸೆದು ಕಳ್ಳರು ಪರಾರಿಯಾಗಿದ್ದಾರೆ. ಅಚ್ಚರಿ ಎಂದರೆ ಇದು ಸತತ 13ನೇ ಬಾರಿಗೆ ನಡೆದಿರುವ ಕಳ್ಳತನ. ಹುಂಡಿಯಲ್ಲಿ ಸುಮಾರು 1 ಲಕ್ಷ ಹಣವಿತ್ತು ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Published On - 9:22 am, Fri, 5 June 20