10 ದಿನದಲ್ಲಿ 141 ಸೋಂಕಿತರು ಗುಣಮುಖ: ವೈದ್ಯರ ಚಿಕಿತ್ಸೆ ಜೊತೆಗೆ ಬೆರಗಾಗುವ ಕಾರಣವೂ ಇದೆ!
ದಾವಣಗೆರೆ: ಈಗ ಜಗತ್ತಿನಲ್ಲಿ ಕೊರೊನಾ ಸೋಂಕಿಗೆ ಔಷಧಿ ಕಂಡು ಹಿಡಿದಿಲ್ಲ. ಇದಕ್ಕಾಗಿ ವೈದ್ಯ ಲೋಕ ಹಗಲು ರಾತ್ರಿ ಪರಿಶ್ರಮ ಪಡುತ್ತಿದೆ. ನಿತ್ಯ ಸಾವಿರಾರು ಜನ ಸಾವನ್ನಪ್ಪುತ್ತಿದ್ದಾರೆ. ಲಕ್ಷಾಂತರ ಜನರಲ್ಲಿ ಸೋಂಕು ಪತ್ತೆಯಾಗುತ್ತಿದೆ. ಇಡೀ ಜಗತ್ತೇ ತತ್ತರವಾಗುತ್ತಿದೆ. ಇದೇ ವಾತಾವರಣದಲ್ಲಿ ಸೋಂಕು ತಗುಲಿಸಿಕೊಂಡ ಲಕ್ಷಾಂತರ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆ ಹೋಗುತ್ತಿದ್ದಾರೆ. ನಿಜಕ್ಕೂ ಇದಕ್ಕೆ ಉತ್ತರ ಹುಡುಕುವುದೇ ಕಷ್ಟ. ಆದ್ರೆ ದಾವಣಗೆರೆ ಜಿಲ್ಲೆಯಲ್ಲಿ ಇಂತಹ ಪ್ರಶ್ನೆಗೆ ತಕ್ಕ ಮಟ್ಟಿನ ಹಾಗೂ ಸತ್ಯಕ್ಕೆ ಸಮೀಪ ಇರುವ ಉತ್ತರ ಸಿಕ್ಕಿದೆ. ದಾವಣಗೆರೆಯಲ್ಲಿ […]
ದಾವಣಗೆರೆ: ಈಗ ಜಗತ್ತಿನಲ್ಲಿ ಕೊರೊನಾ ಸೋಂಕಿಗೆ ಔಷಧಿ ಕಂಡು ಹಿಡಿದಿಲ್ಲ. ಇದಕ್ಕಾಗಿ ವೈದ್ಯ ಲೋಕ ಹಗಲು ರಾತ್ರಿ ಪರಿಶ್ರಮ ಪಡುತ್ತಿದೆ. ನಿತ್ಯ ಸಾವಿರಾರು ಜನ ಸಾವನ್ನಪ್ಪುತ್ತಿದ್ದಾರೆ. ಲಕ್ಷಾಂತರ ಜನರಲ್ಲಿ ಸೋಂಕು ಪತ್ತೆಯಾಗುತ್ತಿದೆ. ಇಡೀ ಜಗತ್ತೇ ತತ್ತರವಾಗುತ್ತಿದೆ.
ಇದೇ ವಾತಾವರಣದಲ್ಲಿ ಸೋಂಕು ತಗುಲಿಸಿಕೊಂಡ ಲಕ್ಷಾಂತರ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆ ಹೋಗುತ್ತಿದ್ದಾರೆ. ನಿಜಕ್ಕೂ ಇದಕ್ಕೆ ಉತ್ತರ ಹುಡುಕುವುದೇ ಕಷ್ಟ. ಆದ್ರೆ ದಾವಣಗೆರೆ ಜಿಲ್ಲೆಯಲ್ಲಿ ಇಂತಹ ಪ್ರಶ್ನೆಗೆ ತಕ್ಕ ಮಟ್ಟಿನ ಹಾಗೂ ಸತ್ಯಕ್ಕೆ ಸಮೀಪ ಇರುವ ಉತ್ತರ ಸಿಕ್ಕಿದೆ.
ದಾವಣಗೆರೆಯಲ್ಲಿ ಕೇವಲ ಹತ್ತು ದಿನಗಳಲ್ಲಿ ಬರೋಬರಿ 141 ಜನ ಜನರು ಗುಣಮುಖರಾಗಿ ಮನೆಗೆ ಹೋಗಿದ್ದಾರೆ. ಇವರಲ್ಲಿ 80 ವರ್ಷದ ವೃದ್ಧ ಹಾಗೂ ಎಂಟು ತಿಂಗಳ ಮಗು ಸಹ ಸೇರಿದ್ದಾರೆ. ಚಿಕಿತ್ಸೆಯ ಜೊತೆಗೆ ಸೋಂಕಿತರಿಗೆ ಅಗತ್ಯವಿರುವ ವಿಟಮಿನ್ಗಳ ಪೂರೈಕೆಗೆ ಆದ್ಯತೆ ನೀಡಲಾಗಿತ್ತು.
ಮೈಸೂರಿನ ಸಿಎಫ್ಟಿಆರ್ಐ ನಿಂದ ಮಿಟಮಿನ್ ಸಿ ಹಾಗೂ ಜಿಂಕ್ ಇರುವ ಮ್ಯಾಂಗೋ ಬಾರ್, ಗ್ರೀನ್ ಚಿಕ್ಕಿ ಹಾಗೂ ಸಮುದ್ರದ ಪಾಚಿಯಿಂದ ಸಿದ್ದ ಪಡಿಸಿದ ಕೆಲ ಪದಾರ್ಥಗಳನ್ನ ತರಿಸಿ ಕೊಟ್ಟಿದೆ. ಹೀಗಾಗಿ ನಿರೀಕ್ಷೆಗೂ ಮೀರಿ ಇಲ್ಲಿನ ಸೋಂಕಿತರು ಚೇತರಿಸಿಕೊಂಡರು ಅಂದ್ರೆ ತಪ್ಪಾಗಲಿಕ್ಕಿಲ್ಲ.
ನಿರಂತರವಾಗಿ ವೈದ್ಯರಿಂದ ಚಿಕಿತ್ಸೆ ಹಾಗೂ ಔಷಧಿ ನೀಡಲಾಗುತ್ತದೆ. ಇವುಗಳ ಜೊತೆಗೆ ಇಂತಹ ದೇಹಕ್ಕೆ ಅಗತ್ಯ ಇರುವ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಪದಾರ್ಥಗಳನ್ನ ಪೂರೈಕೆ ಮಾಡಿದ್ದು ಒಂದು ಉತ್ತಮ ಬೆಳವಣಿಗೆ ಎಂಬ ಮಾತುಗಳು ಕೇಳಿ ಬರುತ್ತಿವೆ.
Published On - 7:50 am, Fri, 5 June 20